ಹಾರರ್ ಸಿನಿಮಾ ನಟಿಯ ನಿಗೂಢ ಸಾವು: ಮಂಚಕ್ಕೆ ಕರೆದಿದ್ದ ಫೋಟೋಗ್ರಫರ್

ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ನಟಿ ಅಲೆಕ್ಸಾಂಡ್ರಾ  ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

Share this Video
  • FB
  • Linkdin
  • Whatsapp

ತಮಿಳಿನ ಕಾಂಚನಾ ಸಿನಿಮಾ‌ದಲ್ಲಿ ಕಾಣಿಸಿಕೊಂಡಿದ್ದ ರಷ್ಯಾ ಮೂಲದ ರೂಪದರ್ಶಿ ಹಾಗೂ ನಟಿ ಅಲೆಕ್ಸಾಂಡ್ರಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಗೋವಾದಲ್ಲಿರುವ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕಾಲಿವುಡ್‍ನ ಕಾಂಚನಾ-3 ಸಿನಿಮಾದಲ್ಲಿ ನಟಿಸಿದ್ದರು. ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ಅಲೆಕ್ಸಾಂಡ್ರಾ ವಾಸಿಸುತ್ತಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

CCB ಮುಂದೆ ನಟಿ ರಾಗಿಣಿ ಒಪ್ಪಿಕೊಂಡ ಸತ್ಯವೇನು ?

ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಶವ ಪತ್ತೆಯಾಗಿದೆ. ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಅಲೆಕ್ಸಾಂಡ್ರಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಚೆನ್ನೈ ಮೂಲದ ಪೋಟೋಗ್ರಾಫರ್ ಒಬ್ಬ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ನಟಿ 2019 ರಲ್ಲಿ ದೂರು ದಾಖಲಿಸಿದ್ದರು. ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದರು.

Related Video