Kabza: 'ಕಬ್ಜ'ದಲ್ಲಿ ಸೊಂಟ ಬಳುಕಿಸಲಿರುವ ತಾನ್ಯಾ ಹೋಪ್

ಬಹುನಿರೀಕ್ಷಿತ 'ಕಬ್ಜ' ಪ್ಯಾನ್ ಇಂಡಿಯಾ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಉಡುಗೊರೆಯಾಗಿ ಮಾರ್ಚ್ 17ರಂದು ರಿಲೀಸ್ ಆಗ್ತಿದೆ. 
 

Share this Video
  • FB
  • Linkdin
  • Whatsapp

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ, ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಟೀಸರ್ ಹಾಗೂ ಟೈಟಲ್ ಹಾಡು ಕಬ್ಜದ ಮೇಲೆ ಹೆಚ್ಚು ನಿರೀಕ್ಷೆ ಹುಟ್ಟು ಹಾಕಿದೆ. ಕಬ್ಜ ಪಕ್ಕಾ ಮಾಸ್ ಸಿನಿಮಾ. ಹೀಗಾಗಿ ಕಬ್ಜ ಸಿನಿಮಾದಲ್ಲಿ ಬಾಲಿವುಡ್ ಹಾಟೆಸ್ಟ್ ಸುಂದರಿಯರಾದ ಜಾಕ್ವೆಲೀನ್ ಫರ್ನಾಂಡಿಸ್ ಅಥವಾ ನೋರಾ ಫತೇಹಿ ಸೊಂಟ ಬಳಕಿಸುತ್ತಾರೆ ಅಂತ ಸುದ್ದಿಯಾಗಿತ್ತು. ಭಟ್ ಕಬ್ಜದಲ್ಲಿ ನೋರಾನು ಇಲ್ಲ ಜಾಕ್ವೆಲೀನ್ ಕೂಡ ನರ್ತಿಸುತ್ತಿಲ್ಲವಂತೆ. ಇವರಿಬ್ಬರಿಗೆ ಸೆಡ್ಡು ಹೊಡೆದು ಕುಣಿಯೋ ತಾಕತ್ತಿರೋ ಮತ್ತೊಬ್ಬ ಬಸಣ್ಣಿಯನ್ನ ಕರೆ ತರುತ್ತಿದ್ದಾರೆ ಆರ್ ಚಂದ್ರು‌. ಅವರೇ ತಾನ್ಯಾ ಹೋಪ್. ಕಬ್ಜ ಸಿನಿಮಾದಲ್ಲಿ ತಾನ್ಯಾ ಹೋಪ್, ಸಿನಿ ಪ್ರೇಕ್ಷಕರಲ್ಲಿ ಹೊಸ ಹುರುಪನ್ನು ಹುಟ್ಟು ಹಾಕುತ್ತಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video