
ಪಾಕಿಗಳಿಗೆ ಭಯ ಹುಟ್ಟಿಸಿದ್ದೇಕೆ Salman Khan ಹೇಳಿಕೆ? ಇಂಡಿಯಾದಲ್ಲಿ ಹೀರೋ.. ಪಾಕ್ನಲ್ಲಿ ಟೆರೆರಿಸ್ಟ್!
ಭಾರತದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೆ ಪಕ್ಕದ ಪಾಕಿಸ್ತಾನದಲ್ಲಿ ಟೆರೆರಿಸ್ಟ್ ಪಟ್ಟ ನೀಡಲಾಗಿದೆ. ಬಲೂಚಿಸ್ತಾನ ಗೃಹ ಇಲಾಖೆ ಸಲ್ಲುಮಿಯಾನ ಟೆರೆರಿಸ್ಟ್ ಪಟ್ಟಿಗೆ ಸೇರಿಸಿದೆ. ಅಷ್ಟಕ್ಕೂ ಸಲ್ಮಾನ್ ಅದೇನು ಟೆರೆರಿಸ್ಟ್ ಆಕ್ಟಿವಿಟಿ ಮಾಡಿದ್ರು ಅಂತೀರಾ..?
ಭಾರತದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೆ ಪಕ್ಕದ ಪಾಕಿಸ್ತಾನದಲ್ಲಿ ಟೆರೆರಿಸ್ಟ್ ಪಟ್ಟ ನೀಡಲಾಗಿದೆ. ಬಲೂಚಿಸ್ತಾನ ಗೃಹ ಇಲಾಖೆ ಸಲ್ಲುಮಿಯಾನ ಟೆರೆರಿಸ್ಟ್ ಪಟ್ಟಿಗೆ ಸೇರಿಸಿದೆ. ಅಷ್ಟಕ್ಕೂ ಸಲ್ಮಾನ್ ಅದೇನು ಟೆರೆರಿಸ್ಟ್ ಆಕ್ಟಿವಿಟಿ ಮಾಡಿದ್ರು ಅಂತೀರಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ಯೆಸ್ ಬಾಲಿವುಡ್ ಟೈಗರ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೆ ಪಕ್ಕದ ಪಾಕಿಸ್ತಾನ ಭಯೋತ್ಪಾದಕನ ಪಟ್ಟ ಕಟ್ಟಿದೆ. ನಿಜ ಹೇಳಬೇಕು ಅಂದ್ರೆ ಸಲ್ಮಾನ್ ಖಾನ್ಗೆ ಪಾಕಿಸ್ತಾನದಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಲ್ಲುಮಿಯಾನ ಸಿನಿಮಾ ಅಲ್ಲೂ ಹಿಟ್ ಆಗುತ್ವೆ. ಸಿನಿಮಾದಲ್ಲಿ ಹಾಡು ಹಾಡಿಕೊಂಡು, ಫೈಟ್ ಮಾಡಿಕೊಂಡು ಮನರಂಜಿಸುವ ಈ ನಟ ಅಂಥದ್ದೇನು ಭಯೋತ್ಪಾದಕ ಕೃತ್ಯ ಮಾಡಿದ್ರು..? ಇವರಿಗ್ಯಾಕೆ ಟೆರೆರಿಸ್ಟ್ ಪಟ್ಟ ಅಂತೀರಾ. ಅಸಲಿಗೆ ಇತ್ತೀಚಿಗೆ ದುಬೈನಲ್ಲಿ ಸಲ್ಮಾನ್ ಆಡಿದ ಒಂದು ಮಾತೇ ಈ ಘಟನೆಗೆ ಕಾರಣ.
ಇತ್ತೀಚಿಗೆ ದುಬೈನ ರಿಯಾದ್ನಲ್ಲಿ ಜಾಯ್ ಫೋರಮ್ 2025ನಲ್ಲಿ ಭಾಗಿಯಾಗಿದ್ದ ಸಲ್ಮಾನ್, ದುಬೈನಲ್ಲಿ ಹಿಂದಿ ಸಿನಿಮಾಗಳಿಗಿರುವ ಮಾರ್ಕೆಟ್ ಬಗ್ಗೆ ಮಾತನಾಡಿದ್ರು. ಇಲ್ಲಿನ ಜನ ಹಿಂದಿ ಸಿನಿಮಾ ಇಷ್ಟಪಡ್ತಾರೆ. ಇಲ್ಲಿ ಅಫ್ಘಾನಿಸ್ತಾನ, ಬಲೂಚಿಸ್ತಾನ, ಪಾಕಿಸ್ತಾನದ ಜನ ನೆಲೆಸಿದ್ದಾರೆ ಅಂದಿದ್ರು. ಬಲೂಚಿಸ್ತಾನ ಸದ್ಯ ಪಾಕಿಸ್ತಾನದ ಭಾಗವಾಗಿದೆ. ಆದ್ರೆ ಅಲ್ಲಿನ ಜನ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಮಾಡ್ತಾ ಇದ್ದಾರೆ. ಈ ಜನ ತಮ್ಮ ಬಲೂಚಿಸ್ತಾನವನ್ನ ಪ್ರತ್ಯೇಕ ರಾಷ್ಟ್ರದಂತೆ ಕರೆದಿದ್ದಕ್ಕೆ ಸಲ್ಮಾನ್ಗೆ ಧನ್ಯವಾದ ಹೇಳಿದ್ರು. ಆದರೆ ಇದರಿಂದ ಗರಂ ಆಗಿರೋ ಪಾಕ್ ಸರ್ಕಾರ ಭಯೋತ್ಪಾದಕ ಕಾಯ್ದೆಯ 4ನೇ ಶೆಡ್ಯೂಲ್ ಅನುಸಾರ ಸಲ್ಮಾನ್ ನ ಭಯೋತ್ಪಾದಕ ಪಟ್ಟಿಗೆ ಸೇರಿಸಿದೆ. ಸಲ್ಮಾನ್ ಅದೆಷ್ಟೋ ಸಿನಿಮಾಗಳಲ್ಲಿ ಭಾರತೀಯ ಯೋಧನಾಗಿ, ರಾ ಏಜೆಂಟ್ ಆಗಿ ಪಾಕಿಸ್ತಾನಿಯರಿಗೆ ಬುದ್ದಿ ಕಲಿಸಿದ್ದಾರೆ. ಈಗ ರಿಯಲ್ ಆಗೇ ಒಂದೇ ಒಂದು ಸ್ಟೇಟ್ಮೆಂಟ್ ಮೂಲಕ ಪಾಕ್ಗೆ ಭಯ ಹುಟ್ಟಿಸಿದ್ದಾರೆ. ಅಂತೆಯೇ ಪಾಕ್ ಸಲ್ಲುನ ಭಯೋತ್ಪಾದಕ ಅಂತ ಘೋಷಣೆ ಮಾಡಿದೆ.