
Prabhas Wedding: ಬಾಲಯ್ಯನ ಮುಂದೆ ಮದುವೆ ಸೀಕ್ರೆಟ್ ರಿವೀಲ್ ಮಾಡಿದ ಪ್ರಭಾಸ್: ಬಾಹುಬಲಿ ಕಲ್ಯಾಣ ಯಾವಾಗ?
ತೆಲುಗು ನಟ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು ‘ಸಲ್ಮಾನ್ ಖಾನ್ ಮದುವೆ ಆದ ನಂತರವೇ ನನ್ನ ಮದುವೆ ಎಂದು ಅವರು ಹೇಳಿದ್ದಾರೆ.
ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆಗರುವ ಪ್ರಭಾಸ್ ಇತ್ತೀಚಿಗೀಷ್ಟೆ ತೆಲುಗು ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK2 ಶೋನಲ್ಲಿ ಭಾಗಿಯಾಗಿದ್ದರು. ಶೋನಲ್ಲಿ ನಂದಮೂರಿ ಬಾಲಕೃಷ್ಣ, ಪ್ರಭಾಸ್‌ಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದರು. ಯಾವಾಗ ಸೆಟಲ್ ಆಗ್ತೀರಿ ಎಂದು ಕೇಳಿದರು. ಪ್ರಭಾಸ್ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ. ಬಾಲಕೃಷ್ಣ ಪ್ರಶ್ನೆ ಕೇಳುತ್ತಿದ್ದಂತೆ, 'ಸಲ್ಮಾನ್ ಖಾನ್ ಮದುವೆಯಾದ ಬಳಿಕ' ಎಂದು ಹೇಳಿದರು.