ಯಶ್ ಬಳಗದಿಂದ ಬಂತು ಮತ್ತೊಂದು ಬಿಗ್ ನ್ಯೂಸ್..! ರಾಕಿ ನಟಿಸುತ್ತಿರೋದು ಒಂದಲ್ಲ ಎರಡು ಸಿನಿಮಾದಲ್ಲಿ..!
ಕೆಜಿಎಫ್ ಚಾಪ್ಟರ್ 2 ಆದ್ಮೇಲೆ ಯಶ್ ಯಾವ್ ಸಿನಿಮಾ ಬಂದಿಲ್ಲ. ಬರೋಬ್ಬರಿ ಒಂದು ವರ್ಷ ಎಂಟು ತಿಂಗಳು ಯಶ್‌ರನ್ನ ಬೆಳ್ಳಿತೆರೆ ಮೇಲೆ ನೋಡಿಲ್ಲ. ಹೊಸ ಸಿನಿಮಾದ ಗುಟ್ಟು ಸಿಕ್ಕಿರಲಿಲ್ಲ. ಬಟ್ ಯಶ್ ಡಿಸೆಂಬರ್ 8ಕ್ಕೆ ಕೊಟ್ಟ ಸರ್ಪ್ರೈಸ್ ಇಡೀ ವರ್ಲ್ಡ್ ವೈಡ್ ಟಾಕ್ ಆಯ್ತು. ರಾಕಿ ಟಾಕ್ಸಿಕ್ ಸಿನಿಮಾ ಅನೌನ್ಸ್ ಮಾಡಿದ್ರು.
ಯಶ್ 19ನೇ ಸಿನಿಮಾ ಟಾಕ್ಸಿಕ್ ಟೈಟಲ್ ರಿವೀಲ್ ಆದ್ಮೇಲೆ ರಾಕಿ ಆ ಸಿನಿಮಾದಲ್ಲೇ ಕಂಪ್ಲೀಟ್ ಬ್ಯುಸಿ ಆಗ್ತಾರೆ. ಯಾಕಂದ್ರೆ ಈ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್(KVN Production) ಜೊತೆ ಯಶ್ ಕೂಡ ಬಂಡವಾಳ ಹಾಕಿದ್ದಾರೆ. ಆದ್ರೆ ಅಟ್ ದಿ ಟೈಂ ಯಶ್ ಬಗ್ಗೆ ಯಶ್ ಬಳಗದಿಂದಲೇ ಮತ್ತೊಂದು ಬಿಗ್ ನ್ಯೂಸ್ ಲೀಕ್ ಆಗಿದೆ. ಅದೇ ರಾಕಿ ನಟಿಸುತ್ತಿರೋದು ಬರೀ ಟಾಕ್ಸಿಕ್ ಒಂದೇ ಸಿನಿಮಾ ಅಲ್ಲ, ಇದರ ಜೊತೆಗೆ ಮತ್ತೊಂದು ಮೂವಿ ಕೂಡ ಇದೆ ಅನ್ನೋ ಎಕ್ಸೈಟಿಂಗ್ ವಿಚಾರ. ನ್ಯಾಷನಲ್ ಸ್ಟಾರ್ ಯಶ್ ಟಾಕ್ಸಿಕ್‌ನಲ್ಲಿ ಗೋವಾ ಡ್ರಗ್ ಮಾಫಿಯಾದ ಕಥೆ ಹೇಳ್ತಾರೆ. ಇದರ ಶೂಟಿಂಗ್ ಆಗ್ಲೆ ಶುರುವಾಗಿತ್ತು ಈಗ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿದ್ದಾರೆ ಯಶ್. ಜನವರಿಯಿಂದ ಟಾಕ್ಸಿಕ್ ಚಿತ್ರೀಕರಣ(Toxic movie) ಫಾರಿನ್‌ನಲ್ಲಿ ಮತ್ತೆ ಶುರುವಾಗುತ್ತೆ. ಆದ್ರೆ ಯಶ್ ಇದೊಂದೇ ಸಿನಿಮಾ ಶೂಟಿಂಗ್ ಮಾಡಲ್ಲ. ರಾಕಿ ಮತ್ತೊಂದು ಮೂವಿಯಲ್ಲೂ ನಟಿಸಬೇಕು. ಅದೇ ಹಾಲಿವುಡ್ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾ. ಯಶ್ ಬಾಲಿವುಡ್‌ನಲ್ಲಿ(Bollywood) ಸಿದ್ಧವಾಗ್ತಿರೋ ಪ್ಯಾನ್ ವರ್ಲ್ಡ್ ಸಿನಿಮಾ ರಾಮಾಯಣದಲ್ಲಿ(Ramayana) ನಟಿಸುತ್ತಾರೆ ಅಂತ ಹಲವು ತಿಂಗಳುಗಳಿಂದ ಸುದ್ದಿ ಹಬ್ಬಿದೆ. ಆದ್ರೆ ಅದು ಪಕ್ಕಾ ಆಗಿಲ್ಲ. ಬಟ್ ಈಗ ರಾಕಿ ರಾಮಾಯಣದಲ್ಲಿ ರಾವಣ ಆಗ್ತಾರೆ ಅನ್ನೋ ಸುದ್ದಿ ಯಶ್ ಆಪ್ತ ಬಳಗದಿಂದಲೇ ಲೀಕ್ ಆಗಿದೆ. ಆ ಸಿನಿಮಾದ ಚಿತ್ರೀಕರಣ 2024ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಿಂದ ಆರಂಭವಾಗಲಿದೆಯಂತೆ. ನಿತಿನ್ ತಿವಾರಿ ನಿರ್ದೇಶನದಲ್ಲಿ ರಾಮಾಯಣ ಸಿನಿಮಾ ಸಿದ್ಧವಾಗುತ್ತಿದ್ದು, ಟಾಕ್ಸಿಕ್ ಶೂಟಿಂಗ್ ಗ್ಯಾಪ್ನಲ್ಲಿ ರಾಮಾಯಣದ ರಾವಣನ ಅವತಾರನ್ನೂ ತಾಳುತ್ತಾರಂತೆ. ಹಾಲಿವುಡ್‌ನ ಡಿಎನ್ಇಜಿ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕ್ತಿರೋ ರಾಮಾಯಣ ಸಿನಿಮಾದಲ್ಲಿ ರಣ್ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಸಾಯಿ ಪಲ್ಲವಿ, ಸೀತಾಮಾತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ರದ್ದು ರಾವಣನ ಪಾತ್ರ. ಈ ಚಿತ್ರಕ್ಕಾಗಿ ಎಲ್ಲರ ಲುಕ್ ಟೆಸ್ಟ್ 3ಡಿಯಲ್ಲಾಗಿದೆ. ಈ ರಾಮಾಯಣ ಎರಡು ಭಾಗದಲ್ಲಿ ಬರಲಿದ್ದು, ಮೊದಲ ಭಾಗದಲ್ಲಿ ಯಶ್ರ ಪಾತ್ರ ಕಡಿಮೆ ಕಾಣಿಸಿಕೊಳ್ಳಲಿದೆ. ಎರಡನೇ ಭಾಗದಲ್ಲಿ ಯಶ್ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇದೆ.
ಇದನ್ನೂ ವೀಕ್ಷಿಸಿ: 310 ಕೋಟಿ ಆದಾಯ ಬಂದರೂ ಅಯ್ಯಪ್ಪನ ಸನ್ನಿಧಿ ಅವ್ಯವಸ್ಥೆ ಆಗರ: ಶಬರಿಮಲೆಯಲ್ಲಿ ನೂಕುನುಗ್ಗಲು, ಪ್ರತಿಭಟನೆ