ಕನ್ನಡ ಸಿನಿಮಾ ಮಾಡಲಿರುವ ಜ್ಯೂ. ಎನ್.ಟಿ.ಆರ್: ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್

ಟಾಲಿವುಡ್ ಸೂಪರ್ ಸ್ಟಾರ್ ಜ್ಯೂ. ಎನ್.ಟಿ.ಆರ್ ತನ್ನ ತಾಯಿ ಭಾಷೆ ಕನ್ನಡದಲ್ಲಿ ಸಿನಿಮಾ ಮಾಡೋದಕ್ಕೆ ಸಿದ್ಧರಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. 
 

Share this Video
  • FB
  • Linkdin
  • Whatsapp

ಮನೆಯಲ್ಲಿ ಅಮ್ಮನ ಜತೆ ಆಗಾಗ ಕನ್ನಡದಲ್ಲಿ ಮಾತನಾಡುವ ಜ್ಯೂ. ಎನ್.ಟಿ.ಆರ್, ಇದೀಗ ಕನ್ನಡದ ಸಿನಿಮಾ ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಕನ್ನಡವನ್ನು ಲೀಲಾಜಾಲವಾಗಿ ಮಾತನಾಡುವ ಯಂಗ್ ಟೈಗರ್, ತಮ್ಮ ಗೆಳೆಯ ಅಪ್ಪು ಸಿನಿಮಾಗೆ ಕನ್ನಡದಲ್ಲಿ ಹಾಡಿದ್ರು. ತೆಲುಗು ಭಾಷೆಯ RRR ಸಿನಿಮಾದ ಕನ್ನಡ ವರ್ಷನ್’ಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ರು. ಇದೀಗ ಕನ್ನಡಕ್ಕೆ ಡೈರೆಕ್ಟ್ ಎಂಟ್ರಿ ಕೊಡುತ್ತಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಾರಕ್ 31ನೇ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ತೆಲುಗು ಭಾಷೆಯಲ್ಲಿ ಸಿದ್ಧವಾಗುತ್ತಿದ್ದು, ತಮಿಳು, ಹಿಂದಿ ಮಲೆಯಾಳಂಗೆ ಡಬ್ ಆಗುತ್ತಿದೆ. ಆದ್ರೆ ಕನ್ನಡ ಭಾಷೆಯಲ್ಲಿ ಮಾತ್ರ ಡೈರೆಕ್ಟ್ ಆಗಿ ಚಿತ್ರೀಕರಣ ಆಗುತ್ತಿದೆ. 

Nayanthara Birthday; ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪತ್ನಿಗೆ ವಿಶ್ ಮಾಡಿದ ವಿಘ್ನೇಶ್ ಶಿವನ್

Related Video