Shivraj Kumar : ಭೈರತಿ ರಣಗಲ್ ಆಗಿ ಮತ್ತೆ ಶಿವಣ್ಣ ಎಂಟ್ರಿ: ಸೀಕ್ರೆಟ್ ರಿವೀಲ್ ಮಾಡಿದ ಸೆಂಚುರಿ ಸ್ಟಾರ್

ವೇದ ಸಿನಿಮಾ ಪ್ರಚಾರದಲ್ಲಿ ಭೈರತಿ ರಣಗಲ್ ಸೀಕ್ರೆಟ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಚ್ಚಿಟ್ಟಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
 

Share this Video
  • FB
  • Linkdin
  • Whatsapp

ಮಫ್ತಿ ಸಿನಿಮಾ ಬಂದ ನಂತರ ದೊಡ್ಮನೆ ಅಭಿಮಾನಿಗಳ ದೇವರಿಗೆ ಇದ್ದ ದೊಡ್ಡ ಆಸೆ ಭೈರತಿ ರಣಗಲ್ ಪಾತ್ರದಲ್ಲಿ ಶಿವಣ್ಣ ಮತ್ತೆ ಮಿಂಚಬೇಕು ಹಾಗೂ ಮಫ್ತಿ ಪಾರ್ಟ್2 ಬರಬೇಕು ಅನ್ನೋದು. ಈಗ ಆ ಮನೆ ದೇವರುಗಳ ಆಸೆ ಈಡೇರಿಸೋಕೆ ರಣಗಲ್ ರೆಡಿಯಾಗಿದ್ದಾನೆ. ಶಿವಣ್ಣ ಶ್ರೀಮುರಳಿ ಕಾಂಬಿನೇಶನ್'ನ ಮಫ್ತಿಯ ಭೈರತಿ ರಣಗಲ್ ಸಿನಿಮಾ ಸಿದ್ಧವಾಗುತ್ತಿದೆ. ಇದೀಗ ತೆಲುಗಿನಲ್ಲಿ ವೇದ ಸಿನಿಮಾ ಪ್ರಚಾರಕ್ಕೆ ಹೋಗಿದ್ದ ಸೆಂಚುರಿ ಸ್ಟಾರ್ ಶಿವಣ್ಣ ಮಫ್ತಿ ಪಾರ್ಟ್-2 ಗೆ ಶ್ರೀಕಾರ ಹಾಕಲಾಗಿದೆ ಅಂತ ಹೇಳಿದ್ದಾರೆ. ಆದ್ರೆ ಆ ಸಿನಿಮಾ ಮಫ್ತಿ ಹೆಸರಲ್ಲಿ ಬರೋಲ್ಲ. ಮಫ್ತಿ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದ ಭೈರತಿ ರಣಗಲ್ ಹೆಸರಿನಲ್ಲೇ ಸಿನಿಮಾ ಸಿದ್ಧವಾಗುತ್ತೆ ಎಂದಿದ್ದಾರೆ.

Related Video