Asianet Suvarna News Asianet Suvarna News

ಟಾಕ್ಸಿಕ್ ಅಡ್ಡದಿಂದ ಬಂತು ಮತ್ತೊಂದು ಸೂಪರ್ ಸರ್​ಪ್ರೈಸ್: ಯಶ್ ಜೊತೆ ನಾನಿದ್ದೇನೆ ಎಂದ ಟಿಟೌನ್ ಲೇಡಿ ಸೂಪರ್ ಸ್ಟಾರ್!

ನಾನು ಟಾಕ್ಸಿಕ್​​ ಶೂಟಿಂಗ್​ನಲ್ಲಿದ್ದೇನೆ ಅಂತ ಲೇಡಿ ಸೂಪರ್ ಸ್ಟಾರ್ ನಯನತಾರಾ ಹೇಳ್ಬಿಟ್ಟಿದ್ದಾರೆ. ಯಶ್ ಟಾಕ್ಸಿಕ್​ನಲ್ಲಿ ಡ್ರಗ್​​ ಮಾಫಿಯಾದ ಬೆಬ್ಬು ಬಿದ್ದಿದ್ದಾರೆ. ಡ್ರಗ್ ಮಾಫಿಯಾ ಅಂದ್ಮೇಲೆ ಇಂಟರ್​​ನ್ಯಾಷನಲ್ ಸಿನಿ ಜಗತ್ತನ ಸೆಳೆಯೋ ಕಾನ್ಸೆಪ್ಟ್ ಈ ಸಿನಿಮಾದಲ್ಲಿದೆ ಅನ್ನೋದು ಪಕ್ಕಾ.
 

First Published Sep 7, 2024, 4:17 PM IST | Last Updated Sep 7, 2024, 4:32 PM IST

ಟಾಲಿವುಡ್​ ಲೇಡಿ ಸೂಪರ್​​ ಸ್ಟಾರ್​ ನಯನತಾರಾ ಯಶ್​ರ ಟಾಕ್ಸಿಕ್​ ಶೂಟಿಂಗ್ ಸೆಟ್​​ಗೆ ಬಂದಿದ್ದಾರೆ ಅನ್ನೋದು ದೊಡ್ಡ ಸುದ್ದಿಯಾಗಿತ್ತು. ಆದ್ರೆ ಇದು ನಿಜ ಅಂತ ಟಾಕ್ಸಿಕ್ ತಂಡ ಆಗ್ಲಿ, ನಯನತಾರ ಆಗ್ಲಿ ಹೇಳಿರಲಿಲ್ಲ. ಭಟ್ ಈಗ ಆ ಎಲ್ಲಾ ನಿರೀಕ್ಷೆಗೆ ಎರಡೆರಡು ಉತ್ತರ ಸಿಕ್ಕಿದೆ. ಅದು ಹೇಗೆ ಅಂತ ನೋಡೋಣ ಲೇಡಿ ಸೂಪರ್​ ಸ್ಟಾರ್​ ಬಗೆಗಿನ ಈ ಸ್ಟೋರಿಯಲ್ಲಿ. ರಾಕಿಂಗ್ ಸ್ಟಾರ್ ಯಶ್​​ ಟಾಕ್ಸಿಕ್​ ಈಗ ಟಾಕ್​ ಆಫ್​​ ದಿ ಟೌನ್. ಕೆಜಿಎಫ್​ ಸಿನಿಮಾ ಆದ್ಮೇಲೆ ಯಶ್ ಏನ್ ಮಾಡ್ತಾರೆ ಅನ್ನೋದಕ್ಕೆ ಉತ್ತರ ಟಾಕ್ಸಿಕ್. ಆಗಸ್ಟ್​ 8ರಿಂದ ಟಾಕ್ಸಿಕ್ ಶೂಟಿಂಗ್ ಶುರುವಾಗಿದೆ. 

ಆದ್ರೆ ಈ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಅವರಿದ್ದಾರೆ ಇವರಿದ್ದಾರೆ ಅಂತ ಸುದ್ದಿಯಾಗಿದ್ದು ಬಿಟ್ರೆ, ಯಾರಿದ್ದಾರೆ ಅನ್ನೋದಕ್ಕೆ ಒಂದ್​ ಫೋಟೋ ಕೂಡ ಸಿಕ್ಕಿರಲಿಲ್ಲ. ಭಟ್​ ಟಾಕ್ಸಿಕ್ ಅಡ್ಡದಿಂದ ಈಗ ಸೂಪರ್ ಸುದ್ದಿ ಲೀಕ್ ಆಗಿದೆ. ನಾನು ಟಾಕ್ಸಿಕ್​​ ಶೂಟಿಂಗ್​ನಲ್ಲಿದ್ದೇನೆ ಅಂತ ಲೇಡಿ ಸೂಪರ್ ಸ್ಟಾರ್ ನಯನತಾರಾ ಹೇಳ್ಬಿಟ್ಟಿದ್ದಾರೆ. ಯಶ್ ಟಾಕ್ಸಿಕ್​ನಲ್ಲಿ ಡ್ರಗ್​​ ಮಾಫಿಯಾದ ಬೆಬ್ಬು ಬಿದ್ದಿದ್ದಾರೆ. ಡ್ರಗ್ ಮಾಫಿಯಾ ಅಂದ್ಮೇಲೆ ಇಂಟರ್​​ನ್ಯಾಷನಲ್ ಸಿನಿ ಜಗತ್ತನ ಸೆಳೆಯೋ ಕಾನ್ಸೆಪ್ಟ್ ಈ ಸಿನಿಮಾದಲ್ಲಿದೆ ಅನ್ನೋದು ಪಕ್ಕಾ. ಹಾಗಿದ್ಮೇಲೆ ಈ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್ಸ್​ ಇರಲೇ ಬೇಕು. 

ಅದು ನಿಜ ಆಗ್ತಿದೆ. ಒಬ್ಬೊಬ್ಬರೇ ನಾವು ಟಾಕ್ಸಿಕ್ ಸಿನಿಮಾ ಭಾಗ ಆಗಿದ್ದೇವೆ ಅಂತ ಕನ್ಫರ್ಮ್ ಮಾಡುತ್ತಿದ್ದಾರೆ. ಈಗ ಲೇಡಿ ಸೂಪರ್ ಸ್ಟಾರ್​ ನಯನತಾರ ಟಾಕ್ಸಿಕ್ ಸೆಟ್​ನಲ್ಲಿರೋ ಚಿಕ್ಕದೊಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 'ಟಾಕ್ಸಿಕ್' ನಲ್ಲಿ ಯಶ್ ಜೊತೆ ಯಾರೆಲ್ಲಾ ನಟಿಸುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಅಕ್ಷಯ್ ಒಬೆರಾಯ್, ತಾರಾ ಸುತಾರ ಚಿತ್ರದಲ್ಲಿ ತಾವು ನಟಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ಕೈರಾ ಅಡ್ವಾನಿ ಹಾಗೂ ನಯನತಾರಾ ಸಹ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ನಯನತಾರಾ ಈಗ ಇದನ್ನ ಪಕ್ಕಾ ಮಾಡಿದ್ದಾರೆ. 

Video Top Stories