ಬಾಲಿವುಡ್‌ಗೆ ಹೆಚ್ಚಾಯ್ತು ಬಾಯ್ಕಟ್ ಭಯ; ಖಾನ್‌ಗಳಿಗೆ ಕಂಠಕವಾಗುತ್ತಾ ಅಭಿಯಾನ?

ಒಂದ್ ಕಾಲ ಇತ್ತು. ಬಾಲಿವುಡ್ ಸಿನಿ ಜಗತ್ತು ಇಡೀ ವಿಶ್ವದ ಗಮನ ಸೆಳೆದಿತ್ತು. ನೂರಾರು ಕೋಟಿ ಬಂಡವಾಳ ಹೂಡಿದ ಸಿನಿಮಾಗಳು ಸಾವಿರಾರು ಕೋಟಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು ಇತಿಹಾಸ ಬರೆಯುತ್ತಿದ್ವು. ಆದ್ರೆ ಈಗ ಹೇಗಾದ್ರು ಮಾಡಿ ನಮ್ ಸಿನಿಮಾ ನೂರು ಕೋಟಿ ಕಲೆಕ್ಷನ್ ಮಾಡಿದ್ರೆ ಸಾಕಪ್ಪಾ ಅಂತ ಬಿಟೌನ್ ಮಂದಿ ಕಣ್ ಕಣ್ ಬಿಡುತ್ತಿದ್ದಾರೆ. 

First Published Aug 17, 2022, 4:43 PM IST | Last Updated Aug 17, 2022, 4:43 PM IST

ಒಂದ್ ಕಾಲ ಇತ್ತು. ಬಾಲಿವುಡ್ ಸಿನಿ ಜಗತ್ತು ಇಡೀ ವಿಶ್ವದ ಗಮನ ಸೆಳೆದಿತ್ತು. ನೂರಾರು ಕೋಟಿ ಬಂಡವಾಳ ಹೂಡಿದ ಸಿನಿಮಾಗಳು ಸಾವಿರಾರು ಕೋಟಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು ಇತಿಹಾಸ ಬರೆಯುತ್ತಿದ್ವು. ಆದ್ರೆ ಈಗ ಹೇಗಾದ್ರು ಮಾಡಿ ನಮ್ ಸಿನಿಮಾ ನೂರು ಕೋಟಿ ಕಲೆಕ್ಷನ್ ಮಾಡಿದ್ರೆ ಸಾಕಪ್ಪಾ ಅಂತ ಬಿಟೌನ್ ಮಂದಿ ಕಣ್ ಕಣ್ ಬಿಡುತ್ತಿದ್ದಾರೆ. ಇರದ ಮಧ್ಯೆ ಬಾಲಿವುಡ್ ಖಾನ್ ಗಳಿಗೆ ಬಾಯ್ಕಾಟ್ ಅನ್ನೋ ಭೂತ ಬೆನ್ನಿಗೆ ಬಿದ್ದು ಕಾಡುತ್ತಿದೆ. ಬಾಲಿವುಡ್ ನಲ್ಲಿ ಬಾಯ್ಕಾಟ್ ಬೆಂಕಿ ಬಿರುಗಾಳಿ ಎದ್ದಿದೆ. ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಗೆ ಬಾಯ್ ಕಾಟ್ ಅಭಿಯಾನ ಬಿಸಿ ಮುಟ್ಟಿದೆ. ಹೀಗಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಅಮೀರ್ ಖಾನ್ ಸಿನಿಮಾ ವೃತ್ತಿಜೀವನದಲ್ಲೇ ಬಹುದೊಡ್ಡ ಲಾಸ್ ಆಗಿರೋ ಸಿನಿಮಾ ಅನ್ನೋ ಪಟ್ಟಿಗೆ ಸೇರಿದೆ. ಇದರ ಜೊತೆ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತಿದ್ದ ಸಲ್ಮಾನ್ ಖಾನ್ಗೆ ಈಗ 50 ಕೋಟಿ ಗಳಿಸೋ ಸಿನಿಮಾ ಮಾಡೋದಕ್ಕೂ ಆಗುತ್ತಿಲ್ಲ.