Divya Sridhar: ಕನ್ನಡದ ನಟಿಗೆ ಕೈಕೊಟ್ಟ ತಮಿಳಿನ ಮುಸ್ಲಿಂ ನಟ: ಇದು ಸೀರಿಯಲ್ ಲವ್ ಜಿಹಾದ್? 

ತಮಿಳು ನಾಡಿಗೆ ಹೋಗಿ ಕನ್ನಡದ ಖ್ಯಾತ ಸೀರಿಯಲ್‌ ನಟಿ ದಿವ್ಯಾ ತೀವ್ರ ತೊಂದರೆ ಅನುಭವಿಸುತ್ತಿದ್ದಾಳೆ. ಅಲ್ಲಿನ ಮುಸ್ಲಿಂ ನಟನನ್ನು ಮದುವೆಯಾದ ಕಾರಣ ಈ ರೀತಿ ತೊಂದರೆ ಅನುಭವಿಸಿದ್ದಾಳೆ. ಈ ಬಗ್ಗೆ ಇಲ್ಲಿದೆ ವಿವರ..

  

Share this Video
  • FB
  • Linkdin
  • Whatsapp

ಅವಕಾಶ ಸಿಕ್ತು ಅಂತ ಪಕ್ಕದ ತಮಿಳು ನಾಡಿಗೆ ಹೋಗಿ ಸೆಟಲ್​​​ ಆದ ಕನ್ನಡದ ಸೀರಿಯಲ್‌ ನಟಿ ದಿವ್ಯಾ ನಂತರ ಅದೇ ತಮಿಳು ಹುಡಗನೊಬ್ಬನ ಪ್ರೇಮ ಪಾಶಕ್ಕೆ ಬಿದ್ದಳು. ಅದೇ ಆಕೆ ಮಾಡಿದ ಮೊದಲ ಮತ್ತು ಕೊನೆಯ ತಪ್ಪು. ಆಕೆ ಆತನಿಗಾಗಿ ಸರ್ವಸ್ವವನ್ನೇ ಅರ್ಪಿಸಿದ್ಲು. ಆದ್ರೆ ಪ್ರೀತಿಯ ನಾಟಕ ಮಾಡಿ ಆಕೆಯನ್ನ ಮದುವೆಯಾದ ನಟ ಅವಳಿಗೆ ಇನ್ನಿಲ್ಲದಂತೆ ಕಾಟ ಕೊಟ್ಟುಬಿಟ್ಟ. ಅವನಿಗಾಗಿ ಆಕೆ ತನ್ನ ಧರ್ಮವನ್ನೇ ಬಿಟ್ಟಳು. ಆದ್ರೆ ಅದಕ್ಕೆ ಆತ ಕೊಟ್ಟ ಗಿಫ್ಟ್​​​ ಮಾನಸಿಕ ಹಿಂಸೆ. ಹೀಗೆ ಮುಸ್ಲಿಂ ತಮಿಳು ನಟನನ್ನ ನಂಬಿ ಇವತ್ತು ಬೀದಿಗೆ ಬಂದಿರುವ ಕನ್ನಡದ ಜನಪ್ರಿಯ ನಟಿಯ ಕಥೆಯೇ ಇವತ್ತಿನ ಎಫ್​​.ಐ.ಆರ್.

Related Video