Asianet Suvarna News Asianet Suvarna News

ಪವಿತ್ರಾ ಗೌಡ ಕೈ ಮೇಲೆ 777 ಟ್ಯಾಟು! ಇದರ ಅರ್ಥ ಏನು ? ರೆಡೆ ಕಾರ್ಪೆಟ್ ಸ್ಟುಡಿಯೋದಲ್ಲೂ ಇದೆ 777!

ಮಾಡೆಲ್‌ ಕಮ್ ನಟಿ ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A1 ಆರೋಪಿ. ಆದ್ರೆ ಈ ಪ್ರಕರಣದಲ್ಲಿ ನಟ ದರ್ಶನ್ A2 ಆರೋಪಿ ಆಗೋಕೆ ಕಾರಣ ಕೂಡ ಪವಿತ್ರಾ ಗೌಡ ಅನ್ನೋದು ಗುಟ್ಟಾಗೇನೂ ಉಳಿದಿಲ್ಲ.

ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಸ್ಪರ್ಧಿಯಾಗಿದ್ದ ನೀತು ವನಜಾಕ್ಷಿ ಕೊಲೆ (Murder) ಆರೋಪಿ ಪವಿತ್ರಾ ಗೌಡಗೆ (Pavitra gowda) ಕಳೆದ ಮಾರ್ಚ್ ತಿಂಗಳಲ್ಲಿ 777 ಟ್ಯಾಟು ಹಾಕಿದ್ದಾರೆ. ಈ ಟ್ಯಾಟು ಸುತ್ತ ಚಿಕ್ಕದಾಗಿ ಲವ್ ಸಿಂಬಲ್ ಬರೆಸಿದ್ದಾರೆ ಪವಿತ್ರಾ ಗೌಡ. ಇದರ ಅರ್ಥ ಏನಿರಬಹುದು ಅಂತ ಹುಡುಕಿದ್ರೆ ಸಿಕ್ಕಿದ್ದು ದರ್ಶನ್‌ರ (Darshan) ಹುಟ್ಟಿದ ವರ್ಷ ಮತ್ತು ಪವಿತ್ರಾ ಮಗಳು ಹುಟ್ಟಿದ ದಿನಾಂಕ. ಪವಿತ್ರಾ ಗೌಡ ತನ್ನ ಕೈ ಮೇಲಿರೋ 777 ಟ್ಯಾಟೂಗೆ ನಟ ದರ್ಶನ್ ಲಿಂಕ್ ಇದೆ. ಈ 777 ಟ್ಯಾಟೂ ಡಿ ಕೋಡ್ ಏನ್ ಗೊತ್ತಾ ಅದು ದರ್ಶನ್ ಹುಟ್ಟಿದ ವರ್ಷ 1977 ಮತ್ತು ಪವಿತ್ರಾ ಗೌಡ ಮಗಳು ಹುಟ್ಟಿದ ದಿನಾಂಕ ನವೆಂಬರ್ 7 ಅಂತ. ಅಂದ್ರೆ ದರ್ಶನ್‌ರ ಹುಟ್ಟಿದ ವರ್ಷದ ಕೊನೆಯ ಎರಡು ಸಂಖ್ಯೆ 77 ಮತ್ತು ಪವಿತ್ರಾ ಗೌಡ ಮಗಳು ಹುಟ್ಟಿದ ದಿನಾಂಕ 7ನ್ನ ಸೇರಿಸಿ ಪವಿತ್ರಾ ಗೌಡ ತನ್ನ ಕೈ ಮೇಲೆ 777 ಟ್ಯಾಟೂ (Tattoos) ಹಾಕಿಸಿಕೊಂಡು ಲವ್ ಸಿಂಬಲ್ ಬರೆಸಿದ್ದಾರೆ. ಅಷ್ಟೆ ಅಲ್ಲ ಇದರಲ್ಲಿ ಮತ್ತೊಂದು ಡಿಕೋಡ್ ಕೂಡ ಇದೆ. ದರ್ಶನ್ ಹುಟ್ಟಿದ್ದು(Darshan birthday) ಫೆಬ್ರವರಿ 16 ಅಂದ್ರೆ 1 ಪ್ಲಸ್ 6 ಇಸಿಕೊಲ್ಟು ಏಳಾಗುತ್ತೆ. ಹಾಗೆ ದರ್ಶನ್ ಹೈಟು 6.1. ಇದನ್ನ ಕೂಡಿದ್ರೆ ಏಳಾಗುತ್ತೆ. ಇದನ್ನೆಲ್ಲಾ ಸೇರಿಸಿ 777 ಟ್ಯಾಟೂವನ್ನ ಕೈ ಮೇಲೆ ಕೆತ್ತಿಸಿಕೊಂಡಿದ್ದಾರೆ ಪವಿತ್ರಾ ಗೌಡ.

ಇದನ್ನೂ ವೀಕ್ಷಿಸಿ:  ತನಗಾಗೋ ಕೆಡುಕಿನ ಬಗ್ಗೆ ದರ್ಶನ್‌ಗೆ ಮೊದಲೇ ಸಿಕ್ಕಿತ್ತಾ ಸೂಚನೆ ? ಕೊಲೆ ಘಟನೆಗೂ ಮುನ್ನ ಅರ್ಚಕರನ್ನ ಭೇಟಿ ಮಾಡಿದ್ದ ನಟ ?

Video Top Stories