ನಾನು ರಾತ್ರೋರಾತ್ರಿ ಸ್ಟಾರ್ ಆಗಿಲ್ಲ; ಗರಂ ಆದ ರಶ್ಮಿಕಾ

ರಶ್ಮಿಕಾ ನಾನು ರಾತ್ರೋರಾತ್ರಿ ಸ್ಟಾರ್ ಆದ ನಟಿಯಲ್ಲ ಎಂದು ಗರಂ ಆಗಿದ್ದಾರೆ. ಹೌದು, ನಾನು ರಾತ್ರೋರಾತ್ರಿ ಸ್ಟಾರ್ ಆಗಿಲ್ಲ, ನಾನು ಸ್ಟಾರ್ ಆಗಲು ಎಷ್ಟೆಲ್ಲ ಕಷ್ಟಪಟ್ಟಿದ್ದೀನಿ ಗೊತ್ತಾ ಎಂದು ಎಂದಿದ್ದಾರೆ. ಇದಕ್ಕೆ ಕಾರಣ ಟ್ರೋಲ್‌. ರಾತ್ರೋರಾತ್ರಿ ಸ್ಟಾರ್ ಆದರೆ ಹೀಗೆ ಆಡೋದು ಎಂದು ಮಾಡಿದ್ದ ಟ್ರೋಲ್‌ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

Share this Video
  • FB
  • Linkdin
  • Whatsapp

ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಎಲ್ಲಾ ಗೊತ್ತಿರುವ ವಿಚಾರ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಖ್ಯಾತಿಗಳಿಸಿದ ರಶ್ಮಿಕಾ ಬಳಿಕ ಟಾಲಿವುಡ್ ಗೆ ಹಾರಿದರು. ಅಲ್ಲಿಯೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇದೀಗ ಕಾಲಿವುಡ್, ಬಾಲಿವುಡ್ ಅಂತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಶ್ಮಿಕಾ ನಾನು ರಾತ್ರೋರಾತ್ರಿ ಸ್ಟಾರ್ ಆದ ನಟಿಯಲ್ಲ ಎಂದು ಗರಂ ಆಗಿದ್ದಾರೆ. ಹೌದು, ನಾನು ರಾತ್ರೋರಾತ್ರಿ ಸ್ಟಾರ್ ಆಗಿಲ್ಲ, ನಾನು ಸ್ಟಾರ್ ಆಗಲು ಎಷ್ಟೆಲ್ಲ ಕಷ್ಟಪಟ್ಟಿದ್ದೀನಿ ಗೊತ್ತಾ ಎಂದು ಎಂದಿದ್ದಾರೆ. ಇದಕ್ಕೆ ಕಾರಣ ಟ್ರೋಲ್‌. ರಾತ್ರೋರಾತ್ರಿ ಸ್ಟಾರ್ ಆದರೆ ಹೀಗೆ ಆಡೋದು ಎಂದು ಮಾಡಿದ್ದ ಟ್ರೋಲ್‌ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕಿರಿಕ್ ಪಾರ್ಟಿ ಬಳಿಕ ಕನ್ನಡದಲ್ಲಿ ದೊಡ್ಡ ಹಿಟ್ ಸಿಕ್ಕಿಲ್ಲ. ತೆಲುಗಿಗೆ ಬಂದ ಬಳಿಕ ಸ್ಟಾರ್ ಆದೆ ಎಂದು ಹೇಳಿದ್ದಾರೆ. ರಶ್ಮಿಕಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ರಣಬೀರ್ ಕಪೂರ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ನಟಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video