Samantha And NagaChaitanya: ಡಿವೋರ್ಸ್ ಬಳಿಕ ಮದುವೆ ಸೀರೆ ವಾಪಸ್​ ಕೊಟ್ಟ ಸಮಂತಾ!

ನಟಿ ಸಮಂತಾ ವಿಚ್ಛೇದನದ ಬಳಿಕ ಪ್ರಮುಖ ವಸ್ತುವನ್ನು ಅಕ್ಕಿನೇನಿ ಕುಟುಂಬಕ್ಕೆ ಹಿಂದಿರುಗಿಸಿದ್ದಾರಂತೆ. ಹೌದು! ಸಮಂತಾ ಮದುವೆ ಸಮಯದಲ್ಲಿ ಉಟ್ಟಂತಹ ಸೀರೆಯನ್ನು ಅಕ್ಕಿನೇನಿ ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

Share this Video
  • FB
  • Linkdin
  • Whatsapp

ನಾಗಚೈತನ್ಯ (Naga Chaitanya) ಮತ್ತು ಸಮಂತಾ (Samantha) ದೂರವಾಗಿ ಹಲವು ತಿಂಗಳುಗಳೇ ಉರುಳಿವೆ. ಇಬ್ಬರೂ ತಮ್ಮ ಪಾಡಿಗೆ ತಾವು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ದಾಂಪತ್ಯದ ಹೊಸ ಹೊಸ ಮುಖಗಳು ಮಾತ್ರ ಅನಾವರಣಗೊಳ್ಳುತ್ತಲೇ ಇವೆ. ಇದೀಗ ಸಮಂತಾ ಬಗ್ಗೆ ಹೊಸ ಮಾಹಿತಿಯೊಂದು ಹರಿದಾಡಿದೆ. ಅವರು ವಿಚ್ಛೇದನದ (Divorce) ಬಳಿಕ ಪ್ರಮುಖ ವಸ್ತುವನ್ನು ಅಕ್ಕಿನೇನಿ ಕುಟುಂಬಕ್ಕೆ ಹಿಂದಿರುಗಿಸಿದ್ದಾರಂತೆ. ಹೌದು! ಸಮಂತಾ ಮದುವೆ ಸಮಯದಲ್ಲಿ ಉಟ್ಟಂತಹ ಸೀರೆಯನ್ನು (Wedding Saree) ಅಕ್ಕಿನೇನಿ ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

Samantha: ವಿಜಯ್​ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಸಮಂತಾ

ಮದುವೆಯಲ್ಲಿ ಸಮಂತಾ ಉಟ್ಟಂತಹ ಸೀರೆ ನಾಗ ಚೈತನ್ಯ ಅವರ ಅಜ್ಜಿಯ ಸೀರೆ ಆಗಿತ್ತು. ಮನೆಗೆ ಸೊಸೆಯಾಗಿ ಬರುವ ಹುಡುಗಿಗೆ ಈ ಸೀರೆ ಕೊಡಬೇಕು ಎಂಬುದು ಅಕ್ಕಿನೇನಿ ಕುಟುಂಬದ ಆಸೆ ಆಗಿತ್ತು. ಅಂತೆಯೇ ವಿವಾಹದ ದಿನ ಸಮಂತಾ ಅವರು ಈ ಸೀರೆಯನ್ನು ತೊಟ್ಟಿದ್ದರು. ಆ ಬಳಿಕ ಅದು ಸಮಂತಾ ಬಳಿಯೇ ಇತ್ತು. ಈ ಸೀರೆಯ ಬೆಲೆ ಬರೋಬ್ಬರಿ 1,14,999 ರೂಪಾಯಿ ಆಗಿತ್ತು. ಮುಖ್ಯವಾಗಿ ಸಮಂತಾ, ನಾಗಚೈತನ್ಯ ಮತ್ತು ಅವರ ಮನೆಗೆ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನು ಮರಳಿ ಕೊಡಲಿದ್ದಾರೆ ಎನ್ನಲಾಗಿದೆ. ಸದ್ಯ ಸಮಂತಾ 'ಶಾಕುಂತಲಂ' ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಸ್ಟಿಲ್ ಈಗಾಗಲೇ ಬಿಡುಗಡೆಯಾಗಿ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video