ಯಾರೀ ವರ್ತೂರು ಸಂತೋಷ್ ? ಹಿನ್ನೆಲೆ ಏನು? ಹಳ್ಳಿಕಾರ್‌ ಹಸುಗಳ ರಕ್ಷಕನಿಗೆ ಹುಲಿ ಉಗುರಿನ ಹೊಡೆತ..!

ವರ್ತೂರು ಸಂತೋಷ್‌ಗೆ ಶೋಕಿನೇ ಮುಳುವಾಯ್ತಾ?
ಹುಲಿ ಉಗುರು ಧರಿಸಿದ್ದ ವರ್ತೂರುಗೆ ಸಂಕಷ್ಟ ಫಿಕ್ಸ್..?
ಮಾಡರ್ನ್ ರೈತ ಹಳ್ಳಿಕಾರ್ ಒಡೆಯ ಆಗಿದ್ದು ಹೇಗೆ..?
 

Share this Video
  • FB
  • Linkdin
  • Whatsapp

ಇರೋದು ಒಂದು ಲೈಫ್ ಎಂಜಾಯ್ ಮಾಡಬೇಕು ಎಂದು ವರ್ತೂರು ಸಂತೋಷ್(Varthur Santhosh)‌ ಬಿಗ್‌ಬಾಸ್‌ನಲ್ಲಿ ಹೇಳಿದ್ದರು.ಚಿನ್ನ ಅಂದ್ರೆ ನನಗೆ ತುಂಬಾ ಇಷ್ಟ. ವರ್ತೂರ್‌ನಲ್ಲೇ ವ್ಯವಸಾಯದ ಜಮೀನು ಇರೋ ಕುಟುಂಬ ನಮ್ಮದು. ಸಂತೆಯಲ್ಲಿ ವರ್ತೂರ್‌ ಫ್ಯಾಮಿಲಿಯವರು(Varthur Family) ಸುಂಕ ಎತ್ತುತ್ತಿದ್ದರಂತೆ. ಹಳ್ಳಿಕಾರ್ ಬ್ರಿಡ್ ಹಸುಗಳ ಮಾರಾಟ ಮಾಡೋದೇ ಅವರ ಉದ್ಯಮವಾಗಿತ್ತು. ನನ್ನ ಎಲ್ಲರೂ ಹಳ್ಳಿಕಾರ್ ಒಡೆಯ ಅಂತಾ ಕರೆಯೋರು ಎಂದು ವರ್ತೂರು ಸಂತೋಷ್‌ ಹೇಳಿದ್ದರು. ವ್ಯವಸಾಯ ಮಾಡಲು ದೊಡ್ಡ ಫಾರ್ಮ್‌ಹೌಸ್ ಕಟ್ಟಿದ್ದೇನೆ. ರೈತ ಅಂದ್ರೆ ಸಾಗಣಿನೇ ಎತ್ತಿಕೊಂಡು ಇರಬೇಕು ಅಂತಿಲ್ಲ, ಶೋಕಿನೂ ಮಾಡಬಹುದು.ಈ ರೀತಿಯಲ್ಲೂ ರೈತನಾಗಿ ಇರಬಹುದು ಅಂತಾ ತೋರಿಸಿದ್ದೀನಿ ಎಂದು ಹೇಳಿದ್ದಾರೆ. 

ಹಳ್ಳಿಕಾರ್ ತಳಿ ಉಳಿವಿಗಾಗಿ ನಾನು ಈ ಕೆಲಸ ಮಾಡ್ತೀದ್ದಿನಿ,ಸೌತ್ ಇಂಡಿಯಾಗೆಲ್ಲಾ ಹಳ್ಳಿಕಾರ್‌ಯೇ ಮೊದಲ ಬ್ರಿಡ್ ಹಸು,ನಾನು ಏನು ಚೈನ್ ಹಾಕುತ್ತೀನೋ ಎತ್ತುಗಳಿಗೂ ಅದನ್ನೇ ಮಾಡಿಸಿದ್ದ್ದೀನಿ.ಹಸುಗೆ ಬೆಳ್ಳಿ ಚೈನ್,ಕಾಲು ಖಡ್ಗ ಎಲ್ಲವನ್ನೂ ಹಾಕಿ ಮೆರವಣಿಗೆ ಮಾಡ್ತೀನಿ, ಎತ್ತಿನಗಾಡಿ ರೇಸ್‌ಮಾಡೋದ್ರಲ್ಲಿ ನಮ್ಮದು ಎತ್ತಿದ ಕೈ.ಲೈಫ್ ಇರೋವರಗೂ ಎಂಜಾಯ್ ಮಾಡಬೇಕು ಅನ್ನೋದೆ ಉದ್ದೇಶ ಎಂದು ಸಂತೋಷ್ ಬಿಗ್‌ಬಾಸ್‌ನಲ್ಲಿ(Bigg Boss) ಹೇಳಿಕೆ ನೀಡಿದ್ದರು.

ಇದನ್ನೂ ವೀಕ್ಷಿಸಿ: ಸ್ಮಶಾಣವಾಗಿದೆ ಇಸ್ರೇಲಿನ ಕಿಬುತ್ಸ್ ಊರು: ಮಕ್ಕಳ ಹತ್ಯೆ ಇಸ್ರೇಲ್ ಸರ್ಕಾರವನ್ನೇ ಅಣುಕಿಸಿತ್ತಾ..?

Related Video