ಕಾಲಿವುಡ್‌ಗೆ ಹಾರಿದ ಸ್ಯಾಂಡಲ್ ವುಡ್ ಚಿಟ್ಟೆ: ತಮಿಳು ಸಿನಿಮಾದಲ್ಲಿ ವಸಿಷ್ಠ ಸಿಂಹ ವಿಲನ್

ಸ್ಯಾಂಡಲ್ ವುಡ್‌ನಲ್ಲಿ ವಿಲನ್ ರೋಲ್‌ಗಳ ಮೂಲಕ ಚಿಟ್ಟೆ ಅಂತಲೇ ಫೇಮಸ್ ಆಗಿರೋ ನಟ ವಸಿಷ್ಠ ಸಿಂಹ, ಇದೀಗ ಕಾಲಿವುಡ್‌ಗೆ ಹಾರಿದ್ದಾರೆ.
 

Share this Video
  • FB
  • Linkdin
  • Whatsapp

ತಮಿಳಿನಲ್ಲಿ ಪ್ರಭುದೇವ ನಟನೆಯ 60ನೇ ಸಿನಿಮಾದಲ್ಲಿ ನಟ ವಸಿಷ್ಠ ಸಿಂಹ ವಿಲನ್ ರೋಲ್'ಗೆ ಆಯ್ಕೆ ಆಗಿದ್ದಾರೆ. ಆ ಸಿನಿಮಾಗೆ ‘ವೂಲ್ಫ್’ ಎಂದು ಹೆಸರಿಡಲಾಗಿದ್ದು, ಟೈಟಲ್ ರಿವೀಲ್ ಮಾಡಿ ತಮ್ಮ ತಮಿಳು ಸಿನಿಮಾದ ಗುಟ್ಟನ್ನು ರಟ್ಟು ಮಾಡಿದ್ದಾರೆ ವಸಿಷ್ಠ ಸಿಂಹ. ಕಲಾವಿದರಿಗೆ ಭಾಷೆಯ ಗಡಿ ಇಲ್ಲ ಅಂತ ಸ್ಟಾರ್ ಹೀರೋಗಳೆಲ್ಲಾ ಆಗಾಗ ಹೇಳ್ತಾನೆ ಇರ್ತಾರೆ. ಇದರರ್ಥ ಕಲಾವಿದರಾದವರು ಯಾವಾಗ ಯಾವ್ ಭಾಷೆಯ ಸಿನಿಮಾ ಬೇಕಾದ್ರು ಮಾಡ್ಬಹುದು ಅನ್ನೋದು. ಹೀಗಾಗೆ ಕನ್ನಡದ ಅನೇಕ ನಟರು ತೆಲುಗು, ತಮಿಳು ಚಿತ್ರರಂಗದಲ್ಲಿ ಕಮಾಲ್ ಮಾಡಲು ಹೋಗಿದ್ದಾರೆ. ಇದರಲ್ಲಿ ಯಾರು ಎಷ್ಟು ಸಕ್ಸಸ್ ಆಗ್ತಾರೆ ಅಂತ ಕಾದು ನೋಡ್ಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video