'ನನಗೆ ಚಿತ್ರರಂಗದ ದಾರಿ ತೋರಿಸಿದ್ದು ರಕ್ಷಿತ್ & ರಿಷಬ್': ರಶ್ಮಿಕಾಗೆ ಕೆಟ್ಟ ಮೇಲೆ ಬುದ್ಧಿ ಬಂತಾ?

ನಟಿ ರಶ್ಮಿಕಾ ಮಂದಣ್ಣಗೆ ತನ್ನ ಬೆಳವಣಿಗೆಗೆ ಕಾರಣರಾದವರನ್ನು ಮರೆತ ಪಶ್ಚಾತ್ತಾಪ ಕಾಡಿದಂತಿದೆ. ಯಾಕಂದ್ರೆ ಅವರಿಗೆ ಇದೀಗ ರಿಷಬ್ ಹಾಗೂ ರಕ್ಷಿತ್ ಶೆಟ್ಟಿಯನ್ನು ನೆನಪಾಗಿದ್ದಾರೆ.
 

Share this Video
  • FB
  • Linkdin
  • Whatsapp

ನನಗೆ ಚಿತ್ರರಂಗಕ್ಕೆ ಬರಲು ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಯೇ ದಾರಿ ತೋರಿಸಿದ್ದು ಎಂದು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಮೂಲಕ ತನ್ನ ಬೆಳವಣಿಗೆಗೆ ಕಾರಣವಾಗಿದ್ದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿಯನ್ನು ನೆನಪಿಸಿಕೊಂಡಿದ್ದಾರೆ. ತೆಲುಗು ಸಂದರ್ಶನದಲ್ಲಿ ಮಾತನಾಡಿರೋ ರಶ್ಮಿಕಾ, ಇದೇ ಫಸ್ಟ್ ಟೈಮ್ ಪ್ರಾಮಾಣಿಕವಾಗಿ ರಕ್ಷಿತ್ ಹಾಗೂ ರಿಷಬ್ ಹೆಸರು ಹೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ನನಗೆ ಮೊದಲು ಅವಕಾಶ ಕೊಟ್ಟಿದ್ದು. ಇವತ್ತಿಗೂ ನಾನು ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಗಳ ಜೊತೆ ಕೆಲಸ ಮಾಡಿದ್ದೀನಿ ಎಂದಿದ್ದಾರೆ.

Related Video