ಶ್ರೀರಾಮಚಂದ್ರನ ಪಾತ್ರದಲ್ಲಿ ಮಿಂಚಿರೋ ಅಣ್ಣಾವ್ರು, ಎನ್‌ಟಿಆರ್‌, ಬಾಲಯ್ಯ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಎರಡು ದಿನ ಭಾಕಿ ಇದೆ. ಹೀಗಾಗಿ ದೇಶಾದ್ಯಂತ ರಾಮನ ಜಪ ನಡೀತಿದೆ. ಈ ಟೈಂನಲ್ಲಿ ನಮ್ಮ ಚಿತ್ರರಂಗದಲ್ಲಿ ಯಾರೆಲ್ಲಾ ರಾಮನ ಅವತಾರ ಎತ್ತಿ ರಾಮ ನಾಮ ಹಾಡಿದ್ದಾರೆ ಅಂತ ಹುಡುಕಿದ್ರೆ ದೊಡ್ಡ ದೊಡ್ಡ ಹೆಸರುಗಳೇ ಸಿಗ್ತಾವೆ. 

First Published Jan 20, 2024, 10:27 AM IST | Last Updated Jan 20, 2024, 10:27 AM IST

ಆಡು ಮುಟ್ಟದ ಸೊಪ್ಪಿಲ್ಲ ಡಾಕ್ಟರ್ ರಾಜ್ ಕುಮಾರ್(Rajkumar) ಮಾಡದ ಪಾತ್ರಗಳೇ ಇಲ್ಲ. ಹೀಗಾಗಾಗಿ ಅಣ್ಣಾವ್ರು ರಾಮನ ರೋಲ್(Sri Rama Role) ಕೂಡ ಮಾಡಿದ್ದಾರೆ. 1963ರಲ್ಲಿ ಬಂದ 'ಶ್ರೀ ರಾಮಾಂಜನೇಯ ಯುದ್ಧ' ಸಿನಿಮಾದಲ್ಲಿ ಅಣ್ಣಾವ್ರು ರಾಮನ ಪಾತ್ರ ಮಾಡಿದ್ರು. ಅಷ್ಟೇ ಅಲ್ಲ ಲವ ಖುಶ ಅನ್ನೋ ಸಿನಿಮಾದಲ್ಲಿ ಅಣ್ಣಾವ್ರು ರಾಮನಾಗಿ ನಟಿಸಿದ್ರು. ಆದ್ರೆ ಆ ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು. ಇನ್ನೂ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಎನ್‌ಟಿಆರ್ (NTR) ಕೂಡ ಅಣ್ಣಾವ್ರ ಹಾಗೆ ಎಲ್ಲಾ ಪಾತ್ರಗಳಲ್ಲಿ ಮಿಂಚಿದ್ದಾರೆ. ಎನ್‌ಟಿಆರ್ ಕೂಡ ರಾಮನಾಗಿ ನಟಿಸಿದ್ದಾರೆ. ಸಂಪೂರ್ಣ ರಾಮಾಯಣ, ಶ್ರೀರಾಮ ಪಟ್ಟಾಬಿಷೇಕಂ, ಲವ ಕುಶ ಸಿನಿಮಾದಲ್ಲಿ ಶ್ರೀಮಾನಾಗಿ ನಟಿಸಿದ್ರು. ಜ್ಯೂನಿಯರ್ ಎನ್ಟಿಆರ್(Jr NTR) ಕೂಡ ರಾಮನ ರೋಲ್ ಮಾಡಿದ್ದಾರೆ. ಜ್ಯೂಎನ್ಟಿರ್ಗೆ 12 ವರ್ಷ ಇದ್ದಾಗ ಮಕ್ಕಳ ಬಾಲರಾಮ ಸಿನಿಮಾದಲ್ಲಿ ಜ್ಯೂನಿಯರ್ ಎನ್ಟಿಆರ್ ಬಾಲರಾಮನಾಗಿ ಬಣ್ಣ ಹಚ್ಚಿದ್ದಾರೆ. ಅಷ್ಟೆ ಅಲ್ಲ ಕಳೆದ ವರ್ಷ ಬಂದ ಆದಿಪುರುಷ ಸಿನಿಮಾದಲ್ಲಿ ನಟ ಪ್ರಭಾಸ್(Prabhas) ಕೂಡ ಶ್ರೀರಾಮನಾಗಿದ್ರು. ಲವ ಕುಶ ಕತೆಯನ್ನೇ ಹೊಸದಾಗಿ ಮಾಡಿದ್ದ ಬಾಲಯ್ಯ ಶ್ರೀರಾಮ ರಾಜ್ಯಂ ಸಿನಿಮಾದಲ್ಲಿ ರಾಮನ ಅವತಾರ ಎತ್ತಿದ್ದಾರೆ ಇಲ್ಲಿ ಸೀತೆಯಾಗಿ ನಯನತಾರ ನಟಿಸಿದ್ರು. ತೆಲುಗು ನಟ ಸುಮನ್ ಶ್ರೀರಾಮದಾಸು ಸಿನಿಮಾದಲ್ಲಿ ರಾಮನ ರೋಲ್ ಮಾಡಿದ್ದಾರೆ. ನಟ ಶ್ರೀಕಾಂತ್ ದೇವುಳ್ಳು ಅನ್ನೋ ಮಕ್ಕಳ ಸಿನಿಮಾದಲ್ಲಿ ಸಣ್ಣ ಝಲಕ್ನಲ್ಲಿ ಶ್ರೀರಾಮನಾಗಿ ಬರ್ತಾರೆ. ಹಾಗೆ ಆರ್ಆರ್ಆರ್ ನಿರ್ದೇಶಕ ರಾಜಮೌಳಿ ರಾಮ್ ಚರಣ್ಗೆ ಶ್ರೀರಾಮನ ವೇಶ ತೊಡಿಸಿ ಯುದ್ಧಕ್ಕೆ ಬಿಟ್ಟಿದ್ರು. ರಾಮ್ ಚರಣ್ ತೇಟ್ ಶ್ರೀರಾಮನಂತೆ ಕಾಣಿಸಿದ್ರು.

ಇದನ್ನೂ ವೀಕ್ಷಿಸಿ:  Kaatera: ಬಾಕ್ಸಾಫೀಸ್‌ನಲ್ಲಿ 'ಕಾಟೇರ' ಬಿಗ್ ಸಕ್ಸಸ್..! 100 ಕೋಟಿ ಕ್ಲಬ್ ಸೇರಿದ್ದು ಯಾರೆಲ್ಲಾ ಗೊತ್ತಾ..?

Video Top Stories