Ramayana Movie: ಬಿಟೌನ್ ರಾಮಾಯಣದ ಬಗ್ಗೆ ಸಿಕ್ತು ಮತ್ತೊಂದು ಬಿಗ್ ನ್ಯೂಸ್..! ಹೀರೋ ರಣ್ಬೀರ್ ಅಲ್ಲವೇ ಅಲ್ಲ, ಮತ್ಯಾರು ?

ಬಾಲಿವುಡ್‌ನಲ್ಲಿ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಈ ಸಿನಿಮಾದ ಶೂಟಿಂಗ್  ತೆರೆಮರೆಯಲ್ಲಿ ಸದ್ದಿಲ್ಲದೇ ಶುರುವಾಗಿದೆ.

First Published Apr 22, 2024, 11:14 AM IST | Last Updated Apr 22, 2024, 11:14 AM IST

ರಾಮಾಯಣ ಸಿನಿಮಾ ದೇಶಾದ್ಯಂತ ಟಾಕ್ ಆಗ್ತಿರೋದಕ್ಕೆ ಕಾರಣ ನ್ಯಾಷನಲ್ ಸ್ಟಾರ್ ಯಶ್. ಸಧ್ಯ ಟ್ರೆಂಡಿಂಗ್‌ನಲ್ಲಿರೋ ಯಶ್ ರಾಮಾಯಣದ ರಾವಣ ಕಮ್ ನಿರ್ಮಾಪಕ ಅಂದ ಕೂಡ್ಲೆ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗತೊಡಗಿದೆ. ಆದ್ರೆ ರಾಮಾಯಣ(Ramayana movie) ಅಂತ ಬಂದ್ರೆ ಹೀರೋ ರಾಮನೇ ಆಗಿರಬೇಕು. ಈ ರಾಮನ ರೋಲ್ ಮಾಡುತ್ತಿರೋದು ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ರಣ್ಬೀರ್ ಕಪೂರ್. ಬಟ್ ನಿತೀಶ್ ತಿವಾರಿ(Nitesh Tiwari) ನಿರ್ದೇಶನದ ರಾಮಾಯಣದಲ್ಲಿ ರಣ್ಬೀರ್ ಹೀರೋ ಅಲ್ಲವೇ ಅಲ್ಲ ಅನ್ನೋ ಬಿಗ್ ನ್ಯೂಸ್ ಒಂದು ಹೊರ ಬಂದಿದೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಗ್ಗೆ ಬಾಲಿವುಡ್ ನಟ ಆದಿತ್ಯಾ ದೇಶ್‌ಮುಖ್(Aditya Deshmukh) ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ರಾಮಾಯಣದಲ್ಲಿ ಯವ್ವನದ ದಶರಥ ರಾಜನ ಪಾತ್ರದಲ್ಲಿ ಆದಿತ್ಯಾ ದೇಶ್‌ಮುಖ್ ನಟಿಸಬೇಕಿತ್ತು. ಆದ್ರೆ ಡೇಟ್ಸ್ ಇಲ್ಲದ ಕಾರಣ ಆ ಸಿನಿಮಾದಿಂದ ಹೊರ ಬಂದಿದ್ದಾರೆ. ಇದೀಗ ಸಂದರ್ಶನ ಒಂದರಲ್ಲಿ ಮಾತನಾಡಿರೋ ಆದಿತ್ಯಾ ದೇಶ್ಮುಖ್ ರಾಮಾಯಣದ ಹೀರೋ ಯಾರು ಅಂತ ಬಿಚ್ಚಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಲಂಕಾದಿಪತಿ ರಾವಣ ಅಂತ ಬಾಯ್ಬಿಟ್ಟಿದ್ದಾರೆ. ಅಂದ್ರೆ ಯಶ್(Yash) ಪಾತ್ರದ ಮೇಲೆಯೇ ಸಿನಿಮಾ ಸಾಗಲಿದೆ ಅನ್ನೋದು ಇಂಟ್ರೆಸ್ಟಿಂಗ್. ನಮ್ಗೆ ನಿಮ್ಗೆಲ್ಲಾ ರಾವಣ ಅಂದ್ರೆ ವಿಲನ್. ಆದ್ರೆ ರಾವಣನಲ್ಲೂ ಕೆಲವೊಂದು ಒಳ್ಳೆ ಗುಣಗಳಿದ್ವು, ರಾವಣನನ್ನೂ ಆರಾಧಿಸೋ ಜನ ನಮ್ಮಲ್ಲಿದ್ದಾರೆ. ಹೀಗಾಗಿ'ರಾಮಾಯಣ' ಚಿತ್ರವನ್ನು ರಾವಣನ ದೃಷ್ಟಿಕೋನದಲ್ಲಿ ಕಟ್ಟಿಕೊಡಲಾಗುತ್ತಿದೆಯಂತೆ. ರಾವಣನ ದೃಷ್ಟಿಕೋನದಲ್ಲಿ 'ರಾಮಯಣ' ಅಂದ್ರೆ ಒಂದರ್ಥದಲ್ಲಿ ರಾವಣನೇ ಕಥೆಯ ಹೀರೊ. ರಾವಣನ ದೃಷ್ಟಿಕೋನದಲ್ಲಿ 'ರಾಮಾಯಣ' ಬಗ್ಗೆ ಕೆಲ ಜನಪದ ಕಥೆಗಳು ಇದೆ. ರಾವಣನನ್ನೇ ವೈಭವಿಕರಿಸಿ ಒಂದಷ್ಟು ಕೃತಿಗಳು, ನಾಟಕಗಳು ರಚನೆ ಆಗಿದೆ. ಇದೇ ರೀತಿ ನಿತೇಶ್ ತಿವಾರಿ ಈಗ 'ರಾಮಾಯಣ' ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಹೊಸ ಚರ್ಚೆ ಶುರುವಾಗಿದೆ. ಅಂದರೆ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಬಹಳ ಮಹತ್ವವಿದೆ ಎನ್ನುವಂತಾಯಿತು. ಈ ರೋಲ್ ಮಾಡೋದು ಯಶ್ ಅನ್ನೋದೇ ಇಂಟ್ರೆಸ್ಟಿಂಗ್.

ಇದನ್ನೂ ವೀಕ್ಷಿಸಿ:  Bollywood: ಭಾರತದಲ್ಲಿದ್ರೂ ಯಾವತ್ತೂ ವೋಟ್ ಹಾಕದ ನಟಿಯರಿವರು: ಕೆಲಸ ಮಾಡೋದು ಇಲ್ಲಿ, ಆದ್ರೆ ಮತದಾನ ಮಾಡಲ್ಲ ಯಾಕೆ?