Asianet Suvarna News Asianet Suvarna News

ಸೂರ್ಯ , ಜೂ.ಎನ್‌ಟಿಆರ್ ಜೊತೆ ಬಾಕ್ಸಾಫೀಸ್ ಫೈಟ್‌ಗಿಳಿದ ದ್ರುವ ಸರ್ಜಾ: ಮಾರ್ಟಿನ್ VS ಕಂಗುವ, ದೇವರ..ಗೆಲ್ಲೋರು ಯಾರು..?

ಘಜಿನಿ ಹೀರೋ ಸೂರ್ಯ ಕಂಗುವ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಈ ಚಿತ್ರದಲ್ಲಿ ಸೂರ್ಯ ಹಾಗೂ ಬಾಬಿ ಡಿಯೋಲ್ ಮುಖಾಮುಖಿ ಆಗುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ಹಂಚಿಕೊಂಡಿದೆ. ಇತ್ತ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಹ ಅದೇ ದಿನ ರಿಲೀಸ್ ಆಗುತ್ತೆ ಅಂತ ಈಗಾಗಲೇ ಅನೌನ್ಸ್ ಆಗಿದೆ. ಈ ಮೂಲಕ ದೊಡ್ಡ ಬಾಕ್ಸಾಫೀಸ್ ಕದನಕ್ಕೆ ಇಂಡಸ್ಟ್ರಿ ಸಜ್ಜಾಗುತ್ತಿದೆ.

‘ವಾರಿಯರ್ ಕಿಂಗ್‌ನ ಸ್ವಾಗತಿಸಲು ರೆಡಿ ಆಗಿ. ಅಕ್ಟೋಬರ್ 10ರಂದು ಕಂಗುವ (Kanguva) ರಿಲೀಸ್ ಆಗಲಿದೆ’ ಎಂದು ತಂಡ ಮಾಹಿತಿ ನೀಡಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಚಿತ್ರ ರೆಡಿಯಾಗುತ್ತಿದ್ದು, ಬಾಬಿ ಡಿಯೋಲ್ ಸಿನಿಮಾದ ವಿಲನ್ ಆಗಿದ್ದಾರೆ. ತೆಲುಗಿನಲ್ಲಿ ಜೂನಿಯರ್ ಎನ್‌ಟಿಆರ್(NT Rama Rao Jr) ನಟನೆಯ ‘ದೇವರ’ ಸಿನಿಮಾ(Devara movie) ತಂಡ ಕೂಡ ಅಕ್ಟೋಬರ್ 10ರಂದು ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ. ಹೀಗಾಗಿ, ಈ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧೆ ಮಾಡುತ್ತಿದೆ. ಮಾರ್ಟಿನ್ (Martin) ಸುಮಾರು ನೂರೈವತ್ತು ಕೋಟಿ ವೆಚ್ಚದಲ್ಲಿ ರೆಡಿಯಾಗಿರೋ ಪ್ಯಾನ್ ಇಂಡಿಯಾ ಚಿತ್ರ. ದ್ರುವ ಸರ್ಜಾ(Druva sarja)  ಈ ಸಿನಿಮಾದಲ್ಲಿ ಹೀರೋನಾ ವಿಲನ್‌ ಅನ್ನೋ ಕುತೂಃಲವೇ ಕತೆ. ಈಗಾಗಲೆ ರಿಲೀಸ್ ಆಗಿರೋ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸಿನಿಮಾ ಕನ್ನಡ ತೆಲುಗು,ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಾಣುತ್ತಿದೆ. ಮಾರ್ಟಿನ್ ಚಿತ್ರವನ್ನು ಅದ್ದೂರಿ ಅಂಬಾರಿ ನಿರ್ದೇಶಕ ಎಪಿ ಅರ್ಜುನ್ ನಿರ್ದೇಶಿಸಿದ್ದು, ಉದಯ್ ಮೆಹ್ತ ನಿರ್ಮಾಣ ಮಾಡಿದ್ದಾರೆ. ಬಹು ನಿರೀಕ್ಷೆಯ ಮಾರ್ಟಿನ್ ಹಲವು ಭಾಷೆಗಳಿಂದ ಬಿಗ್ ಫೈಟ್‌ನನ್ನೇ ಎದುರಿಸಲಿದ್ದಾರೆ. 

ಇದನ್ನೂ ವೀಕ್ಷಿಸಿ:  ಆ ಅರ್ಧ ಗಂಟೆ ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿದ್ದೇನು ? ರೇಣುಕಾಸ್ವಾಮಿ ಮೇಲೆ ಮೊದಲು ಎರಗಿದ್ದೇ ನಟ ದರ್ಶನ್..!

Video Top Stories