Asianet Suvarna News Asianet Suvarna News

ಹೀನಾಯ ಸ್ಥಿತಿಯಲ್ಲಿ ಆದಿಪುರುಷ್ ಕಲೆಕ್ಷನ್: ಹಾಕಿದ ಬಂಡವಾಳ ಬರುವುದೂ ಡೌಟು?

ಪ್ರಭಾಸ್ ನಟನೆಯ ಆದಿಪುರುಷ್ ಕಲೆಕ್ಷನ್  ಹೀನಾಯ ಸ್ಥಿತಿಯಲ್ಲಿದೆ. ಹಾಕಿದ ಬಂಡವಾಳ ಬರುವುದೂ ಡೌಟು ಎನ್ನುವ ಮಾತು ಕೇಳಿ ಬರುತ್ತಿದೆ. 

First Published Jun 26, 2023, 4:21 PM IST | Last Updated Jun 26, 2023, 4:21 PM IST

ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಹೀನಾಯ ಸೋಲು ಕಂಡಿದೆ. ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ ನಿರ್ಮಾಪಕರು ಬೀಗಿದೆ ಬರುವ ಹಾಗಾಗಿದೆ. ಪ್ರಾರಂಭದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತಮವಾಗಿದ್ದರೂ ನಂತರ ದಿಢೀರ್ ಕುಸಿತವಾಗಿದೆ. ಆದಿಪುರುಷ್ ಹೀನಾಯ  ಸ್ಥಿತಿ ತಲುಪಿದೆ. ಇದೀಗ ಬಂದ ಆದಾಯ ನೋಡಿದ್ರೆ ಹಾಕಿದ ಬಂಡವಾಳ ಕೂಡ ವಾಪಾಸ್ ಬರುವುದು ಅನುಮಾನ ಎನ್ನಲಾಗುತ್ತಿದೆ. 600 ಕೋಟಿ ರೂಪಾಯಿಗೂ ವೆಚ್ಚದಲ್ಲಿ ಆದಿಪುರುಷ್ ತಯಾರಾಗಿದೆ. ಆದರೆ ಕಲೆಕ್ಷನ್ ಅರ್ಧ ಕೂಡ ಆಗಿಲ್ಲ. ಮುಂದಿನ ದಿನಗಳಲ್ಲಿ ಹೀಗೆ ಸಾಗಿದ್ರೆ ನಿರ್ಮಾಪಕರ ಸ್ಥಿತಿ ಮತ್ತಷ್ಟು ಹೀನಾಯವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. 
 

Video Top Stories