ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ

ಯುದ್ಧ ಅಂದ್ರೆನೇ ಸರ್ವನಾಶಕ್ಕೆ ಮತ್ತೊಂದು ಪದ.. ಯುದ್ಧ ಅಂದ್ರೆ ಕಣ್ಮುಂದೆ ಬರೋದು, ಸೋತವನ ಸಾವು.. ಗೆದ್ದವನ ಸೋಲು.. ಆದ್ರೆ, ಅಮೆರಿಕಾ ಮಾಡೋ ಯುದ್ಧ ಇದ್ಯಲ್ಲಾ, ಅದು ಅಸಲಿಗೆ ಯುದ್ಧವೇ ಅಲ್ಲ.. ದಟ್ ಇಸ್ ಬ್ಯುಸಿನೆಸ್.

Share this Video
  • FB
  • Linkdin
  • Whatsapp

ಯುದ್ಧ ಅಂದ್ರೆನೇ ಸರ್ವನಾಶಕ್ಕೆ ಮತ್ತೊಂದು ಪದ.. ಯುದ್ಧ ಅಂದ್ರೆ ಕಣ್ಮುಂದೆ ಬರೋದು, ಸೋತವನ ಸಾವು.. ಗೆದ್ದವನ ಸೋಲು.. ಆದ್ರೆ, ಅಮೆರಿಕಾ ಮಾಡೋ ಯುದ್ಧ ಇದ್ಯಲ್ಲಾ, ಅದು ಅಸಲಿಗೆ ಯುದ್ಧವೇ ಅಲ್ಲ.. ದಟ್ ಇಸ್ ಬ್ಯುಸಿನೆಸ್.. ನಷ್ಟವೇ ಇಲ್ಲದ ವ್ಯವಹಾರ.. ಅಮೆರಿಕಾದ ಕಂಪನಿಗಳಿಗೆ ಯುದ್ಧವೇ ಜೀವಾಳ.. ಈ ಮಾತನ್ನ ನಾವು ಹೇಳ್ತಾ ಇಲ್ಲ.. ಈ ಹೊತ್ತಿನ, ಈ ಕ್ಷಣದ ಸುದ್ದಿಗಳು, ಇತಿಹಾಸದ ಪುಟದಲ್ಲಿ ದಾಖಲಾಗಿರೋ ಕಹಿಸತ್ಯಗಳು.. ಅವೇ ಈ ಮಾತನ್ನ ಒತ್ತಿ ಒತ್ತಿ ಹೇಳ್ತಿದ್ದಾವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ಸಮಾಧಿ ಮೇಲೆ ಸಾಮ್ರಾಜ್ಯ ಅಂದ್ರೆ, ಅದರ ಒಳಗುಟ್ಟೇನು? ಅಮೆರಿಕಾ ಮಾಡೋ ಯುದ್ಧ ಅದೆಂಥಾ ಲಾಭದ ಬ್ಯುಸಿನೆಸ್ ಅಂತ ನೋಡಿದ್ರೆ ಆಶ್ಚರ್ಯವಾಗುತ್ತೆ ಅಲ್ವಾ? ಹಾಗಾದ್ರೆ, ನಿಮ್ಮನ್ನ ಇನ್ನೊಂದ್ ಸ್ವಲ್ಪ ಆಶ್ಚರ್ಯಗೊಳಿಸೋ ಸಂಗತಿಗಳೂ ಇದಾವೆ. ಪದೇ ಪದೇ ಟ್ರಂಪ್ ಹೇಳೋದು ಅಮೆರಿಕಾ ಫಸ್ಟ್ ಅಂತ.. ಅದನ್ ನೋಡಿ ಜಗತ್ತು ಅಂದುಕೊಂಡಿರೋದು ಅಮೆರಿಕನ್ನರಿಗೆ ಅಮೆರಿಕಾದಲ್ಲಿ ಉದ್ಯೋಗ ಕೊಡೋಕೆ ಟ್ರಂಪ್ ಶತಪ್ರಯತ್ನ ಮಾಡ್ತಾ ಇದಾರೆ ಅಂತ.. ಹೌದು ತಾನೇ? ಆದ್ರೆ ಅದರ ಹಿಂದಿರೋ ಅಸಲಿ ಗೇಮ್ ಬೇರೆಯೇ ಇದೆ.

Related Video