Alia Bhatt: 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಸುತ್ತ ವಿವಾದಗಳ ಸರಮಾಲೆ!

ಬಾಲಿವುಡ್ ನಟಿ ಅಲಿಯಾ ಭಟ್ ನಟಿಸಿರುವ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' ಈಗ ಬಿಡುಗಡೆಗೂ ಮೊದಲೇ ಸಂಕಷ್ಟವನ್ನು ಎದುರಿಸುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರವು ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ.

Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ಅಲಿಯಾ ಭಟ್ (Alia Bhatt) ನಟಿಸಿರುವ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' (Gangubai Kathiawadi) ಈಗ ಬಿಡುಗಡೆಗೂ ಮೊದಲೇ ಸಂಕಷ್ಟವನ್ನು ಎದುರಿಸುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರವು ಫೆಬ್ರವರಿ 25ರಂದು ತೆರೆಗೆ ಬರುತ್ತಿದ್ದು, ಚಿತ್ರದ ಟೈಟಲ್‌ನ್ನು ಬದಲಾಯಿಸಬೇಕೆಂದು ಗಂಗೂಬಾಯಿಯ ದತ್ತು ಪುತ್ರ ಹೈಕೋರ್ಟ್‌ (High Court) ಮೊರೆ ಹೋಗಿದ್ದಾರೆ. ಈ ಚಿತ್ರದಲ್ಲಿ 'ನನ್ನ ತಾಯಿಯನ್ನು ವೇಶ್ಯೆಯನ್ನಾಗಿ ಪರಿವರ್ತಿಸಲಾಗಿದೆ. ಜನರು ಈಗ ನನ್ನ ತಾಯಿಯ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡತೊಡಗಿದ್ದಾರೆ' ಎಂದು ಗಂಗೂಬಾಯಿ ಅವರ ದತ್ತು ಪುತ್ರ ಎಂದು ಹೇಳಿಕೊಂಡಿರುವ ಬಾಬು ರಾವ್‍ಜೀ ಶಾ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

Gangubai Kathiawadi: ಆಲಿಯಾ ಭಟ್ ವಿರುದ್ಧ ಅಸಮಾಧಾನ ಹೊರಹಾಕಿದ ಕಂಗನಾ

ಇನ್ನು ಈ ಚಿತ್ರದಲ್ಲಿ ಆಲಿಯಾ ಮುಂಬೈನ ರೆಡ್ ಲೈಟ್ ಏರಿಯಾದ ಕಾಮಟಿಪುರದ ಪವರ್‌ಫುಲ್‌ ಮಹಿಳೆ ಗಂಗೂಬಾಯಿ ಪಾತ್ರದಲ್ಲಿ ನಟಿಸಿದ್ದಾರೆ.ಈ ಸಿನಿಮಾವು ನೈಜ ಕಥೆ ಆಧಾರಿತವಾಗಿದೆ. ಕಥೆಯು ಗುಜರಾತಿನ ಕಥಿಯಾವಾರದಲ್ಲಿ ವಾಸಿಸುವ ಗಂಗೂಬಾಯಿಯ ಜೀವನದ ಕುರಿತಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್ (Ajay Devgan) ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಕಥೆಯು 'ದಿ ಮಾಫಿಯಾ ಕ್ವೀನ್ ಆಫ್ ಮುಂಬೈ' ಈ ಪುಸ್ತಕವನ್ನು ಹುಸೇನ್ ಜೈದಿ ಬರೆದಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video