Duniya Vijay Telugu Film: ಟಾಲಿವುಡ್‌ನಲ್ಲಿ ವಿಲನ್ ಆಗಿ ದುನಿಯಾ ವಿಜಯ್ ಎಂಟ್ರಿ

ದುನಿಯಾ ವಿಜಯ್.. ಈಗ ಸ್ಯಾಂಡಲ್ವುಡ್ ಸಲಗ ಅಂತಲೇ ಫೇಸಮ್. ಸಲಗ ಸಿನಿಮಾದಲ್ಲಿ ಸಿಕ್ಕ ಸಕ್ಸಸ್ ವಿಜಯ್ರನ್ನ ಮತ್ತೊಮ್ಮೆ ಚಿತ್ರರಂಗದಲ್ಲಿ ಎಲ್ಲರೂ ಕೊಂಡಾಡುವಂತೆ ಮಾಡಿದೆ. ಸಲಗ ಸಿನಿಮಾ ಬಳಿಕ ವಿಜಯ್ ಮುಂದೇನ್ ಮಾಡ್ತಾರೆ ಅನ್ನೋ ನಿರೀಕ್ಷೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರ ದುನಿಯಾ ವಿಜಯ್ರ ಈ ಹೊಸ ಅವತಾರ. ಗಡ್ಡ ಮೀಸೆ ಬಿಟ್ಟು ಸಾಲ್ಟ್ & ಆ್ಯಂಡ್ ಪೆಪ್ಪರ್ ಲುಕ್ನಲ್ಲಿ ಮಿಂಚುತ್ತಿದ್ದಾರೆ. ಸಲಗನ ನಯಾ ಲುಕ್ ಹಿಂದಿನ ಸೀಕ್ರೇಟ್ ಏನು ಬಗ್ಗೆ ಈಗ ಕುತೂಹಲ ಮೂಡಿದೆ.

Share this Video
  • FB
  • Linkdin
  • Whatsapp

ಮೊದಲ ನಿರ್ದೇಶನದ್ಲಲೇ ದುನಿಯಾ ವಿಜಯ್ಗೆ ಬಂಪರ್ ಲಾಟರಿ ಹೊಡೆದಿದೆ. ಸಲಗ ಬಳಿಕ ದುನಿಯಾ ವಿಜಯ್‌ಗೆ ಮತ್ತೊಂದು ಅದೃಷ್ಟದ ಬಾಗಿಲು ತೆರೆದಿದೆ. ದುನಿಯಾ ವಿಜಯ್‌ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ದುನಿಯಾ ವಿಜಯ್‌ ಹೊಸ ಲುಕ್ಕೇ ಇದು. ಉದ್ದನೆ ಬಿಳಿ ಗಡ್ಡ, ಮೀಸೆ ಬಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೆಲುಗು ಚಿತ್ರರಂಗಕ್ಕೆ ವಿಲನ್ ಆಗಿ ಎಂಟ್ರಿ ಕೊಟ್ಟ ದುನಿಯಾ ವಿಜಯ್!?

ಇದು ದುನಿಯಾ ವಿಜಯ್ ಸಿನಿಮಾ ಜರ್ನಿಯಲ್ಲಿ ವಿಭಿನ್ನ ಪ್ರಯೋಗ. ಯಾಕೆಂದರೆ ವಿಜಯ್‌ ತಮ್ಮ ಸಿನಿ ಜರ್ನಿಯಲ್ಲಿ ಹೊಸ ಸಾಹಸಕ್ಕೆ ಅಣಿಯಾಗ್ತಿದ್ದಾರೆ. ಯಾಕಂದ್ರೆ ಬಾಲಯ್ಯನ ಸಿನಿಮಾದಲ್ಲಿ ವಿಜಯ್ ಖಳನಾಯಕನ ರೋಲ್ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಎದುರಿಗೆ ಕನ್ನಡದ ನಟ ದುನಿಯಾ ವಿಜಯ್ ಅಬ್ಬರಿಸಲಿದ್ದಾರೆ. ಆದರೆ ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಇನ್ನು ಹೊರ ಬಂದಿಲ್ಲ. 
ವಿಜಯ್ ಮಾಸ್ ಲುಕ್ ಹಿಂದಿನ ಗುಟ್ಟು ತೆಲುಗು ಸಿನಿಮಾ ಅನ್ನೋದು ಕನ್ಫರ್ಮ್. ಈ ಸಿನಿಮಾಪಕ್ಕಾ ಮಾಸ್ ಎಂಟರ್ಟೈನರ್ ಆಗಿರಲಿದೆ. ರಾಯಲಸೀಮಾದಲ್ಲಿ ನಡೆಯುವ ಕಥೆ ಸಿನಿಮಾದಲ್ಲಿದ್ದು, ವಿಜಯ್ ರಾಯಲಸೀಮಾದ ಖಡಕ್ ವಿಲ್ ರೋಲ್ ಮಾಡುತ್ತಿದ್ದಾರಂತೆ. ಹೀಗಾಗಿ ವಿಜಯ್ ಸಾಲ್ಟ್ ಆ್ಯಂಡ್ ಪೆಪ್ಪರ್ ಸ್ಟೈಲ್ನಲ್ಲಿ ತಮ್ಮ ರೋಲ್ಗಾಗಿ ಸಿದ್ಧರಾಗುತ್ತಿದ್ದಾರೆ. 

Related Video