ಎರಡನೇ ವಾರವೂ ಭರ್ಜರಿ ಪ್ರದರ್ಶನದಲ್ಲಿ ಕೆರೆಬೇಟೆ: ಸಿನಿಮಾ ನೋಡಿದ ನಟ ನೆನಪಿರಲಿ ಪ್ರೇಮ್!

ಕೆರೆಬೇಟೆ ನೋಡಿ ಧ್ರುವ ಸರ್ಜಾ ಏನಂದ್ರು ಗೊತ್ತಾ..?
ಗೌರಿಶಂಕರ್ ನಟಿಸಿ ನಿರ್ಮಾಣ ಮಾಡಿರೋ ಸಿನಿಮಾ
ಕೆರೆಬೇಟೆ ಸಿನಿಮಾಗೆ ಸಿಗುತ್ತಿದೆ ಭಾರೀ ಜನ ಮನ್ನಣೆ..!

Share this Video
  • FB
  • Linkdin
  • Whatsapp

ಕನ್ನಡ ಸಿನಿ ಪ್ರೇಕ್ಷಕರಿಗೆ ಅಪ್ಪಟ ಮಲೆನಾಡ ಕಥೆಯ ಕೆರೆಬೇಟೆ ಸಿನಿಮಾ(Kerebete Movie) ಭರ್ಜರಿ ಮನೋರಂಜನೆ ಕೊಡುತ್ತಿದೆ. ಗೌರಿಶಂಕರ್ ನಾಯಕನಾಗಿ ನಟಿಸಿರೋ 'ಕೆರೆಬೇಟೆ' ಸಿನಿಮಾ ಬಗ್ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಕನ್ನಡ(Kannada) ಸಿನಿಮಾ ತಾರೆಯರು ಒಬ್ಬೊಬ್ಬರೇ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ. ಮೊನ್ನೆಯಷ್ಟೇ ನಟ ಧ್ರುವ ಸರ್ಜಾ(Druva sarja) ಕೆರೆಬೇಟೆ ನೋಡಿ ಖುಷಿ ಪಟ್ಟಿದ್ರು. ಇದೀಗ ನಟ ನೆನಪಿರಲಿ ಪ್ರೇಮ್(Prem) ದಂಪತಿ ಸಿನಿಮಾ ನೋಡಿದ್ದಾರೆ. ಮಲೆನಾಡಿನ ಭಾಗದ ಸುಂದರ ತಾಣಗಳ ಜೊತೆ ಮನಕಲುಕುವ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ರಾಜ್‌ಗುರು ನಿರ್ದೇಶನದ ಕೆರೆಬೇಟೆಯಲ್ಲಿ ಗೌರಿಶಂಕರ್‌ಗೆ ನಾಯಕಿಯಾಗಿ ಬಿಂದು ನಟಿಸಿದ್ದಾರೆ. ಈ ಕೆರೆಬೇಟೆ ಸಿನಿಮಾ ನೋಡಿದ ಶಿಕ್ಷಕರೊಬ್ಬರು ನಿರ್ದೇಶಕ ರಾಜ್‌ಗುರುಗೆ ತನ್ನ ಚಿನ್ನದ ಉಂಗುರ ಗಿಫ್ಟ್ ಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಮ್ಯಾಟ್ನಿ ಸಿನಿಮಾ ರೋಮ್ಯಾಂಟಿಕ್ ಸಾಂಗ್ ರಿಲೀಸ್..! ಮಂಜಿನ ಮಳೆಯಲ್ಲಿ ಸತೀಶ್ -ಅದಿತಿ ರೋಮ್ಯಾನ್ಸ್..!

Related Video