
ವಿವಾದದ ಕಿಡಿ ಹೊತ್ತಿಸಿದ ಸ್ಪಿರಿಟ್ ಟೀಸರ್, ಇಂಡಿಯಾದ ಅತಿದೊಡ್ಡ ಸೂಪರ್ ಸ್ಟಾರ್ ಯಾರು..?
ಡಾರ್ಲಿಂಗ್ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ನ ಸ್ಪಿರಿಟ್ ಸಿನಿಮಾದ ಮೊದಲ ಆಡಿಯೋ ಟೀಸರ್ ರಿಲೀಸ್ ಆಗಿದೆ. ಆದ್ರೆ ಮೊದಲ ಟೀಸರ್‌ನಿಂದಲೇ ಒಂದು ವಿವಾದ ಕೂಡ ಶುರುವಾಗಿದೆ. ಅದೇನು ನೋಡಿ.. ಬೇಕಿತ್ತಾ ಇದೆಲ್ಲಾ ಹೇಳಿ..
ಡಾರ್ಲಿಂಗ್ ಪ್ರಭಾಸ್ (Prabhas) ಮತ್ತು ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಕಾಂಬಿನೇಷನ್ನ ಸ್ಪಿರಿಟ್ ಸಿನಿಮಾದ ಮೊದಲ ಆಡಿಯೋ ಟೀಸರ್ ರಿಲೀಸ್ ಆಗಿದೆ. ಆದ್ರೆ ಮೊದಲ ಟೀಸರ್‌ನಿಂದಲೇ ಒಂದು ವಿವಾದ ಕೂಡ ಶುರುವಾಗಿದೆ.
ಡಾರ್ಲಿಂಗ್ ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾ ಬಿಗ್ ಅಪ್ಡೇಟ್ ಹೊರಬಂದಿದೆ. ವಿಡಿಯೋ ಟೀಸರ್ ಬದಲು ಆಡಿಯೋ ರಿಲೀಸ್ ರಿವೀಲ್ ಮಾಡಿರೋ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೊಸ ಟ್ರೆಂಡ್ ಶುರುಮಾಡಿದ್ದಾರೆ.
ಐದು ಭಾಷೆಗಳಲ್ಲಿ ಸ್ಪಿರಿಟ್ ಆಡಿಯೋ ಟೀಸರ್ ಬಂದಿದ್ದು, ಅದ್ರಲ್ಲಿ ಪ್ರಕಾರ್ ರೈ ಮತ್ತು ಪ್ರಭಾಸ್ ನಡುವಿನ ಸಂಭಾಷಣೆ ಇದೆ. ಪ್ರಭಾಸ್ ನನಗೆ ಚಿಕ್ಕ ವಯಸ್ಸಿಂದಲೂ ಒಂದು ಬ್ಯಾಡ್ ಹ್ಯಾಬಿಟ್ ಇದೆ ಅಂತಾರೆ.. ಆಗ ಸ್ಪಿರಿಟ್ ಅಂತ ಟೈಟಲ್ ತೋರಿಸಲಾಗುತ್ತೆ.
ಕನ್ನಡದಲ್ಲೂ ಟೀಸರ್ ಬಂದಿದ್ದು , ಪ್ರಭಾಸ್ ಕನ್ನಡ ವರ್ಷನ್ಗೂ ವಾಯ್ಸ್ ಕೊಟ್ಟಿರೋದು ವಿಶೇಷ. ಟೀಸರ್ ಏನೋ ಸಖತ್ ಆಗಿದೆ. ಆದ್ರೆ ಪ್ರಭಾಸ್ ಹೆಸರು ತೋರಿಸುವಾಗ ಇಂಡಿಯಾದ ಬಿಗ್ಗೆಸ್ಟ್ ಸೂಪರ್ ಸ್ಟಾರ್ ಅಂತ ತೋರಿಸಿದ್ದಾರೆ ನಿರ್ದೇಶಕ ವಂಗಾ. ಇದು ಸಹಜವಾಗೇ ಫ್ಯಾನ್ ವಾರ್ಗೆ ಕಾರಣ ಆಗಿದೆ.
ಬೇರೆ ನಟರ ಫ್ಯಾನ್ಸ್ ಇದರ ಮೇಲೆ ಗರಂ ಆಗಿದ್ದಾರೆ. ವಿಶೇಷವಾಗಿ ಬಾಲಿವುಡ್ ತಾರೆಯರ ಫ್ಯಾನ್ಸ್ ಇದರ ಬಗ್ಗೆ ಕಿಡಿಕಾರ್ತಾ ಇದ್ದಾರೆ. ಒಟ್ನಲ್ಲಿ ಬರೀ ಟೀಸರ್‌ನಿಂದಲೇ ವಿವಾದದ ಕಿಡಿ ಹೊತ್ತಿಸಿದ್ದಾರೆ ಪ್ರಭಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..