ಭಾರತದ ಮೋಸ್ಟ್ ಪಾಪ್ಯುಲರ್ ಸ್ಟಾರ್ ಇವರೇನಾ? ಯಶ್,ಪ್ರಭಾಸ್, ವಿಜಯ್,ರಜಿನಿ ಹಿಂದಿಕ್ಕಿದ್ರಾ ಶಾರುಖ್ ಖಾನ್?

ಸಕ್ಸಸ್ ಅನ್ನೋದು ಯಾರ ಆಸ್ತೀನು ಅಲ್ಲ. ಅದೃಷ್ಟ ಅನ್ನೋದು ಯಾರಿಗೆ ಯಾವಾಗ ಬೇಕಾದ್ರು ಸಿಗಬಹುದು. ಸದ್ಯಕ್ಕೆ ಇದೆ ಸುದ್ದಿ.  ಭಾರತದ ಮೋಸ್ಟ್ ಪಾಪ್ಯುಲರ್ ಸ್ಟಾರ್ ಯಾರು ಅನ್ನೋದು. ಆಫಕೋರ್ಸ್. ಯಾರಿಗೆ ದೊಡ್ಡ ಹಿಟ್ ಸಿನಿಮಾ ಸಿಕ್ಕಿರುತ್ತೋ ಅವರೇ ಫೇಮಸ್ ಹೀಗಂತ ಸಹಜವಾಗಿ  ಎಲ್ಲರು ಹೇಳ್ತಾರೆ. 
 

Share this Video
  • FB
  • Linkdin
  • Whatsapp

ಭಾರತದ ಮೋಸ್ಟ್ ಪಾಪ್ಯುಲರ್ ಸ್ಟಾರ್ ಪಟ್ಟಿಯನ್ನು ಓರ್ಮ್ಯಾಕ್ಸ್ ಮೀಡಿಯಾ ರಿಲೀಸ್ ಮಾಡಿದೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್(Shah Rukh Khan)ಬರ್ ಒನ್ ಸ್ಥಾನ ಪಡೆದಿದ್ದಾರೆ. ಸೌತ್ ನಟರಾದ ವಿಜಯ್ ಹಾಗೂ ಬಾಹುಬಲಿ ಪ್ರಭಾಸ್(Prabhas) ಹಿಂದಿಕ್ಕಿದ್ದಾರೆ.ಅದು ಕೆಜಿಫ್ ಗೆದ್ದ ವರ್ಷ ಆ ವರ್ಷ ಶಾರುಖ್ರನ್ನೇ ಹಿಂದಿಕ್ಕಿನಂ 1 ಸ್ಥಾನದಲ್ಲಿದ್ದರು ಯಶ್. ಆದ್ರೆ ಈ ವರ್ಷ ಒಂದೇ ವರ್ಷದಲ್ಲಿ ನಟ ಶಾರುಖ್ ಖಾನ್ 2 ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದಾರೆ. ಪಠಾಣ್, ಜವಾನ್ ಸಿನಿಮಾ ನೀಡಿ ಬಾಕ್ಸ್ ಆಫೀಸ್ ನಲ್ಲೂ ನಾನೇ ಕಿಂಗ್ ಅನ್ನೋದನ್ನು ತೋರಿಸಿಕೊಂಡಿದ್ದಾರೆ.ಎರಡನೇ ಸ್ಥಾನದಲ್ಲಿ ದಳಪತಿ ವಿಜಯ್ ಇದ್ದಾರೆ. ಲಿಯೋ ಸಿನಿಮಾ ಸಾಧ್ಯ ಅವರನ್ನು ಇನ್ನೂ ಪಾಪ್ಯುಲರ್ ಮಾಡಿದೆ. ತಮಿಳು ನಟ ದಳಪತಿ ವಿಜಯ್(Dalpati Vijay) ನಟ ವಿಜಯ್ ಇದೀಗ ಲಿಯೋ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿ ಆಗಿದ್ದಾರೆ. ಲಿಯೋ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಬಾಹುಬಲಿ ಸಿನಿಮಾ ಬಳಿಕ ಸತತ ಸೋಲುಗಳಿಂದ ಕಂಗೆಟ್ರು ನಟ ಪ್ರಭಾಸ್ ಜನಪ್ರಿಯತೆ ಕಡಿಮೆ ಆಗಿಲ್ಲ. ಮೋಸ್ಟ್ ಪಾಪ್ಯುಲರ್ ಪಟ್ಟಿಯಲ್ಲಿ ಪ್ರಭಾಸ್ 3ನೇ ಸ್ಥಾನದಲ್ಲಿದ್ದಾರೆ. ನಟನ ಬಹುನಿರೀಕ್ಷಿತ ಸಿನಿಮಾ ಸಲಾರ್ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಪ್ರಭಾಸ್ ಒಂದೇ ಒಂದು ಬಿಗ್ ಹಿಟ್ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ವೀಕ್ಷಿಸಿ: ಯಾರೀ ವರ್ತೂರು ಸಂತೋಷ್ ? ಹಿನ್ನೆಲೆ ಏನು? ಹಳ್ಳಿಕಾರ್‌ ಹಸುಗಳ ರಕ್ಷಕನಿಗೆ ಹುಲಿ ಉಗುರಿನ ಹೊಡೆತ..!

Related Video