ಕಾರಿನ ರೂಫ್ ಮೇಲೆ ಡೇರ್ ಡೆವಿಲ್ ಸ್ಟಂಟ್: ಪವನ್ ಕಲ್ಯಾಣ್ ವಿರುದ್ಧ ಕೇಸ್

ಜನರ ಕಷ್ಟಗಳನ್ನು ಆಲಿಸಲು ಹೋಗುವಾಗ ಸಿನಿಮೀಯ ರೀತಿಯಲ್ಲೇ ಹೋಗುವ ಪವನ್ ಕಲ್ಯಾಣ್ ಡೇರ್ ಡೆವಿಲ್ ಸ್ಟಂಟ್ ಮಾಡಿದ್ದು, ಫಜೀತಿಗೆ ಕಾರಣವಾಗಿದೆ.
 

Share this Video
  • FB
  • Linkdin
  • Whatsapp

ಟಾಲಿವುಡ್ ಪವರ್ ಸ್ಟಾರ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಕಳೆದ ವಾರ, ವೇಗವಾಗಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಕುಳಿತಿದ್ದರು. ಅದೇ ಕಾರಿನಲ್ಲಿ ಅಕ್ಕಪಕ್ಕ ಐದಾರು ಜನ ಡೋರ್ ಹಿಡಿದು ನಿಂತಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಾರಿನ ರೂಫ್‌'ನಲ್ಲಿ ಡೇರ್ ಡೆವಿಲ್ ಸ್ಟಂಟ್ ಮಾಡಿದ್ದ ಅವರ ವಿರುದ್ಧ, ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅತಿ ವೇಗದ ಕಾರು ಚಾಲನೆ ಮತ್ತು ಇತರರ ಜೀವ ಹಾಗೂ ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದ ಆರೋಪದ ಮೇಲೆ ಪವನ್ ಕಲ್ಯಾಣ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದ್ರೆ ಇದೆಲ್ಲ ಮುಖ್ಯಮಂತ್ರಿ ಜಗನ್ ಮಸಲತ್ತು ಎನ್ನುತ್ತಿದೆ ಪವನ್ ಬಣ.

Murugha Shree POCSO Case: ಮಠದ ಆಡಳಿತದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ದಿವ್ಯಪ್ರಭು

Related Video