Samantha: ವಿಜಯ್​ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಸಮಂತಾ!

ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಸಮಂತಾ ಈಗ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಂತಿದೆ. ಇಂಥದ್ದೊಂದು ಗಾಸಿಪ್​ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. 
 

First Published Mar 7, 2022, 1:07 PM IST | Last Updated Mar 7, 2022, 1:07 PM IST

ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸೌತ್​ ಚಿತ್ರರಂಗದ ಖ್ಯಾತ ನಟಿ ಸಮಂತಾ (Samantha) ಒಂದರ ನಂತರ ಒಂದು ಚಿತ್ರ ಮಾಡುತ್ತಿದ್ದು, ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಸೂಪರ್‌ಸ್ಟಾರ್‌ಗಳಿಂದ ಹಿಡಿದು ಇತ್ತೀಚೆಗೆ ಬಂದ ಹೀರೊಗಳವರೆಗೂ ಸಮಂತಾ ಬೇಡಿಕೆ ನಟಿಯಾಗಿದ್ದಾರೆ. ಈಗ ಟಾಲಿವುಡ್‌ನಲ್ಲಿ (Tollywood) ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಸಮಂತಾ ಇದೀಗ ವಿಜಯ್ ದೇವರಕೊಂಡ (Vijay Devarakonda) ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಂತಿದೆ. ಇಂಥದ್ದೊಂದು ಗಾಸಿಪ್​ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. 

ಏನ್ರೀ ಸಮಂತಾ ಅಂಗಡಿ ಉದ್ಘಾಟನೆ ಮಾಡೋಕೆ ಇಷ್ಟೊಂದು ಹಣ ಕೇಳ್ತಾರಂತೆ!

ಹೌದು! ಮೊದಲ ಬಾರಿಗೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದ್ದು, ರೊಮ್ಯಾಂಟಿಕ್ ಬ್ಯಾಕ್‌ಗ್ರೌಂಡ್‌ನಲ್ಲಿ ವಿಭಿನ್ನ ಕಥೆಯಿರುವ ಈ ಸಿನಿಮಾವನ್ನು ಶಿವ (Shiva) ನಿರ್ಮಿಸುವ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವಾಗಿ ಈ ಕಥೆ ಕೇಳಿದ ಕೂಡಲೇ ಸಮಂತಾ ಹಾಗೂ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಚಿತ್ರದ ಹೆಸರು ಇನ್ನೂ ಖಚಿತಪಡಿಸಿಲ್ಲ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories