‘ಆಕಾಶ ಗಡಿಯ ದಾಟಿ’ ಗೆಳೆತನ ಸಂಭ್ರಮಿಸುವ ‘ಸಲಾರ್’ ಸಾಂಗ್!

ಸಲಾರ್..ಇದು ಮಾಸ್ ಸಿನಿಮಾ ಮಾತ್ರವಲ್ಲ. ಫ್ರೆಂಡ್ಶಿಪ್ಅನ್ನ ಸಂಭ್ರಮಿಸೋ ಸಿನಿಮಾ ಕೂಡ. ಈ ಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಬೆಸ್ಟ್ ಫ್ರೆಂಡ್ಸ್. ಈ ಸ್ನೇಹಿತರ ಸ್ನೇಹ ಸಾರುವ ಸಲಾರ್ ಸಾಂಗ್ ರಿಲೀಸ್ ಆಗಿದೆ.

First Published Dec 15, 2023, 10:16 AM IST | Last Updated Dec 15, 2023, 10:15 AM IST


ಸಲಾರ್‌ನಲ್ಲಿ ಆಕಾಶ ಗಡಿಯ ದಾಟಿ ಗೆಳೆತವನ್ನ ಸಂಭ್ರಮಿಸೋ ಹಾಡು ಬಂದಿದೆ. ಈ ಹಾಡಿನಲ್ಲಿ ಇಬ್ಬರು ಸ್ನೇಹಿತರ ನಡುವಿನ ಬಾಂಧವ್ಯವನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್(Ravi Basrur). ಸಾಲಾರ್(Salaar) ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಕನ್ನಡ, ಹಿಂದಿ, ತೆಲುಗು, ಮಲೆಯಾಳಂ ಹಾಗು ತಮಿಳಿನಲ್ಲಿ ಸಾಲಾರ್ ಸ್ನೇಹದ ಸಾಂಗ್(Friendship Song) ಹೊರ ಬಂದಿದೆ. ಕನ್ನಡದಲ್ಲಿ ವಿಜಯಲಕ್ಷ್ಮಿ ಮೆಟ್ಟಿನಹೊಳೆ ಹಾಡು ಹಾಡಿದ್ದರೇ, ಕಿನ್ನಲ್ ರಾಜ್ ಸಾಹಿತ್ಯ ನೀಡಿದ್ದಾರೆ. ಟ್ರೈಲರ್‌ನಲ್ಲಿ ನೋಡಿದಂತೆ ಇದು ಸ್ನೇಹ ಮತ್ತು ಸೇಡಿನ ಕಥೆ. ಇಲ್ಲಿ ಪೃಥ್ವಿರಾಜ್ ಸುಕುಮಾರನ್‌ಗಾಗಿ ಒನ್ ಮ್ಯಾನ್ ಆರ್ಮಿಯಂತೆ ನಿಲ್ತಾರೆ ಪ್ರಭಾಸ್. ಹಾಡಿನಲ್ಲೂ ಅದೇ ಛಾಯೆ ಇದೆ. ಕೆಜಿಎಫ್‌ನಲ್ಲಿ ತಾಯಿ ಮಗನ ನಡುವಿನ ಬಾಂಧವ್ಯವನ್ನು ಕಣ್ಣೀಗೆ ಕಟ್ಟುವಂತೆ ಮ್ಯೂಸಿಕ್ ಮೂಲಕ ಕೊಟ್ಟಿದ್ದ ರವಿ ಬಸ್ರೂರ್, ಸಲಾರ್‌ನಲ್ಲಿ ಸ್ನೇಹವನ್ನು ಆರಾಧಿಸುವಂತೆ ಮಾಡಿದ್ದಾರೆ. ಡಾರ್ಲಿಂಗ್ ಪ್ರಭಾಸ್ರ(Darling Prabhas) ಸಲಾರ್ ಸಿನಿಮಾ ಈಗ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಅದರಲ್ಲೂ ಸೌತ್ ಸಿನಿಮಾ ರಂಗದ ಟಾಕ್ ಆಫ್ ದಿ ಟೌಟ್. ಈ ಸಿನಿಮಾದ ಈ ಟ್ರೈಲರ್ ನೋಡಿರೋ ಪ್ರೇಕ್ಷಕರು ಈ ಭಾರಿ ಪ್ರಭಾಸ್ ಗೆಲ್ಲೋದು ಕನ್ಫರ್ಮ್ ಅಂದಿದ್ರು. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಭಾಗ 1ರಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಜತೆ ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಟಿನ್ನು ಆನಂದ್ ಸೇರಿದಂತೆ ಕೆಜಿಎಫ್ ಕಲಾವಿಧರು ನಟಿಸಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಸಲಾರ್ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.

ಇದನ್ನೂ ವೀಕ್ಷಿಸಿ:  ಯಶ್ ಬಳಗದಿಂದ ಬಂತು ಮತ್ತೊಂದು ಬಿಗ್ ನ್ಯೂಸ್..! ರಾಕಿ ನಟಿಸುತ್ತಿರೋದು ಒಂದಲ್ಲ ಎರಡು ಸಿನಿಮಾದಲ್ಲಿ..!