ರಣಬೀರ್ ಕಪೂರ್ ರಾಮನಾಗಿದ್ದು ಹೇಗೆ? ರಾಕಿ ರಾಮಾಯಣದ ಕಾಸ್ಟಿಂಗ್ ರಹಸ್ಯ!

ಬಹುಕೋಟಿ ವೆಚ್ಚದ ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರನ್ನು ರಾಮ, ಸೀತೆ ಮತ್ತು ರಾವಣನ ಪಾತ್ರಗಳಿಗೆ ಆಯ್ಕೆ ಮಾಡಿದ ಬಗೆಗಿನ ಕುತೂಹಲಕಾರಿ ವಿವರಗಳನ್ನು ನಿರ್ಮಾಪಕ ನಮಿತ್ ಮಲ್ಹೋತ್ರ ಬಹಿರಂಗಪಡಿಸಿದ್ದಾರೆ.  

Share this Video
  • FB
  • Linkdin
  • Whatsapp

ರಣಬೀರ್ ಕಪೂರ್ ಸಾಯಿ ಪಲ್ಲವಿ ಮತ್ತು ನಮ್ಮ ರಾಕಿಂಗ್ ಸ್ಟಾರ್ ಯಶ್ ನಟಿಸ್ತಾ ರಾಮಾಯಣ ಪ್ರಾಜೆಕ್ಟ್ ಸದ್ಯ ಇಡೀ ವಿಶ್ವದೆಲ್ಲೆಡೆ ಸದ್ದು ಮಾಡ್ತಾ ಇದೆ. ಅಷ್ಟಕ್ಕೂ ಈ ಬಹುಕೋಟಿ ವೆಚ್ಚದ ರಾಮಾಯಣಕ್ಕೆ ಪಾತ್ರಗಳ ಆಯ್ಕೆ ಆಗಿದ್ದು ಹೇಗೆ..? ರಣಬೀರ್ ರಾಮನಾಗಿ ಸಾಯಿ ಪಲ್ಲವಿ ಸೀತೆಯಾಗಿ ಆಯ್ಕೆ ಮಾಡಿದ್ಯಾಕೆ?

ಸದ್ಯ ಇಡೀ ವಿಶ್ವವೇ ಕಾತುರದಿಂದ ಕಾಯ್ತಾ ಇರೋ ಸಿನಿಮಾ ರಾಮಾಯಣ. ಬರೋಬ್ಬರಿ 800 ಕೋಟಿ ವೆಚ್ಚದಲ್ಲಿ ಸಿದ್ದ ಆಗ್ತಾ ಇರೋ ರಾಮಾಯಣದಲ್ಲಿ ಒಬ್ಬರಿಗಿಂತ ಒಬ್ಬರು ಧೈತ್ಯ ಕಲಾವಿಧರಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡ್ರೆ ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಇದ್ದಾರೆ. ಇನ್ನು ನಮ್ಮ ರಾಕಿಂಗ್ ಸ್ಟಾರ್ ಯಶ್ ದಶಕಂಠ ರಾವಣನಾಗಿ ಮಿಂಚ್ತಾ ಇದ್ದಾರೆ.. ಆದ್ರೆ ಈಗ ವಿಷಯ ಅದಲ್ಲ. ಈ ಎಲ್ಲಾ ಪಾತ್ರಗಳಿಗೆ ಇವರೇ ನಟಿಸಬೇಕು ಅಂತ ಕಲಾವಿಧರ ಆಯ್ಕೆ ಬಗ್ಗೆ ರೋಚಕ ವಿಚಾರಗಳು ಹೊರ ಬರುತ್ತಿವೆ.

ಅಷ್ಟಕ್ಕೂ ಈ ಸಿನಿಮಾದಲ್ಲಿ ರಾಮ ಸೀತೆ ಪಾತ್ರಕ್ಕೆ ರಣಬೀರ್ ಮತ್ತು ಸಾಯಿ ಪಲ್ಲವಿ ಆಯ್ಕೆ ಯಾಗಿದ್ದು ಹೇಗೆ ಅನ್ನೋ ಗುಟ್ಟನ್ನು ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರ ರಿವೀಲ್ ಮಾಡಿದ್ದಾರೆ. ರಾಕಿ ರಾಮಾಯಣದ ಕಾಸ್ಟಿಂಗ್ ಹಿಂದಿನ ಕಹಾನಿ ತುಂಬಾನೇ ಇನ್ ಟ್ರೆಸ್ಟಿಂಗ್ ಆಗಿದೆ.

ರಾಮನ ಪಾತ್ರಕ್ಕೆ ಬಾಲಿವುಡ್ ನಲ್ಲಿ ಯಾರು ಸೂಕ್ತ ಅನೂ ಚರ್ಚೆ ಬಂದಾಗ ಮೊದ್ಲು ಬಂದ ಹೆಸರೇ ರಣಬೀರ್ ದಂತೆ. ಯಾಕಂದ್ರೆ ರಣಬೀರ್ ಸೌಮ್ಯ ಮುಖಭಾವ ಪ್ರಭು ಶ್ರೀರಾಮನ ಪಾತ್ರಕ್ಕೆ ಪರ್ಪೆಕ್ಟ್ ಆಗಿ ಸೂಟ್ ಆಗುತ್ತೆ ಅನ್ನೋದು. ಸದ್ಯ ಫಸ್ಟ್ ಗ್ಲಿಂಪ್ಸ್ ನಲ್ಲಿ ರಣಬೀರ್ ಲುಕ್ ನೋಡಿದವರು ಇದು ಅಪ್ಪಟ ಸತ್ಯ ಎಂದಿದ್ದಾರೆ. ರಾಮನ ರೋಲ್​​ನಲ್ಲಿ ರಣಬೀರ್​​ರನ್ನ ನೋಡೋದೇ ಚಂದ ಎನ್ನುತ್ತಿದ್ದಾರೆ.

ಬಾಲಿವುಡ್​ ಬ್ಯೂಟಿ ಕೃತಿ ಸನೋನ್​​ ಆದಾಗ್ಲೆ ಸೀತೆ ರೋಲ್ ಮಾಡಿದ್ದಾರೆ. ಪ್ರಭಾಸ್ ಆದಿಪುರುಷ್ ಸಿನಿಮಾದಲ್ಲಿ ಜಾನಕಿ ಆಗಿದ್ದಾರೆ. ಆದ್ರೆ ಈಗ ಯಶ್​ರ ರಾಮಾಯಣಲ್ಲಿ ಆ ಪಟ್ಟ ಸಾಯಿ ಪಲ್ಲವಿ ಪಾಲಾಗಿದೆ. ಅಸಲಿಗೆ ಸಾಯಿ ಪಲ್ಲವಿ ಸರಳ ಸುಂದರಿ ಅಂತಾನೆ ಫೇಮಸ್. ಎಲ್ಲಾ ನಟಿಯರು ಮೇಕಪ್ ನಲ್ಲಿ ಮಿಂದು ಚೆಂದ ಕಂಡ್ರೆ, ಸಾಯಿ ಪಲ್ಲವಿ ಮಾತ್ರ ಯಾವ ಅಲಂಕಾರವೂ ಇಲ್ಲದೆ, ನಿರಾಭರಣ ಸುಂದರಿ ಆಗಿ ಮಿಂಚ್ತಾರೆ. ಸೋ ಸೀತೆ ಮಾತ್ರಕ್ಕೆ ಈ ಸರಳ ಸುಂದರಿ ಬೆಸ್ಟ್ ಅಂತ ಟೀಂ ನಿರ್ಧಾರ ಮಾಡಿದೆ.

ಇನ್ನು ರಾವಣ.. ಈ ರೋಲ್​​​​​​ಗೆ ಬೆಸ್ಟ್​ ಅಂದ್ರೆ ಅದು ಯಶ್.. ಯಾಕಂದ್ರೆ ಕೆಜಿಎಫ್​​ನಲ್ಲಿ ಯಶ್​​ರ ರಗಡ್​​ ಲುಕ್​​​ ನೋಡಿ ರಾವಣ ಆದ್ರೆ ಚಂದ ಅಂತ ನಿರ್ದೇಶಕ ನಿತೀಶ್ ತಿವಾರ್​ ಯಶ್​ಗೆ ಅಪ್ರೋಚ್ ಮಾಡಿದ್ರು. ರಾಕಿ ಈ ಸಿನಿಮಾಗೆ ನಾನು ಬಂಡವಾಳ ಹಾಕ್ತೇನೆ ಅಂತ ನಿರ್ಮಾಣದಲ್ಲೂ ಪಾಲುದಾರಿಕೆ ಪಡೆದು ರಾವಣ ಆದ್ರು. ಒಟ್ಟಾರೆ ಬಹುನಿರೀಕ್ಷೆಯ ರಾಮಾಯಣ ಸಿನಿಮಾದಲ್ಲಿ ರಾಮ ಸೀತೆ ರಾವಣನ ಪಾತ್ರಕ್ಕೆ ಕಲಾವಿದರ ಆಯ್ಕೆ ಹಿಂದೆ ಇಷ್ಟೆಲ್ಲಾ ಕಥೆ ಇದೆ. ಅದಕ್ಕಾಗಗೆ ರಾಮಾಯಣ ಅದ್ಭುತವಾಗಿ ಕಾಣ್ತಾ ಇದೆ.

Related Video