Asianet Suvarna News Asianet Suvarna News

‘ಜವಾನ್’ ಫೈಟ್ ರೀಕ್ರಿಯೇಟ್ ಮಾಡಿದ ಫ್ಯಾನ್: ಕಾಂತಾರಾ 2 ಸೀಕ್ರೆಟ್ ಬಿಚ್ಚಿಟ್ಟ ರಾಜ್ ಬಿ ಶೆಟ್ಟಿ!

ಶಾರುಖ್ ಖಾನ್ರ 'ಜವಾನ್' ಸಿನಿಮಾದ ಫೈಟ್ ದೃಶ್ಯವೊಂದನ್ನು ಕೆಲ ಯುವಕರು ಮೊಬೈಲ್ ಬಳಸಿ ಮರುಸೃಷ್ಠಿ ಮಾಡಿದ್ದು, ಸ್ವತಃ ಶಾರುಖ್ ಖಾನ್ ಭೇಷ್ ಎಂದಿದ್ದಾರೆ. 

ಶಾರುಖ್ ಖಾನ್ರ 'ಜವಾನ್' ಸಿನಿಮಾದ ಫೈಟ್ ದೃಶ್ಯವೊಂದನ್ನು ಕೆಲ ಯುವಕರು ಮೊಬೈಲ್ ಬಳಸಿ ಮರುಸೃಷ್ಠಿ ಮಾಡಿದ್ದು, ಸ್ವತಃ ಶಾರುಖ್ ಖಾನ್ ಭೇಷ್ ಎಂದಿದ್ದಾರೆ. ಮತ್ತು ಕಾಂತಾರಾ 2 ಸೀಕ್ರೆಟ್ ಬಿಚ್ಚಿಟ್ಟ ರಾಜ್ ಬಿ ಶೆಟ್ಟಿ: ರಾಜ್ ಬಿ. ಶೆಟ್ಟಿ 'ಕಾಂತಾರ-2' ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡರು. ಅಂದಾಜು 100 ಕೋಟಿ ರೂ. ಬಜೆಟ್ ಎಂದು ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ವೀಡಿಯೋ ಇದೀಗ ವೈರಲ್ ಆಗಿದೆ.

ಈ ಸಿನಿಮಾ ನೋಡಿದವರಿಗೆ ಶುರು ಆಯ್ತು 2 ಅಭಿಪ್ರಾಯ: ಸಪ್ತಮಿ ಗೌಡ, ಪಲ್ಲವಿ ಜೋಶಿ, ನಾನಾ ಪಾಟೇಕರ್, ನಿವೇದಿತಾ ಭಟ್ಟಾಚಾರ್ಯ, ರೈಮಾ ಸೇನ್, ಗಿರಿಜಾ ಓಕ್, ಅನುಪಮ್ ಖೇರ್ ನಟನೆಯ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ರಿಲೀಸ್ ಆಗಿದೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಎರಡು ವಾದಗಳಿವೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಇಷ್ಟಪಡದವರು ಈಗ ಈ ಸಿನಿಮಾವನ್ನು ನೋಡದೆ ಇದೊಂದು ಪ್ರೊಪಗಂಡ ಸಿನಿಮಾ ಎಂದು ಹೇಳುತ್ತಿದ್ದಾರೆ. ಎಷ್ಟೋ ವೀಕ್ಷಕರು ಥಿಯೇಟರ್ನಲ್ಲಿ ಈ ಸಿನಿಮಾ ನೋಡಿ ಹೆಮ್ಮೆಯಿಂದ ಹೊರಗಡೆ ಬಂದರೆ, ಇನ್ನೂ ಕೆಲವರು ಸಿನಿಮಾದಲ್ಲಿ ಹೇಳಿರೋದು ಸರಿ ಇಲ್ಲ ಎಂದು ದೂಷಿಸುತ್ತಿದ್ದಾರೆ. 

Video Top Stories