Asianet Suvarna News Asianet Suvarna News

KGF Yash: ಬಾಲಿವುಡ್​ನ ಬಿಗ್ ಪಿಕ್ಚರ್ ಶೋನಲ್ಲಿ ರಾಕಿ ಭಾಯ್​ ಹವಾ!

Jan 13, 2022, 1:18 PM IST
  • facebook-logo
  • twitter-logo
  • whatsapp-logo

'ಕೆಜಿಎಫ್' (KGF) ಚಿತ್ರದ ಮೂಲಕ ನ್ಯಾಷನಲ್​ ಸ್ಟಾರ್​ ಆದ ಯಶ್ (Yash) ಇದೀಗ ಎಲ್ಲಾ ಚಿತ್ರರಂಗ​ಗಳಲ್ಲೂ ಫೇಮಸ್​ ಆಗಿದ್ದಾರೆ. ಈ ಒಂದು ಚಿತ್ರದ ಮೂಲಕ ಬಾಲಿವುಡ್​ನಲ್ಲಿ (Bollywood) ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದು ಯಾವ ಮಟ್ಟಕ್ಕೆ ಅಂದರೆ ಯಶ್​ ಬಗ್ಗೆ, ಹಿಂದಿ ಬಿಗ್ ಪಿಕ್ಚರ್ ಶೋನಲ್ಲಿ ಪ್ರಶ್ನೆ ಕೇಳುವ ಮಟ್ಟಕ್ಕೆ ಇಂದು ಅವರು​ ಬೆಳೆದು ನಿಂತಿದ್ದಾರೆ. ಹೌದು! ಬಾಲಿವುಡ್​ನ ಖಾಸಗಿ ವಾಹಿನಿಯಲ್ಲಿ ಬಿಗ್ ಪಿಕ್ಚರ್ ಶೋವೊಂದು​ ಪ್ರಸಾರ ಆಗುತ್ತಿದ್ದು, ಈ ಕಾರ್ಯಕ್ರಮವನ್ನು ರಣವೀರ್​ ಸಿಂಗ್​​ (Ranveer Singh) ಹೋಸ್ಟ್​ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಒಂದು ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. 

KGF 2 Movie: ಯಶ್ ಜೊತೆ ರೇಸ್‌ಗೆ ನಿಂತ ಇಬ್ಬರು ಬಿಗ್ ಸ್ಟಾರ್ಸ್

ಆಗ ರಣವೀರ್​ ಸಿಂಗ್​, ಯಶ್​ ಚಿತ್ರವನ್ನು ತೋರಿಸಿ ಇವರು ಯಾರು ಗೊತ್ತಾ? ಅಂತಾ ಕೇಳುತ್ತಾರೆ. ಆಗ ಸೋನಾಕ್ಷಿ 'ಹೌದು ಗೊತ್ತು. ಇವರು ಸೌತ್​ ಸಿನಿ ಇಂಡಸ್ಟ್ರಿಯ ಸೂಪರ್​ ಸ್ಟಾರ್​ ನಟ ಯಶ್​. ಇವರ ಸೂಪರ್​ ಹಿಟ್​ ಸಿನಿಮಾ 'ಕೆಜಿಎಫ್' ಅಂತ ಹೇಳುತ್ತಾರೆ. ಆಗ ರಣವೀರ್​ ಹೌದು ನೀವು ಹೇಳಿದ್ದು ಸರಿ. ಆದರೆ ಪ್ರಶ್ನೆ ಅದಲ್ಲ ರಾಕಿಂಗ್​ ಸ್ಟಾರ್​ ಯಶ್​ ಯಾವ ಇಂಡಸ್ಟ್ರಿಯವರು ಎಂದು ಕೇಳಿ  4 ಆಪ್ಷನ್ ನೀಡುತ್ತಾರೆ. ಆಗ ಕನ್‌ಫ್ಯೂಸ್​ ಆದ ಸೋನಾಕ್ಷಿ, ಈ ವಿಚಾರ ನನಗೆ ಗೊತ್ತಿಲ್ಲ ಅಂತ ಹೇಳಿ, ಫೋನೋ ಫ್ರೆಂಡ್​​ ಆಪ್ಷನ್​ ತೆಗೆದುಕೊಂಡು ಸ್ಯಾಂಡಲ್​ವುಡ್​ ಅಂತ ಹೇಳುತ್ತಾರೆ. ಅಂದಹಾಗೆ ಇತ್ತೀಚೆಗೆ ಯಶ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment