Asianet Suvarna News Asianet Suvarna News

ನನ್ನನ್ನು ಕರಿ ಬೆಕ್ಕು ಅಂತಿದ್ರು: ಕಷ್ಟದ ದಿನಗಳನ್ನು ತೆರೆದಿಟ್ಟ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ

ನಟಿ ಪ್ರಿಯಾಂಕಾ ಚೋಪ್ರಾ ಬಾಡಿ ಶೇಮಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ತನ್ನನ್ನು ಕರಿ ಬೆಕ್ಕು ಎಂದು ಕರೆಯುತ್ತಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಸಿನಿಮಾರಂಗ ತೊರೆದ ಬಗ್ಗೆ ಪ್ರಿಯಾಂಕಾ ಈ ಹಿಂದೆ ಅನೇಕ ಹೇಳಿಕೆಗಳನ್ನು ನೀಡಿದ್ದರು. ಇದೀಗ ಮತ್ತಷ್ಟು ಶಾಕಿಂಗ್ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ನೇರ ನುಡಿಗೆ ಖ್ಯಾತಿಗಳಿಸಿರುವ ಪ್ರಿಯಾಂಕಾ ಇದೀಗ ಸಿನಿಮಾರಂಗದ ಕರಾಳ ಮುಖ ಬಿಚ್ಚಿಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಎದುರಿಸಿದ ಕಷ್ಟಗಳನ್ನು ಜಾಗತಿಕ ಮಟ್ಟದಲ್ಲಿ ತೆರೆದಿಟ್ಟಿದ್ದಾರೆ. ತನ್ನನ್ನು ಕರಿ ಬೆಕ್ಕು ಎಂದು ಕರೆಯುತ್ತಿದ್ದರು ಎಂದು ಬಾಡಿಶೇಮಿಂಗ್ ಮಾಡುತ್ತಿದ್ದ ಬಗ್ಗೆ ತೆರೆದಿಟ್ಟಿದ್ದಾರೆ. ಇದರಿಂದ ತುಂಬಾ ನೋವು ಅನುಭವಿಸಿದ್ದೆ ಎಂದಿದ್ದಾರೆ. ಅಷ್ಟೆಯಲ್ಲದೇ ನಿರ್ದೇಶಕರೊಬ್ಬರು ಒಳ ಉಡುಪಿನಲ್ಲಿ ನಿಲ್ಲಬೇಕು ಎಂದು ಹೇಳಿದ್ದರು ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.