KGF 2 Movie: ಯಶ್ ಜೊತೆ ರೇಸ್‌ಗೆ ನಿಂತ ಇಬ್ಬರು ಬಿಗ್ ಸ್ಟಾರ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ರಾಕಿ ಭಾಯ್ ಅಬ್ಬರ ಶುರುವಾಗಲಿದೆ. ಆದರೆ ಯಶ್ 'ಕೆಜಿಎಫ್ 2' ಎದುರು ಭಾರತೀಯ ಚಿತ್ರರಂಗದ ಇಬ್ಬರು ಬಿಗ್ ಸ್ಟಾರ್ಸ್ ಹಲ್ಲು ಕಚ್ಚಿ ಕಾಲು ಕೆದರಿ ಸ್ಪರ್ಧೆಗೆ ನಿಂತಿದ್ದಾರೆ. 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ 'ಕೆಜಿಎಫ್ 2' (KGF 2) ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ರಾಕಿ ಭಾಯ್ ಅಬ್ಬರ ಶುರುವಾಗಲಿದೆ. ಆದರೆ ಯಶ್ 'ಕೆಜಿಎಫ್ 2' ಎದುರು ಭಾರತೀಯ ಚಿತ್ರರಂಗದ ಇಬ್ಬರು ಬಿಗ್ ಸ್ಟಾರ್ಸ್ ಹಲ್ಲು ಕಚ್ಚಿ ಕಾಲು ಕೆದರಿ ಸ್ಪರ್ಧೆಗೆ ನಿಂತಿದ್ದಾರೆ. ಹೌದು! ಯಶ್ 'ಕೆಜಿಎಫ್ 2' ಸಿನಿಮಾದ ಎದುರು ಏಪ್ರಿಲ್ 14 ರಂದು ಬಾಕ್ಸಾಫೀಸ್‌ನ ತೊಡೆ ತಟ್ಟೋದಾಗಿ ಬಾಲಿವುಡ್ ನಟ ಅಮೀರ್ ಖಾನ್ (Aamir Khan) ಸಿದ್ಧರಾಗಿದ್ದಾರೆ. ಅಮೀರ್ ಖಾನ್ ನಟನಯೆ 'ಲಾಲ್ ಸಿಂಗ್ ಛಡ್ಡಾ' (Laal Singh Chaddha) ಸಿನಿಮಾ 'ಕೆಜಿಎಫ್ 2' ಬಿಡುಗಡೆ ದಿನವೇ ದೇಶಾದ್ಯಂತ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲೇ ರಿಲೀಸ್ ಆಗುತ್ತಿದೆ. 

KGF Yash Birthday: 'ಕೆಜಿಎಫ್ 2' ಸಿನಿಮಾ ಹೊಸ ಪೋಸ್ಟರ್ ಟ್ರೆಂಡಿಂಗ್ ಮಾಡಲಿದ್ದಾರೆ ಫ್ಯಾನ್ಸ್!

ಅದರ ಜೊತೆಗೆ ಕಾಲಿವುಡ್ ಸ್ಟಾರ್ ನಟ ವಿಜಯ್ (Vijay) ನಟನೆಯ 'ಬೀಸ್ಟ್' (Beast) ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿದೆ. ಏಪ್ರಿಲ್​ನಲ್ಲಿ ತೆರೆಗೆ ಬರುವುದಾಗಿ ಚಿತ್ರತಂಡ ಹೊಸ ಪೋಸ್ಟರ್ (Poster) ಸಮೇತ ಸುಳಿವು ನೀಡಿದೆ. 'ಕೆಜಿಎಫ್ 2' ತಮಿಳಿಗೂ ಡಬ್ ಆಗಿ ತೆರೆಕಾಣುತ್ತಿದೆ. ದಳಪತಿ ವಿಜಯ್ ನಟಿಸಿರುವ ತಮಿಳಿನ ರಾ ಸಿನಿಮಾ 'ಬೀಸ್ಟ್'. ಕರ್ನಾಟಕದಲ್ಲೂ (Karnataka) ವಿಜಯ್‌ಗೆ ದೊಡ್ಡ ಫ್ಯಾನ್ ಬೇಸ್ ಇದ್ದು, ಕಾಲಿವುಡ್ (Kollywood) ಹಾಗೂ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಈ ಎರಡು ಸಿನಿಮಾಗಳು ಪೈಪೋಟಿ ನಡೆಸೋದು ಗ್ಯಾರಂಟಿ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video