Katrina-Vicky Kaushal: ದೀಪಿಕಾ ಆಯ್ತು ಈಗ ತಾಯಿಯಾಗ್ತಿದ್ದಾರಾ ಕತ್ರಿನಾ..? ಬಾಲಿವುಡ್ ತುಂಬೆಲ್ಲಾ ಇದೇ ಗುಲ್ಲು..!

ಬಾಲಿವುಡ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ವರದಿಗಳು ಹರಿದಾಡುತ್ತಿವೆ. ಆದ್ರೆ ಈ ಬಗ್ಗೆ ಅವರಿಬ್ಬರು ಇಲ್ಲಿ ತನಕ ಇನ್ನೂ ಏನು ಹೇಳಿಲ್ಲ.
 

First Published Mar 7, 2024, 11:07 AM IST | Last Updated Mar 7, 2024, 11:07 AM IST

ಬಾಲಿವುಡ್ ನಟಿ ಕತ್ರಿನಾ ಕೈಫ್(Katrina Kaif) ಗರ್ಭಿಣಿ ಎಂಬ ವರದಿಗಳು ಹರಿದಾಡುತ್ತಿವೆ. ಸದ್ಯದಲ್ಲೇ ವಿಕ್ಕಿ ಕೌಶಲ್(Vicky Kaushal) ಮನೆಗೆ ಪುಟ್ಟ ಅತಿಥಿ ಬರಲಿದ್ದಾರೆ ಎಂದು ಹೇಳಲಾಗ್ತಿದೆ. ಕತ್ರಿನಾ ಕೈಫ್‌ ಇತ್ತೀಚೆಗೆ ದುಪ್ಪಟ್ಟಾದಿಂದ ಹೊಟ್ಟೆಯನ್ನು ಮರೆಮಾಚಿಕೊಂಡ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಜಾಮ್‌ನಗರದಲ್ಲಿ ನಡೆದ ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದ ನಂತರ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಫೋಟೋಗೆ ಪೋಸ್‌ ನೀಡಿದರು. ಈ ವೇಳೆ ಕತ್ರಿನಾ ತನ್ನ ಹೊಟ್ಟೆಯನ್ನು ದುಪಟ್ಟಾದಿಂದ ಮರೆಮಾಚಿದ್ದರು. ಇದನ್ನು ನೋಡಿದ ನೆಟ್ಟಿಗರು ದೀಪಿಕಾ ಪಡುಕೋಣೆ ಬಳಿಕ ಕತ್ರಿನಾ ಕೈಫ್‌ ಸಹ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಕತ್ರಿನಾ ಆರ್ ಯು ಪ್ರೆಗ್ನೆಂಟ್(Pregnant) ಅಂತ ಕೇಳ್ತಿದ್ದಾರೆ. ಆದ್ರೆ ಈ ಬಗ್ಗೆ ದಂಪತಿ ಇನ್ನೂ ಏನು ಹೇಳಿಕೊಂಡಿಲ್ಲ.

ಇದನ್ನೂ ವೀಕ್ಷಿಸಿ:  ಮಹೇಶ್ ಬಾಬು, ರಾಜಮೌಳಿ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್! ಸಿನಿಮಾ ಶೂಟಿಂಗ್ ಮೊದಲೇ 100 ಕೋಟಿ ಖರ್ಚು ..!

Video Top Stories