ಪ್ರಭಾಸ್ ಕಲ್ಕಿ ಉಪ್ಪಿಯ ಯುಐಗು ಇದೆಯಾ ಲಿಂಕ್..? ಕಲ್ಕಿ ನೋಡಿದವರು ಯುಐ ಬಗ್ಗೆ ಮಾತನಾಡುತ್ತಿರೋದೇಕೆ..?

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ನಟನೆಯ ಕಲ್ಕಿ ರಿಲೀಸ್ ಆಗಿದೆ. ಬಾಕ್ಸಾಫೀಸ್‌ನಲ್ಲಿ ಕಲ್ಕಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಆದ್ರೆ ಈ ಕಲ್ಕಿ ನೋಡಿ ಬಂದವರಿಗೆ ಕಾಡುತ್ತಿರೋ ಪ್ರಶ್ನೆ ಏನಪ್ಪ ಅಂದ್ರೆ ಕಲ್ಕಿಗೂ ಉಪ್ಪಿಯ ಯುಐ ಸಿನಿಮಾಗೂ ಏನಾದ್ರು ಸಂಬಂಧ ಇದಿಯಾ ಅನ್ನೋದು.

First Published Jun 30, 2024, 10:12 AM IST | Last Updated Jun 30, 2024, 10:12 AM IST

ಪ್ರಭಾಸ್ ನಟನೆಯ ಸಿನಿಮಾ ಅಂದ್ರೆ ನಿರೀಕ್ಷೆ ಇರುತ್ತೆ ಅನ್ನೋದು ಗೊತ್ತು. ಈಗ ರಿಲೀಸ್ ಆಗಿರೋ ಕಲ್ಕಿ ಸಿನಿಮಾವನ್ನ ಕಣ್ತುಂಬಿಕೊಳ್ಳೋದಕ್ಕಾಗಿ ಜನ ಥಿಯೇಟರ್ ಮುಂದೆ ಕ್ಯೂ ನಿಂತಿದ್ದಾರೆ. ಕಲ್ಕಿ ರಿಲೀಸ್ ಆಗಿ ಕಥೆ ಏನು ಅಂತ ಗೊತ್ತಾಗಿದೆ. ದ್ವಾಪರ ಯುಗದ ಕುರುಕ್ಷೇತ್ರ ಯುದ್ಧದ ಅಂತ್ಯದ ಮೂಲಕ ಶುರುವಾಗುವ ಕಥೆ ಆರು ಸಾವಿರ ವರ್ಷಗಳ ನಂತರಕ್ಕೆ ಬಂದು ನಿಲ್ಲುತ್ತೆ. ಅಂದರೆ ಕಲಿಯುಗದ ಅಂತ್ಯದ ಕತೆಯನ್ನ ಹೇಳೋಕೆ ಶೂರು ಮಾಡುತ್ತೆ. ಕಲ್ಕಿಯ (Kalki) ಜನನಕ್ಕಾಗಿ ಕಾಯುತ್ತಿರೋ ಒಂದಷ್ಟು ಮಂದಿ ಇತ್ತ ಆತ ಹುಟ್ಟುವ ಮೊದಲೇ ಸಾಯಿಸೋಕೆ ಕಾಯುತ್ತಿರೋ ರಾಕ್ಷಸ ಇವೆರಡರ ನಡುವೆ ಏನಾಗುತ್ತೆ ಅನ್ನೋದೇ ಕಲ್ಕಿ ಕತೆ. ಈಗ ಅಸಲಿ ಕಥೆಗೆ ಬರೋಣ. ಕಲ್ಕಿ ಸಿನಿಮಾ ನೋಡಿದವರೆಲ್ಲಾ ನಮ್ಮ ಕನ್ನಡದ ಹೆಮ್ಮೆ ರಿಯಲ್ ಸ್ಟಾರ್ ಉಪೇಂದ್ರ (Upendra) ಡೈರೆಕ್ಷನ್‌ನ ಯುಐ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಉಪ್ಪಿ ಯುಐನಲ್ಲಿ(UI movie) ಯಾವ ಕಥೆ ಹೇಳುತ್ತಾರೆ ಅನ್ನೋ ಕುತೂಹಲ ಉಪ್ಪಿ ಸಿನಿಮಾ ಇಷ್ಟಪಡೋರಲ್ಲಿದೆ. ಅದ್ಯಾವಾಗ ಯುಐ ಅನ್ನೋ ಟೈಟಲ್ ಬಂತೋ ಪೋಸ್ಟರ್ ರಿಲೀಸ್ ಆಯ್ತೋ ನೋಡಿ. ಅದರ ಮಜಾನೇ ಬೇರೆ ಆಯ್ತು. ಅದರಲ್ಲೂ ಉಪ್ಪಿ ಕುದುರೆ ಏರಿ ಬಂದ ಮೇಲಂತು ಇವರು ಅಸಮಾನ್ಯ ಕತೆ ಹೇಳುತ್ತಿಲ್ಲ ಅನ್ನೋದು ಅರಿವಿಗೆ ಬಂದಿತ್ತು. ಆಗ್ಲೇ ಗೊತ್ತಾಗಿತ್ತು ಇದು ಕೂಡ ಕಲ್ಕಿಯ ಕತೆಯಂತೆ ಕಾಣುತ್ತೆ ಅನ್ನೋದು. ಯುಐ ಸಿನಿಮಾದಲ್ಲಿ ಕಲ್ಕಿ ಕಥೆ ಅಂತ ಇಡೀ ಗಾಂಧಿನಗರ ಮಾತಾಡ್ತಿದೆ. ಹಾಗಂತ ಇಲ್ಲಿ ಉಪ್ಪಿ ಏನು ಹೇಳಿಲ್ಲ. ಹೋಗ್ಲಿ ಚಿತ್ರತಂಡ ಆದ್ರು ಹೇಳಿದ್ಯಾ ನೋ ವೇ. ಆದ್ರೆ ನಿಮ್ಮನ್ನ ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತೇನೆ ಅನ್ನೋ ಮಾತನ್ನ ಒತ್ತಿ ಒತ್ತಿ ಹೇಳಿದ್ದಾರೆ. ಯುಐನಲ್ಲಿ ಮನುಷ್ಯರಿಗಿಂತ ಮಿಷಿನ್ ಮತ್ತು ರೋಬೋಟ್ಗಳ ಹಾವಳಿ ಹೆಚ್ಚಿರುತ್ತೆ ಅಂತ ಹೇಳಿದ್ದಾರೆ. ಈಗ ಪ್ರಭಾಸ್ರ (Prabhas) ಕಲ್ಕಿಗೆ ಬಂದ್ರೆ ಇಲ್ಲೂ ಕೂಡ ರೋಬೋಟ್ ಮಿಷನ್ಗಳ ಆರ್ಭಟ ಇದೆ.

ಇದನ್ನೂ ವೀಕ್ಷಿಸಿ:  ಪವಿತ್ರಾ ಗೌಡ ಕೈ ಮೇಲೆ 777 ಟ್ಯಾಟು! ಇದರ ಅರ್ಥ ಏನು ? ರೆಡೆ ಕಾರ್ಪೆಟ್ ಸ್ಟುಡಿಯೋದಲ್ಲೂ ಇದೆ 777!

Video Top Stories