Kangana Controversy: ದೊಡ್ಡ ಮೀಸೆಯ ಶಾಹಿದ್ ಕಪೂರ್‌ಗೆ ಚುಂಬಿಸುವುದು ಟ್ರ್ಯಾಜಿಡಿ!

ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್‍ ನಟಿ ಕಂಗನಾ ರಣಾವತ್ ಶಾಹೀದ್ ಕಪೂರ್‍ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‍ ನಟರಲ್ಲಿ ಶಾಹೀದ್ ಕಪೂರ್‌ಗೆ ಕಿಸ್ ಮಾಡುವುದು ಅತಿ ದೊಡ್ಡ ಅಸಹ್ಯ ಕೆಲಸ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಬಾಲಿವುಡ್‌ನ (Bollywood) ಕಾಂಟ್ರವರ್ಸಿ ಕ್ವೀನ್‍ ನಟಿ ಕಂಗನಾ ರಣಾವತ್ (Kangana Ranaut). ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ತಮ್ಮ ಅದ್ಭುತ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿರುವ ಕಂಗನಾ ಎಂಥಾ ಪಾತ್ರ ನಟಿಸಲೂ ಸೈ ಎಂದೆನಿಸಿಕೊಂಡಿರುವ ಈ ನಟಿ ಆಗಿಂದಾಗೆ ವಿವಾದಗಳನ್ನು ಮಾಡಿಕೊಳ್ಳುತ್ತಾರೆ. ಇತಿಹಾಸ, ದೇಶದ ಬಗ್ಗೆ, ನಟರ ಬಗ್ಗೆ ಕಾಮೆಂಟ್ ಮಾಡಿ ಸದ್ಯ ಬೋಲ್ಡ್ ಹೇಳಿಕೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇದೀಗ ಶಾಹೀದ್ ಕಪೂರ್‍ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‍ ನಟರಲ್ಲಿ ಶಾಹೀದ್ ಕಪೂರ್‌ಗೆ (Shahid Kapoor) ಕಿಸ್ ಮಾಡುವುದು ಅತಿ ದೊಡ್ಡ ಅಸಹ್ಯ ಕೆಲಸ ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Gangubai Kathiawadi: ಆಲಿಯಾ ಭಟ್ ವಿರುದ್ಧ ಅಸಮಾಧಾನ ಹೊರಹಾಕಿದ ಕಂಗನಾ

ವಿಶಾಲ್ ಭಾರದ್ವಾಜ್ (Vishal Bharadwaj) ನಿರ್ದೇಶನ ಮಾಡಿದ 2017ರ ವಾರ್ ಕಂ ರೋಮ್ಯಾನ್ಸ್ ಸಿನಿಮಾ 'ರಂಗೂನ್‌'ನಲ್ಲಿ (Rangoon) ಕಂಗನಾ ಮತ್ತು ಶಾಹೀದ್ ಕಪೂರ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಜತೆಗಿನ ಅಭಿನಯದ ಕುರಿತಾದ ಅನುಭವವನ್ನು ಕಂಗನಾ ಮಾತನಾಡಿದ್ದು, ಶಾಹೀದ್ ಕಪೂರ್ ಜೊತೆಗಿನ ತನ್ನ ಚುಂಬನದ ದೃಶ್ಯವನ್ನು ಅವರು ಅಸಹ್ಯಕರವೆಂದು ವಿವರಿಸಿದ್ದಾರೆ. ರಂಗೂನ್‌ನಲ್ಲಿ ಚುಂಬನದ ದೃಶ್ಯದ ಬಗ್ಗೆ ಮಾತನಾಡಿರುವ ಕಂಗನಾ ರಣಾವತ್, ದೊಡ್ಡ ಮೀಸೆಯ ಶಾಹಿದ್ ಕಪೂರ್ ಅವರನ್ನು ಚುಂಬಿಸುವುದು ಒಂದು ರೀತಿಯಲ್ಲಿ ಟ್ರ್ಯಾಜಿಡಿ ಎಂದಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video