Shivaraj Kumar: ಕೆಸಿಸಿ ಕ್ರಿಕೆಟ್ ಮೈದಾನದಲ್ಲಿ ಟಗರು ಹಾಡಿಗೆ ಮಸ್ತ್‌ ಡ್ಯಾನ್ಸ್‌ ಮಾಡಿದ ಶಿವಣ್ಣ! ವಿಡಿಯೋ ವೈರಲ್‌

ಎನರ್ಜಿಯ ಬ್ರ್ಯಾಂಡ್ ಅಂಬಾಸಿಡರ್ ಶಿವಣ್ಣ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳ ಜೋಷ್‌ನನ್ನು ಡಬಲ್ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ಕನ್ನಡ ಚಲನಚಿತ್ರ ಕಪ್ ನಡೆಯುತ್ತಿದೆ. ಶಿವಣ್ಣ ನಾಯಕತ್ವದ ಟೀಮ್ ವಿನ್ನಾದ ಸಂದರ್ಭದಲ್ಲಿ ಟಗರು ಹಾಡು ಕ್ರೀಡಾಂಗಣದಲ್ಲಿ ಪ್ಲೇ ಆಗುತ್ತಿದ್ದಂತೆ ಎನರ್ಜಿಯ ಬ್ರ್ಯಾಂಡ್ ಅಂಬಾಸಿಡರ್ ಶಿವಣ್ಣ(Shivaraj kumar) ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳ(Fans) ಜೋಷ್‌ನನ್ನು ಡಬಲ್ ಮಾಡಿದ್ದಾರೆ. ಶಿವಣ್ಣ ಎನರ್ಜಿಟಿಕ್ ಡಾನ್ಸ್ ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆದರು. ಇನ್ನೂ ಸ್ಯಾಂಡಲ್‌ವುಡ್(Sandalwood) ನಟಿ ಪೂಜಾ ಗಾಂಧಿ ದಂಪತಿ ಉಡುಪಿಗೆ ಆಗಮಿಸಿದ್ದಾರೆ. ಪತಿ ವಿಜಯ್ ಘೋರ್ಪಡೆ ಜೊತೆ ನಟಿ ಪೂಜಾ ಗಾಂಧಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮದುವೆ ಆದ ನಂತರ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಪೂಜಾ ಗಾಂಧಿ ದಂಪತಿ, ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದ್ದಾರೆ. ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿದ್ದು, ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕಾರ ಮಾಡಿದ್ದಾರೆ. ಶ್ರೀಕೃಷ್ಣಮಠ ಮತ್ತು ಕಾಣಿಯೂರು ಮಠ ನವ ದಂಪತಿಯನ್ನು ಗೌರವಿಸಿದೆ.

ಇದನ್ನೂ ವೀಕ್ಷಿಸಿ: ಬಿಗ್‌ಬಾಸ್‌ ಮನೆಯಲ್ಲಿ ಹಾಡು-ಕುಣಿತ..ಡ್ರೋನ್-ವರ್ತೂರು ಸಖತ್‌ ಸ್ಟೆಪ್‌ !

Related Video