
ಮಹಾಕಾಲೇಶ್ವರನಿಗೆ ಮಂಡಿಯೂರಿದ ರಾಕಿಂಗ್ ಸ್ಟಾರ್: ಮುಂದಿನ ವರ್ಷ ಯಶ್ ಕಡೆಯಿಂದ 2 ಸಿನಿಮಾ ಫಿಕ್ಸ್!
ರಾಕಿಂಗ್ ಸ್ಟಾರ್ ಯಶ್ ಯಾವ್ದೇ ಕೆಲಸ ಶುರು ಮಾಡಬೇಕಾದ್ರು ನೊದಲು ತಾನು ನಂಬೋ ದೇವಸ್ಥಾನಕ್ಕೆ ಹೋಗಿ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರಲಿ ಅಂತ ದೇವರ ಆಶೀರ್ವಾದ ಪಡೆಯುತ್ತಾರೆ.
ರಾಕಿಂಗ್ ಸ್ಟಾರ್ ಯಶ್ ಯಾವ್ದೇ ಕೆಲಸ ಶುರು ಮಾಡಬೇಕಾದ್ರು ನೊದಲು ತಾನು ನಂಬೋ ದೇವಸ್ಥಾನಕ್ಕೆ ಹೋಗಿ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರಲಿ ಅಂತ ದೇವರ ಆಶೀರ್ವಾದ ಪಡೆಯುತ್ತಾರೆ. ಇದೀಗ ಯಶ್ ರಾವಣನ ಅವತಾರ ಎತ್ತೋ ಮೊದಲೇ ಉಜ್ಜಯಿನಿಯ ಮಹಾಕಾಳೇಶ್ವರನಿಗೆ ಮಂಡಿ ಊರಿದ್ದಾರೆ. ಹಾಗಾದ್ರೆ ಯಶ್ ಮಹಾಕಾಳೇಶ್ವರನಿಗೆ ಮಂಡಿ ಊರಿದ್ದು ಯಾಕೆ.? ರಾವಣನಿಗೂ ಮಹಾಕಾಳೇಶ್ವರನಿಗೂ ಏನು ನಂಟು ನೋಡೋಣ ಬನ್ನಿ. ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಬಂದು ಮೂರು ವರ್ಷ ಆಗೋಯ್ತು. ಕೆಜಿಎಫ್2 ಆದ್ಮೇಲೆ ಯಶ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡೇ ಇಲ್ಲ. ಆಗೊಮ್ಮೆ ಈಗೊಮ್ಮೆ ಸಾರ್ವಜನಿಕವಾಗಿ ದರ್ಶನ ಕೊಡೋ ರಾಕಿ ಬೇಗ ಬೇಗ ಸಿನಿಮಾ ಮಾಡಿದ್ರೆ ಚಿತ್ರರಂಗವೂ ಉಳಿಯುತ್ತೆ. ಒಂದಿಷ್ಟು ಜನರಿಗೆ ಕೆಲಸವೂ ಸಿಗುತ್ತೆ ಅಂತ ಸಿನಿ ಭಕ್ತರ ವಾದ.
ಇದೀಗ ಯಶ್ ವರ್ಷಕ್ಕೆ ಎರಡು ಸಿನಿಮಾ ಕೊಡೋ ಟೈಂ ಹತ್ತಿರ ಬಂದಿದೆ. ಅದು ಟಾಕ್ಸಿಕ್ ಹಾಗು ರಾಮಾಯಣ. ರಾಕಿಂಗ್ ಸ್ಟಾರ್ ಯಶ್ ಈಗ ರಾವಣ ಅವತಾರ ಎತ್ತುತ್ತಿದ್ದಾರೆ. ರಾವಣ ಹೇಳಿ ಕೇಳಿ ನಮ್ಗೆಲ್ಲಾ ರಾಕ್ಷಸನ. ಈ ರೋಲ್ಅನ್ನ ಯಶ್ ವಿಜೃಂಬಿಸೋಕೆ ಸಿದ್ಧವಾಗಿರೋದ್ರಿಂದ ಯಶ್ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರೋ ಮಹಾಕಾಲೇಶ್ವರ ದೇವರಿಗೆ ಮಂಡಿ ಊರಿದ್ದಾರೆ. ಯಶ್ ದೈವ ಭಕ್ತ. ಪ್ರತಿ ಸಿನಿಮಾ ಶೂಟ್ಗೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈಗ ‘ರಾಮಾಯಣ’ ಸಿನಿಮಾದ ಶೂಟ್ ನಾಳೆಯಿಂದ ಆರಂಭ ಅಗುತ್ತಿದೆ. ಹೀಗಾಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ರಾವಣ ಕೂಡ ಶಿವನ ಭಕ್ತ. ಅವನಿಗೆ ಶಿವನ ಮೇಲೆ ಅಪಾರ ಭಕ್ತಿ.
ಅದೇ ರೀತಿ ಯಶ್ ಕೂಡ ಶಿವನ ಭಕ್ತ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಮುಂದಿನ ವರ್ಷ ಮಾರ್ಚ್ 19ಕ್ಕೆ ತೆರೆ ಮೇಲೆ ಬರೋದು ಪಕ್ಕಾ ಆಗಿದೆ. ಆ ಸಿನಿಮಾ ಶೂಟಿಂಗ್ಗಾಗಿ ಯಶ್ ಊರೂರು ಸುತ್ತುತ್ತಿದ್ದಾರೆ. ಇದರ ಜೊತೆ ಮತ್ತೊಂದು ಸರ್ಪ್ರೈಸ್ ಅಂದ್ರೆ ರಾಕಿ ನಟಿಸಿ ನಿರ್ಮಿಸುತ್ತಿರೋ ರಾಮಾಯಣ ಶೂಟಿಂಗ್ ಗೆ ಯಶ್ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರೀಕರಣ ಅಕ್ಟೋಬರ್ ವರೆಗೂ ನಡೆಯಲಿದೆ ಅನ್ನೋ ಮಾಹಿತಿ ಇದೆ. ಯಶ್ ಯಾವ್ದೇ ಸಿನಿಮಾ ಶುರು ಮಾಡಿದ್ರು ಮೊದಲು ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆಯುತ್ತಾರೆ. ಈ ಹಿಂದೆ ಟಾಕ್ಸಿನ್ ಸಿನಿಮಾ ಶೂಟಿಂಗ್ ಆರಂಭಿಸುವ ಮೊದಲು ಯಶ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ಆಶೀರ್ವಾದ ಪಡೆದು ಬಂದಿದ್ರು.
ಯಶ್ ನಿರ್ಮಾಣದ ರಾಮಾಯಣ ಚಾಪ್ಟರ್1 ಸಿನಿಮಾ ಶೂಟಿಂಗ್ ಫೈನಲ್ ಹಂತಕ್ಕೆ ಬಂದಿದೆ. ರಣಬೀರ್ ಕಪೂರ್ ರಾಮನ ರೋಲ್ ಮಾಡಿದ್ರೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಈಗ ರಾವಣನ ಕೆಲವು ದೃಶ್ಯಗಳನ್ನ ಸೆರೆ ಹಿಡಿಯಬೇಕಿದೆ. ಹೀಗಾಗಿ ಯಶ್ ಸಖಲ ರೀತಿಯಲ್ಲೂ ಸಜ್ಜಾಗಿದ್ದಾರೆ. ನಿರ್ದೇಶಕ ನಿತೀಶ್ ತಿವಾರಿ ಯಶ್ಗೆ ರಾವಣ ಗೆಟಪ್ ಹಾಕಿಸುತ್ತಿದ್ದಾರೆ. ಈಗ ಲಂಕಾದಿ ಪತಿಯಾಗುತ್ತಿರೋ ಯಶ್, ಕಳೆದ ಮೂರು ವರ್ಷದಿಂದ ತೆರೆ ಮೇಲೆ ಬಂದಿಲ್ಲ ಅನ್ನೋ ಬೇಸರ ಫ್ಯಾನ್ಸ್ಗಿದೆ. ಆದ್ರೆ ಮುಂದಿನ ವರ್ಷ ಹಾಗಾಗ್ಲ. ಯಶ್ ಟಾಕ್ಸಿಕ್ ಹಾಗು ರಾಮಾಯಣ ಚಾಪ್ಟರ್1 ಸಿನಿಮಾಗಳ 2026ಕ್ಕೆ ರಿಲೀಸ್ ಮಾಡುತ್ತಿದ್ದಾರೆ. ಹೀಗಾಗಿ ರಾಕಿಂಗ್ ಸ್ಟಾರ್ ಫ್ಯಾನ್ಸ್ಗೆ ಒಂದೇ ವರ್ಷ ಯಶ್ರ ಎರಡು ಸಿನಿಮಾ ನೋಡೋ ಚಾನ್ಸ್ ಸಿಗುತ್ತಿದೆ.