ಹುಟ್ಟುಹಬ್ಬ ಆಚರಿಸಿ ವಾಪಾಸ್ ಆದ ಸಿದ್ಧಾರ್ಥ್-ಕಿಯಾರಾ; ಪಾಪರಾಜಿಗಳ ಮೇಲೆ ಗರಂ ಆಗಿದ್ದೇಕೆ ನಟ?

ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾನಿ ತನ್ನಹುಟ್ಟುಹಬ್ಬವನ್ನು ಬಾಯ್‌ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿದೇಶದಲ್ಲಿ ಆಚರಣೆ ಮಾಡಿದ್ದದರು. ಇದೀಗ ವಿದೇಶಿ ಹುಟ್ಟುಹಬ್ಬ ಸಂಭ್ರಮಿಸಿ ಭಾರತಕ್ಕೆ  ವಾಪಸ್ ಆಗಿದ್ದಾರೆ. ಏರ್ಪೋರ್ಟ್ ನಲ್ಲಿ ಇಬ್ಬರು ಒಟ್ಟಿಗೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಪ್ಪು ಬಣ್ಣದ ಪ್ಯಾಂಟ್ ಮತ್ತು ಟಾಪ್ ನಲ್ಲಿ ಕಿಯಾರಾ ಕಾಣಿಸಿಕೊಂಡರೆ, ಸಿದ್ದಾರ್ಥ್ ಕೂಡ ಕಪ್ಪು ಪ್ಯಾಂಟ್ ಮತ್ತು ಬಿಳಿ ಬಣ್ಣದ ಟಿ ಶರ್ಟ್ ಧರಿಸಿದ್ದರು. 

Share this Video
  • FB
  • Linkdin
  • Whatsapp

ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾನಿ ತನ್ನಹುಟ್ಟುಹಬ್ಬವನ್ನು ಬಾಯ್‌ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿದೇಶದಲ್ಲಿ ಆಚರಣೆ ಮಾಡಿದ್ದದರು. ಇದೀಗ ವಿದೇಶಿ ಹುಟ್ಟುಹಬ್ಬ ಸಂಭ್ರಮಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಹೌದು, ಕಿಯಾರಾ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಜೋಡಿ ದುಬೈ ಹಾರಿದ್ದರು. ದುಬೈನಲ್ಲಿ ಸಿದ್ಧಾರ್ಥ್ ಪ್ರೇಯಸಿ ಕಿಯಾರಾ ಹುಟ್ಟುಹಬ್ಬ ಆಚರಿಸಿದ್ದಾರೆ. ದುಬೈನಲ್ಲಿದ್ದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಇದೀಗ ಲವ್ ಬರ್ಡ್ಸ್ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಏರ್ಪೋರ್ಟ್ ನಲ್ಲಿ ಇಬ್ಬರು ಒಟ್ಟಿಗೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಪ್ಪು ಬಣ್ಣದ ಪ್ಯಾಂಟ್ ಮತ್ತು ಟಾಪ್ ನಲ್ಲಿ ಕಿಯಾರಾ ಕಾಣಿಸಿಕೊಂಡರೆ, ಸಿದ್ದಾರ್ಥ್ ಕೂಡ ಕಪ್ಪು ಪ್ಯಾಂಟ್ ಮತ್ತು ಬಿಳಿ ಬಣ್ಣದ ಟಿ ಶರ್ಟ್ ಧರಿಸಿದ್ದರು. ಸಿದ್ಧಾರ್ಥ್ ಜೋಡಿಯ ಪೋಟೋ ಕ್ಲಿಕ್ಕಿಸುತ್ತಿದ್ದ ಪಾಪರಾಜಿಗಳ ವಿರುದ್ಧ ಸಿಟ್ಟಾದರು. ಆದರೆ ಕಿಯಾರಾ ನಗ ಬೀರುತ್ತಾ ಪರಿಸ್ಥಿತಿ ಶಾಂತ ಗೊಳಿಸಿ ಅಲ್ಲಿಂದ ಹೊರಟರು. ಸ್ಟಾರ್ ಜೋಡಿ ನೋಡಿ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video