ಒಂದೇ ಸಿನಿಮಾದಲ್ಲಿ ಯಶ್, ಪ್ರಭಾಸ್, ಜೂ.ಎನ್‌ಟಿಆರ್; ಹೊಂಬಾಳೆ ಫಿಲ್ಮ್ಸ್‌ನ ಹೊಸ ಸಾಹಸ
ಕನ್ನಡ ಸಿನಿಮಾರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಹೊಂಬಾಳೆ ಸಂಸ್ಥೆ. ಆರಂಭದಿಂದಲೂ ಬಿಗ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಕ್ವಾಲಿಟಿ ಮೇಕಿಂಗ್ ಹಾಗೂ ಸ್ಟಾರ್ ಕಾಸ್ಟ್ ನಲ್ಲಿ ಎಂದಿಗೂ ಕಾಂಪ್ರಮೈಸ್ ಆಗದ ಈ ಸಂಸ್ಥೆ, ಕೆಜಿಎಫ್ 2 ನಂತರ ಮತ್ತೊಂದು ದೊಡ್ಡ ಪ್ಯಾನ್ ಇಂಡಿಯಾ ಹಾಗೂ ಮಲ್ಟಿ ಸ್ಟಾರರ್ ಸಿನಿಮಾವನ್ನ ಪ್ಲಾನ್ ಮಾಡಿದೆ.
ಕನ್ನಡ ಸಿನಿಮಾರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಹೊಂಬಾಳೆ ಸಂಸ್ಥೆ. ಆರಂಭದಿಂದಲೂ ಬಿಗ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಕ್ವಾಲಿಟಿ ಮೇಕಿಂಗ್ ಹಾಗೂ ಸ್ಟಾರ್ ಕಾಸ್ಟ್ ನಲ್ಲಿ ಎಂದಿಗೂ ಕಾಂಪ್ರಮೈಸ್ ಆಗದ ಈ ಸಂಸ್ಥೆ, ಕೆಜಿಎಫ್ 2 ನಂತರ ಮತ್ತೊಂದು ದೊಡ್ಡ ಪ್ಯಾನ್ ಇಂಡಿಯಾ ಹಾಗೂ ಮಲ್ಟಿ ಸ್ಟಾರರ್ ಸಿನಿಮಾವನ್ನ ಪ್ಲಾನ್ ಮಾಡಿದೆ. ಈ ಚಿತ್ರದ ಸ್ಟಾರ್ ಕಾಸ್ಟ್ ನಿಜಕ್ಕೂ ಶಾಕಿಂಗ್ ಆಗಿದೆ ಸ್ಟಾರ್ ಲಿಸ್ಟ್ ಕೇಳಿದ್ರೆ ಖುಷಿಯ ಜೊತೆಗೆ ಆಶ್ಚರ್ಯವೂ ಆಗುತ್ತೆ. ಈ ಚಿತ್ರದಲ್ಲಿ ಟಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಪ್ರಭಾಸ್ , ಜ್ಯೂ ಎನ್ ಟಿ ಆರ್ ಹಾಗೂ ಕನ್ನಡದ ನ್ಯಾಷನಲ್ ಸ್ಟಾರ್ ರಾಕಿಂಗ್ ಸ್ಟಾರ್ ಕೂಡ ಇರಲಿದ್ದಾರೆ. ಸದ್ಯ ಹೊಂಬಾಳೆ ಸಂಸ್ಥೆಯ ಬಳಿ ಯಶ್, ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಲ್ ಶೀಟ್ ಇದೆ. ಇನ್ನು ಜ್ಯೂ ಎನ್ ಟಿ ಆರ್ ಮುಂದಿನ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಾರೆ. ಹಾಗಾಗಿ ಈ ಮೂವರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದು ಹೊಂಬಾಳೆಗೆ ದೊಡ್ಡ ವಿಷಯವಲ್ಲ.