
ಟ್ರೋಫಿ ಗೆದ್ದಾಯ್ತು ಮದುವೆಗೆ ರೆಡಿ, ಯಾರದು ಹುಡ್ಗಿ? ವಿನ್ನರ್ ಹನುಮನಿಗೆ ಸಿನಿಮಾ ಆಫರ್!
ಯೆಸ್ ಬಿಗ್ ಬಾಸ್ ಸೀಸನ್ 11 ಮುಕ್ತಾಯವಾಗಿದೆ. ಫಿನಾಲೆಯಲ್ಲಿ ಕಿಚ್ಚನ ಎಡ ಬಲ ನಿಂತ ಫೈನಲಿಸ್ಟ್ಗಳು ತ್ರಿವಿಕ್ರಮ್ ಮತ್ತು ಹನುಮಂತ. ಆಜಾನುಬಾಹು ತ್ರಿವಿಕ್ರಮನ ಎದುರು ವಾಮನನಂತೆ ಕಾಣ್ತಾ ಇದ್ದರೂ, ವೋಟ್ ಲೆಕ್ಕದಲ್ಲಿ ಹನುಮಂತನೇ ಮುಂದೆ ಇದ್ದ. ಅದ್ರಲ್ಲೂ ಹನುಮಂತನಿಗೆ ಬಂದ ವೋಟ್ಗಳ ಸಂಖ್ಯೆ ಭರ್ತಿ 5,23,89,318.
ಬಿಗ್ ಬಾಸ್ ಸೀಸನ್-11ಗೆ ತೆರೆ ಬಿದ್ದಿದ್ದು ಎಲ್ಲರ ನಿರೀಕ್ಷೆಯಂತೆ ಹಾವೇರಿಯ ಹನುಮಂತ ವಿನ್ನರ್ ಆಗಿದ್ದಾನೆ. ಬಿಗ್ ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ಬಹುಮಾನ ಗೆದ್ದು ಬೀಗಿರೋ ಹನುಮಂತ, ಅರ್ಜೆಂಟ್ ಆಗಿ ಮದುವೆ ಆಗ್ಲಿಕ್ಕೆ ರೆಡಿಯಾಗಿದ್ದಾನೆ. ಇತ್ತ ಹನುಮಂತನಿಗೆ ಬಿದ್ದಿರೋ ವೋಟ್ಸ್ ಲೆಕ್ಕ ನೋಡಿ ನಮ್ಮ ಗಾಂಧಿನಗರದ ಮಂದಿ ಇವನನ್ನ ಸಿನಿಮಾ ಹೀರೋ ಮಾಡ್ಲಿಕ್ಕೆ ರೆಡಿಯಾಗಿದ್ದಾರೆ. ಬನ್ನಿ ಹನುಮಂತನ ಫ್ಯೂಚರ್ ಹೇಗಿರಲಿದೆ ಅನ್ನೋದ್ರ ಎಕ್ಸ್ಕ್ಲೂಸಿವ್ ಸ್ಟೋರಿ ನೋಡ್ಕೊಂಡ್ ಬರೋಣ.