Asianet Suvarna News Asianet Suvarna News

ಹೆಚ್ಚು ಸಂಭಾವನೆ ಪಡೆಯೋ ಕೀರ್ತಿ ದಕ್ಷಿಣ ಸ್ಟಾರ್ಸ್ ಹೆಸರಲ್ಲಿ: ಪ್ರಭಾಸ್, ಯಶ್, ವಿಜಯ್ ಮೂವರಲ್ಲಿ ಹೆಚ್ಚು ಸಂಭಾವನೆ ಯಾರಿಗೆ?

ಭಾರತೀಯ ಚಿತ್ರರಂಗದಲ್ಲಿ ಸೌತ್ ಸ್ಟಾರ್ ದರ್ಬಾರ್ ಮಾಡುತ್ತಿದ್ದು, ಆ ವಿಷಯದಲ್ಲಿ ಉತ್ತರದವರಿಗಿಂದ ದಕ್ಷಿಣ ಸ್ಟಾರ್ಸ್ ಟಾಪರ್ ಆಗಿದ್ದಾರೆ. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ಹೀರೋಗಳು ಬಾಲಿವುಡ್ ಸ್ಟಾರ್ಸ್ ಮಾತ್ರ ಅನ್ನೋ ಹಣೆಪಟ್ಟಿ ದಶಕಗಳಿಂದ ಇತ್ತು. 

ಚಿತ್ರರಂಗದಲ್ಲಿ ಕಾಲ ಮತ್ತೊಮ್ಮೆ ನಮಗಾಗಿ ಬಂದಿದೆ. ಒಂದ್ ಕಾಲದಲ್ಲಿ ಭಾರತೀಯ ಚಿತ್ರರಂಗವನ್ನ ಆಳುತ್ತಿದ್ದವರು ಡಾಕ್ಟರ್ ರಾಜ್ ಕುಮಾರ್, ಎಂ.ಜಿ.ಆರ್, ಎನ್ಟಿಆರ್. ಆದ್ರೆ ಅವರ ಟೈಂ ಮುಗಿದ ಮೇಲೆ ಬಾಲಿವುಡ್‌ನ ಸ್ಟಾರ್ಸ್ ಅಂಗೈಗೆ ಇಂಡಿಯನ್ ಸಿನಿ ಇಂಡಸ್ಟ್ರಿ ಸೇರ್ತು. ಆದ್ರೆ ಈಗ ಮತ್ತೆ ನಮ್ಮ ಸೌತ್ ಸಿನಿ ದುನಿಯಾ ಅಂಗಳದಲ್ಲಿ ಇಂಡಿಯನ್ ಸಿನಿಮಾ ಚೆಂಡು ಬಂದು ಬಿದ್ದಿದೆ. ಹೀಗಾಗಿ ಭಾರತೀಯ ಚಿತ್ರರಂಗದಲ್ಲಿ ಸೌತ್ ಸ್ಟಾರ್ ದರ್ಬಾರ್ ಮಾಡುತ್ತಿದ್ದು, ಆ ವಿಷಯದಲ್ಲಿ ಉತ್ತರದವರಿಗಿಂದ ದಕ್ಷಿಣ ಸ್ಟಾರ್ಸ್ ಟಾಪರ್ ಆಗಿದ್ದಾರೆ. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ಹೀರೋಗಳು ಬಾಲಿವುಡ್ ಸ್ಟಾರ್ಸ್ ಮಾತ್ರ ಅನ್ನೋ ಹಣೆಪಟ್ಟಿ ದಶಕಗಳಿಂದ ಇತ್ತು. ಆದ್ರೆ ಈಗ ಆ ಬೋರ್ಡ್ ದಕ್ಷಿಣ ಭಾರತ ಸಿನಿ ದುನಿಯಾಗೆ ಅಂಟಿದೆ. 

ಭಾರತದಲ್ಲೇ ಹೈಯೆಸ್ಟ್ ಪೈಯ್ಡ್ ಹೀರೋಗಳು ಇರೋದು ದಕ್ಷಿಣ ಭಾರದದಲ್ಲಿ ಅನ್ನೋ ಸತ್ಯ ಈಗ ಹೊರ ಬಂದಿದೆ. ಆ ಲೀಸ್ಟ್‌ನಲ್ಲಿ ಇರೋ ಸೂಪರ್ ಹೀರೋಗಳು ಯಾರು ಅಂತೀರಾ.. ಅವರೇ ರಾಕಿಂಗ್ ಸ್ಟಾರ್ ಯಶ್, ಡಾರ್ಲಿಂಗ್ ಪ್ರಭಾಸ್, ದಳಪತಿ ವಿಜಯ್. ಕಳೆದ ವರ್ಷ ಭಾರತದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಯಾವ್ದು ಅಂತ ಹುಡುಕಿದ್ರೆ ಅದರಲ್ಲಿ ಸಿಗೋ ಮೊದಲ ಹೆಸರು ರಾಕಿಂಗ್ ಸ್ಟಾರ್ ಯಶ್ರ ಕೆಜಿಎಫ್ ಚಾಪ್ಟರ್2.. 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರೋ ಈ ಸಿನಿಮಾದಿಂದ ರಾಕಿಂಗ್ ಸ್ಟಾರ್ 150 ಕೋಟಿಗೂ ಅಧಿಕ ಶೇರ್ ಪಡೆದಿದ್ದಾರೆ ಅನ್ನೋ ಮಾಹಿತಿ ಇದೆ. ಹೀಗಾಗಿ ಯಶ್ ಭಾರದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ ಅನ್ನೋದು ಎಲ್ಲರ ಊಹೆಯೂ ಆಗಿತ್ತು. ಆದ್ರೆ ಈಗ ಟಾಲಿವುಡ್ ಕಡೆಯಿಂದ ಹೊಸ ಹೆಸರು ಹುಟ್ಟಿಕೊಂಡಿದೆ. 

ಯಶ್ ಪ್ರಭಾಸ್, ದಳಪತಿ ವಿಜಯ್ ಅತಿ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ಗಳಾಗಿದ್ರೂ ಅವರಲ್ಲಿ ನಂಬರ್ ಒನ್ ಡಾರ್ಲಿಂಗ್ ಪ್ರಭಾಸ್ ಅನ್ನೋದು ಗೊತ್ತಾಗಿದೆ. ಟಾಲಿವುಡ್‌ನ ಬಾಹುಬಲಿ ಪ್ರಭಾಸ್ ಬಾಹುಬಲಿ 2 ಸಿನಿಮಾದ ನಂತರ ಬಾಕ್ಸಾಫೀಸ್ನಲ್ಲಿ ಅಬ್ಬರಿಸಿಲ್ಲ. ಆದ್ರೆ ಪ್ರಭಾಸ್ಗಿರೋ ಇಮೇಜ್ ಡಿಮ್ಯಾಂಡ್ ಮಾತ್ರ ಕಡಿಮೆ ಆಗಿಲ್ಲ. ಪ್ರಭಾಸ್ ಆಧಿಪುರುಷ್ ಹಾಗು ಸಲಾರ್ ಸಿನಿಮಾಗಳು ಬಿಡುಗಡೆ ಹೊಸ್ತಿಲಲ್ಲಿವೆ. ಈ ಟೈಂನಲ್ಲಿ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ ಪ್ರಭಾಸ್ ಅನ್ನೋದು ಗೊತ್ತಾಗಿದೆ. ಪ್ರಭಾಸ್ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ನಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಬರೋಬ್ಬರಿ 185 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಪ್ರಭಾಸ್. ನ್ಯಾಷನಲ್ ಸ್ಟಾರ್ ಯಶ್ ಗಿರೋ ಡಿಮ್ಯಾಂಡ್ ಏನು ಕಡಿಮೆ ಅಲ್ಲ. 

ಬಾಕ್ಸಾಫೀಸ್‌ನಲ್ಲಿ ಸೌತ್ ಚಿತ್ರರಂಗ ಮತ್ತೊಬ್ಬ ಸ್ಟಾರ್ ಮಾಡೋದಕ್ಕೆ ಆಗದೇ ಇರೋ ರೆಕಾರ್ಡ್ ಅನ್ನ ಕೆಜಿಎಫ್-2ನಲ್ಲಿ ಮಾಡಿರೋ ರಾಕಿ ಕೂಡ ಒಂದ್ ಸಿನಿಮಾಗೆ 160 ರಿಂದ 170 ಕೋಟಿ ಸಂಭಾವನೆಯನ್ನ ಶೇರ್ ರೂಪದಲ್ಲಿ ಪಡೆಯುತ್ತಿದ್ದಾರೆ. ಹೀಗಾಗಿ ಅತಿ ಹೆಚ್ಚು ರೆಮಂಡ್ರೇಷನ್ ಪಡೆಯೋ ಸೌತ್ ಹೀರೋಗಳ ಲೀಸ್ಟ್ನಲ್ಲಿ ಯಶ್ ಕೂಡ ಇದ್ದಾರೆ. ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಹೆಸ್ರು ಈಗ ಅತಿ ಹೆಚ್ಚು ಸಂಭಾವನೆ ಪಡೆಯೋ ಭಾರತದ ಸ್ಟಾರ್ ಲೀಸ್ಟ್‌ಗೆ ಸೇರಿಕೊಂಡಿದೆ. ವಾರಿಸು ಸಿನಿಮಾದಲ್ಲಿ ಬಾಕ್ಸಾಫೀಸ್ ದೋಚಿರೋ ವಿಜಯ್ ತಮ್ಮ ನೆಕ್ಟ್ಸ್ ಪ್ರಾಜೆಕ್ಟ್ ದಳಪತಿ 67 ಸಿನಿಮಾಗೆ ಬರೋಬ್ಬರಿ 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಹೀಗಾಗಿ ಈಗ ಭಾರದಲ್ಲಿ ಅತಿ ಹೆಚ್ಚು ಸಂಭಾವನೆ ಜೇಬಿಗಿಳಿಸೋ ಹೀರೋಗಳ ಲೀಸ್ಟ್‌ನಲ್ಲಿ ಪ್ರಭಾಸ್, ಯಶ್, ದಳಪತಿ ವಿಜಯ್ ಟಾಪ್ ಥ್ರೀ ಸ್ಥಾನದಲ್ಲಿದ್ದಾರೆ.. ಈ ಮೂಲಕ ಬಾಲಿವುಡ್ ಸ್ಟಾರ್ ಕೈಯಲ್ಲಿದ್ದ ಅತಿ ಹೆಚ್ಚು ಸಂಭಾವನೆ ಅನ್ನೋ ಕೀರ್ತಿಯನ್ನ ಸೌತ್ ಸ್ಟಾರ್ಸ್ ಕಿತ್ತುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment