Asianet Suvarna News Asianet Suvarna News

ಅನುಮತಿ ಇಲ್ಲದೆ ರಜನಿಕಾಂತ್ ಹೆಸರು ಬಳಸುವಂತಿಲ್ಲ: ಆದೇಶ ಹೊರಡಿಸಿದ ಸೂಪರ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೆಸರನ್ನು, ಅನುಮತಿ ಇಲ್ಲದೆ ಇನ್ಮುಂದೆ ಯಾರೂ ಬಳಸುವ ಹಾಗಿಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ತಮ್ಮ ಬ್ರ್ಯಾಂಡ್'ಗೆ ಅಂಬಾಸಿಡರ್ ಮಾಡಿಕೊಳ್ಳೋಕೆ ಹಲವು ಪ್ರಾಡೆಕ್ಟ್'ಗಳು ಅವರ ಹಿಂದೆ ಬಿದ್ದಿವೆ. ಆದ್ರೆ ಇನ್ನು ಕೆಲವರು ಸೂಪರ್ ಸ್ಟಾರ್ ಅನುಮತಿ ಪಡೆಯದೇ ಅವರಿಗೆ ಗೊತ್ತಾಗದ ಹಾಗೆ ಹಲವು ಉತ್ಪನ್ನಗಳಲ್ಲಿ ರಜನಿಕಾಂತ್ ಸ್ಟೈಲ್, ಹೆಸರು, ವ್ಯಂಗ್ಯಚಿತ್ರ, ಭಾವಚಿತ್ರ, ಧ್ವನಿಯನ್ನ ಗ್ರಾಫಿಕ್ಸ್ ಮೂಲಕ ಬಳಸಿಕೊಳ್ಳುತ್ತಿದ್ದಾರೆ. ಆದ್ರೆ ರಜನಿಕಾಂತ್ ಅವರ ಹೆಸರು, ಧ್ವನಿ, ಫೋಟೋಗಳನ್ನು ಕಮರ್ಷಿಯಲಿ ಬಳಸಿಕೊಳ್ಳುವ ಅಧಿಕಾರ ರಜನಿಕಾಂತ್ ಅವರಿಗೆ ಮಾತ್ರ ಇದೆ. ಹೀಗಾಗಿ ನನ್ನ ಅನುಮತಿ ಇಲ್ಲದೇ ನನ್ನ ಯಾವುದೇ ಐಡೆಂಟಿಟಿಯನ್ನು ಬಳಸಿಕೊಳ್ಳಬೇಡಿ. ಬಳಸಿಕೊಂಡ್ರೆ ಸಿವಿಲ್ ಮತ್ತು ಕ್ರಿಮಿನಲ್ ಕೇಸ್ ಹಾಕುತ್ತೇವೆ ಅಂತ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ವಕೀಲ ಎಸ್. ಇಳಂಭಾರತಿ ಅವರ ಮೂಲಕ ಸಾರ್ವಜನಿಕ ನೋಟೀಸ್ ಹೊರಡಿಸಿದ್ದಾರೆ.

Video Top Stories