Asianet Suvarna News Asianet Suvarna News

ಬಾಲಿವುಡ್‌ಗೆ ಹಾರಲಿದ್ದಾರಾ ರಾಕಿಂಗ್ ಸ್ಟಾರ್?: ಯಶ್‌ಗೆ 'ರಾವಣ' ಪಾತ್ರದ ಆಫರ್?

ಬಿಟೌನ್‌ನಲ್ಲಿ 'ರಾಮಾಯಣ'ವನ್ನು ತೆರೆ ಮೇಲೆ ತರುವ ಪ್ರಯತ್ನ ನಡೆದಿದ್ದು, 'ರಾವಣ' ಪಾತ್ರಕ್ಕೆ ರಾಕಿಂಗ್ ಸ್ಟಾರ್ ಯಶ್'ಗೆ  ಆಫರ್ ಬಂದಿದೆ ಎನ್ನಲಾಗಿದೆ.
 

ಬಾಲಿವುಡ್'ನಲ್ಲಿ ರಾಮಾಯಣವನ್ನು ತೆರೆ ಮೇಲೆ ತರುವ ಪ್ರಯತ್ನದ ಸುದ್ದಿ ಕಳೆದ ಒಂದು ವರ್ಷದಿಂದ ಇದೆ. 'ದಂಗಲ್' ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ ನಿರ್ಮಾಪಕ ಮಧು ಮಂಟೇನಾ ಜೊತೆ ಸೇರಿ 'ರಾಮಾಯಣ' ಕಥೆಯನ್ನು ಬೆಳ್ಳಿ ಪರದೆ ಮೇಲೆ ತರೋದಕ್ಕೆ ತಯಾರಿ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮನಾಗಿ ನಟಿಸಲು ರಣಬೀರ್ ಕಪೂರ್ ಮತ್ತು ರಾವಣನ ರೋಲ್'ನಲ್ಲಿ ಹೃತಿಕ್ ರೋಷನ್ ಅಭಿನಯಿಸಲಿ ಅಂತ ನಿರ್ಮಾಪಕರು ಮಾತುಕತೆ ಮಾಡಿದ್ರು. ಈಗ ಲೆಟೆಸ್ಟ್ ಏನಪ್ಪಾ ಅಂದ್ರೆ, ರಾವಣನ ಪಾತ್ರಧಾರಿಯಾಗಿ ನಟಿಸಲು ರಾಕಿಂಗ್ ಸ್ಟಾರ್ ಯಶ್'ಗೆ ಅಪ್ರೋಚ್ ಮಾಡಲಾಗಿದೆಯಂತೆ. ಆದ್ರೆ ಯಶ್ ರಾವಣನ ರೋಲ್ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ ಎನ್ನಲಾಗುತ್ತಿದೆ.

Video Top Stories