Salaar : ಮೂರೇ ದಿನಕ್ಕೆ 400 ಕೋಟಿ ಬಾಚಿದ ‘ಸಲಾರ್’? ಹಿಂದಿ, ತೆಲುಗಿನಲ್ಲಿ ಸಖತ್ ಕಲೆಕ್ಷನ್ !
ಎರಡನೇ ದಿನಕ್ಕಿಂತ ಮೂರನೇ ದಿನ ಸಲಾರ್ ಸಿನಿಮಾ ಕಲೆಕ್ಷನ್ ಮಾಡಿದೆ. ಮೂರು ದಿನಗಳಲ್ಲಿ ವಿಶ್ವದಾದ್ಯಂತ 400 ಕೋಟಿ ರೂಪಾಯಿಗಳಿಸಿದೆ.
ನಟ ಪ್ರಭಾಸ್ (Prabhas) ಅಭಿನಯದ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel)ನಿರ್ದೇಶನದ 'ಸಲಾರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುತ್ತಿದೆ. ಡಿಸೆಂಬರ್ 22ರಂದು ತೆರೆ ಕಂಡ ಚಿತ್ರ ಉತ್ತಮ ಕಲೆಕ್ಷನ್ನೊಂದಿಗೆ ಪ್ರದರ್ಶನ ಮುಂದುವರೆಸಿದೆ. ಅಲ್ಲದೇ ಮೂರೇ ದಿನಕ್ಕೆ ಈ ಸಿನಿಮಾ ಸುಮಾರು 400 ಕೋಟಿಯಷ್ಟು ಕಲೆಕ್ಷನ್ ಮಾಡಿದೆಯಂತೆ. ಒಟ್ಟಿನಲ್ಲಿ ಈ ಸಿನಿಮಾ ಹೊಂಬಾಳೆ ಫಿಲ್ಮ್ಸ್‌ಗೆ (Hombale Films) ಲಕ್‌ನನ್ನೇ ತಂದು ಕೊಟ್ಟಿದೆ ಎಂದು ಹೇಳಬಹುದು. ತೆಲುಗು, ತಮಿಳು, ಹಿಂದಿಯವರು ಎಲ್ಲಾರೂ ಈ ಸಿನಿಮಾವನ್ನು ಮೆಚ್ಚಿಕೊಂಡ್ರು, ಆದ್ರೆ ಕನ್ನಡಿಗರು ಮಾತ್ರ ನೆಗೆಟಿವ್ ಆಗೆ ಮಾತನಾಡಿದ್ದಾರೆ. ಮೊದಲ ದಿನ ಅತಿ ಹೆಚ್ಚುಗಳಿಕೆ ಕಂಡ 2023ರ ಭಾರತೀಯ ಸಿನಿಮಾ ಇದಾಗಿದೆ.
ಇದನ್ನೂ ವೀಕ್ಷಿಸಿ: Shivaraj Kumar: ಕೆಸಿಸಿ ಕ್ರಿಕೆಟ್ ಮೈದಾನದಲ್ಲಿ ಟಗರು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ಶಿವಣ್ಣ! ವಿಡಿಯೋ ವೈರಲ್