ಇಂಡಿಯನ್ ಆಗಿ ಮತ್ತೆ ಬಂದ ಕಮಲ್ ಹಾಸನ್..! ಪ್ರೇಕ್ಷಕರ ಮನ ಗೆದ್ದಿದೆಯಾ ಇಂಡಿಯನ್ 2 ಸಿನಿಮಾ..?

ಇಂಡಿಯನ್ 2 ಉಳಗನಾಯಗನ್ ಕಮಲ್ ಹಾಸನ್ ಹಾಗೂ ದುಬಾರಿ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಶಂಕರ್ ಜೋಡಿಯ ಬಹು ನಿರೀಕ್ಷಿತ ಸಿನಿಮಾ. 1996ರಲ್ಲಿ ‘ಇಂಡಿಯನ್’ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಸೇನಾಪತಿ ಪಾತ್ರದಲ್ಲಿ ಕಮಲ್ ಹಾಸನ್ ಮಿಂಚಿದ್ರು. ಅದರ ಮುಂದುವರಿದ ಭಾಗವಾಗಿ ಇಂಡಿಯನ್ 2 ಸಿನಿಮಾ ಈಗ ರಿಲೀಸ್ ಆಗಿದೆ.

Share this Video
  • FB
  • Linkdin
  • Whatsapp

ಇಂಡಿಯನ್, ಈ ಹೆಸರನ್ನ ಕೇಳಿದ್ರೆ ಸಾಕು ಸಿನಿ ಅಭಿಮಾನಿಗಳು ಥ್ರಿಲ್ ಆಗ್ತಾರೆ. ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್(Kamal Haasan) ಹಾಗು ನಿರ್ದೇಶಕ ಶಂಕರ್ ( Shankar) ಕಾಂಬಿನೇಷನ್‌ನಲ್ಲಿ ಬಂದಿದ್ದ ಸಿನಿಮಾ ಇಂಡಿಯನ್, ಭಾರತೀಯ ಚಿತ್ರ ಜಗತ್ತಿನಲ್ಲಿ ಸೆನೇಷನಲ್ ಕ್ರಿಯೇಟ್ ಮಾಡಿತ್ತು. ಅದೇ ನಿರೀಕ್ಷೆಯಲ್ಲಿ ಇದೀಗ ಇಂಡಿಯನ್2 ಸಿನಿಮಾದಲ್ಲಿ(Indian 2 Movie) ಕಮಲ್ ಹಾಸನ್ ಮತ್ತೊಮ್ಮೆ ತಮ್ಮ ವಿಶ್ವರೂಪದ ಪ್ರದರ್ಶನ ಮಾಡಿದ್ದಾರೆ. ಹತ್ತಾರು ತರಹದ ಅವತಾರವೆತ್ತಿದ್ದಾರೆ. ಆದ್ರೆ ಈ ಭಾರಿ ಯಾಕೋ ಕಮಲ್ಗೆ ಕಮಾಲ್ ಮಾಡೋಕೆ ಆಗಿಲ್ಲ. ಇಂಡಿಯನ್ 2 ಬಗ್ಗೆ ಮಿಕ್ಸ್ಡ್ ರಿವೀವ್ ಬಂದಿದೆ. ಇಂಡಿಯುನ್ 2 ಸಿನಿಮಾದಲ್ಲಿ ಕಮಲ್ ಹಾಸನ್ ನಿರುದ್ಯೋಗ, ಭಾರಿ ತೆರಿಗೆ ಹೊರೆ, ಮೂಲಭೂತ ಸೌಲಭ್ಯಗಳ ಕೊರತೆ, ದೊಡ್ಡ ದೊಡ್ಡವರ ದೊಂಬರಾಟ.. ರಾಜಕೀಯದವರ ಮೇಲಾಟ. ಭಾರತದ ಜನಸಾಮಾನ್ಯರು ಅನುದಿನ, ಅನು ಕ್ಷಣ ಎದುರಿಸುತ್ತಿರುವ ನಾನಾ ಸಮಸ್ಯೆಯ ವಿರುದ್ಧ ಹೋರಾಡೋ ಕತೆ ಹೇಳಿದ್ದಾರೆ. ಆದ್ರೆ ನಿರ್ದೇಶಕರು ಈ ಕಥೆಯನ್ನ ಕಟ್ಟಿಕೊಡುವಲ್ಲಿ ಸ್ವಲ್ಪ ಎಡವಿದಂತೆ ಕಾಣುತ್ತೆ. ಭಟ್ ಕಮಲ್ ಹಾಸನ್‌ಗೆ ಬೆಂಗಳೂರಿನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಹೀಗಾಗಿ ಬೆಂಗಳೂರಿನ ಶ್ರೀರಾಂಪುರದಲ್ಲಿರೋ ಅರುಣಾ ಥಿಯೇಟರ್ನಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಕಮಲ್ ಹಾಸನ್ ಫ್ಯಾನ್ಸ್ ಇಂಡಿಯನ್2 ನೋಡಿ ಎಂಜಾಯ್ ಮಾಡಿದ್ದಾರೆ. 250 ಕೋಟಿ ವೆಚ್ಚದ ಇಂಡಿಯನ್ 2 ಸಿನಿಮಾ ಮೊದಲ ದಿನ ಒಟ್ಟು 26 ಕೋಟಿ ಗಳಿಸಿದೆ.

ಇದನ್ನೂ ವೀಕ್ಷಿಸಿ:  ಅಂಬಾನಿ ಮನೆ ಮದ್ವೆಯಲ್ಲಿ ಸೌತ್ ಸ್ಟಾರ್ಸ್ ಮಿಂಚಿಂಗೋ ಮಿಂಚಿಂಗ್! ನಟ ರಜನಿಕಾಂತ್ ಮಸ್ತ್ ಡಾನ್ಸ್..!

Related Video