
ರಾಕಿಂಗ್ ಸ್ಟಾರ್ ಹೊಗಳಿದ ಟಾಲಿವುಡ್ ಸ್ಟಾರ್...ಯಶ್ ಬಗ್ಗೆ ರಾಮ್ ಚರಣ್ ಹೇಳಿದ್ದೇನು ?
ಆಸ್ಕರ್ ಅವಾರ್ಡ್ಸ್ ಪಡೆದು ಹಿಂತಿರುಗಿದ ನಂತರ ರಾಮ್ ಚರಣ್ ಹಲವು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದು, ಸಂದರ್ಶನ ಒಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ.
ರಾಮ್ ಚರಣ್ ಸಂದರ್ಶನದಲ್ಲಿ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ನಿಲ್ಲಬೇಕೆಂದರೆ ಏನು ಮುಖ್ಯ ಎಂಬ ವಿಷಯದ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್‌ನ್ನು ಉದಾಹರಣೆಗೆ ತೆಗೆದುಕೊಂಡ ನಿರೂಪಕರು ಓರ್ವ ಬಸ್ ಡ್ರೈವರ್ ಮಗ ಇಂದು ಸ್ಟಾರ್ ಆಗಿದ್ದಾರೆ, ನೀವೂ ಸಹ ಸ್ಟಾರ್ ಆಗಿದ್ದೀರ ಎಂದು ಹೋಲಿಕೆ ಮಾಡಿ ರಾಮ್ ಚರಣ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಇದಕ್ಕೆ ರಾಮ್ ಚರಣ್ ನೀಡಿದ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯಶ್‌ಗೆ ಪ್ರತಿಭೆ ಇದ್ದ ಕಾರಣ ಇಂದು ಯಶಸ್ಸು ಸಾಧಿಸಿದ್ದಾರೆ. ಯಶ್ ಮಾತ್ರವಲ್ಲ ಯಾವ ನಟನಾದರೂ ಸಹ ಪ್ರತಿಭೆ ಇದ್ದರೆ ಮಾತ್ರ ಸೂಪರ್ ಸ್ಟಾರ್ ಆಗಲು ಸಾಧ್ಯ' ಎಂದು ಹೇಳಿಕೆ ನೀಡಿದ್ದಾರೆ.ಹಾಗೆ ಟ್ಯಾಲೆಂಟ್ ಇದ್ದರೆ ಮಾತ್ರ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ನಿಲ್ಲಬಹುದು, ಸ್ಟಾರ್ ನಟನ ಮಗನಾಗಿ ಚಿತ್ರರಂಗ ಪ್ರವೇಶಿಸಿದರೂ ಸಹ ಪ್ರತಿಭೆ ಇದ್ದರೆ ಮಾತ್ರ ಆ ನಟ ಸ್ಟಾರ್ ಆಗಲು ಸಾಧ್ಯ ಎಂದು ರಾಮ್ ಚರಣ್ ಹೇಳಿದ್ದಾರೆ.
Add Asianetnews Kannada as a Preferred Source
