Asianet Suvarna News Asianet Suvarna News

ಏರ್ಪೋಟ್‌ನಲ್ಲಿ ವಿಜಯ್ ಜೊತೆ ರಶ್ಮಿಕಾ; ಮಾಲ್ಡೀವ್ಸ್‌ಗೆ ಹಾರಿದ್ರಾ ಸೆನ್ಸೇಷನ್ ಜೋಡಿ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಏರ್ಪೋರ್ಟ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಮಾಲ್ಡೀವ್ಸ್ ‌ಗೆ ಹಾರಿದೆ ಎನ್ನುವ ಸುದ್ದಿ ಕೇಳಿಬಂದಿದೆ. 

Oct 7, 2022, 4:30 PM IST

ಸೌತ್ ಸಿನಿರಂಗದ ಸೆನ್ಸೇಷನ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಮತ್ತು ವಿಜಯ್ ನಡುವೆ ಬ್ರೇಕಪ್ ಆಗಿದೆ, ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ಇತ್ತೀಚಿಷ್ಟೆ ವೈರಲ್ ಆಗಿತ್ತು. ಆದರೀಗ ಇಬ್ಬರ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಏರ್ಪೋರ್ಟ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಬ್ರೇಕಪ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಅಂದಹಾಗೆ ಈ ಜೋಡಿ ಮಾಲ್ಡೀವ್ಸ್ ಗೆ ಹಾರಿದ್ದಾರೆ ಎನ್ನಲಾಗಿದೆ. ಇಬ್ಬರು ಒಟ್ಟಿಗೆ ಪಾರಿನ್ ಫ್ಲೈಟ್ ಹತ್ತಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಗುಡ್‌ಬೈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ರಶ್ಮಿಕಾ ಮಾಲ್ಡೀವ್ಸ್ ಹಾರಿರುವುದು ಅಚ್ಚರಿ ಮೂಡಿಸಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment