Asianet Suvarna News Asianet Suvarna News

Mollywood: ಪಕ್ಕದ ಮಾಲಿವುಡ್‌ನಲ್ಲಿ ಬಂಗಾರದ ಬೆಳೆ! ಸ್ಯಾಂಡಲ್‌ವುಡ್‌ ಬೆಳವಣಿಗೆ ಅದೋಗತಿ!

ಇಡೀ ಭಾರತದಲ್ಲೇ ಬಹಳ ಕಡಿಮೆ ಮಾರ್ಕೆಟ್ ಹೊಂದಿರೋ ಚಿತ್ರರಂಗವೆಂದರೆ ಮಲಯಾಳಂ ಇಂಡಸ್ಟ್ರಿಯೆಂದು ಒಂದು ಕಾಲಕ್ಕೆ ಕೀಳರಿಮೆಯಿಂದ ನೋಡಲಾಗುತ್ತಿತ್ತು. 

ಅತಿಹೆಚ್ಚು ವಯಸ್ಕರ ಸಿನಿಮಾ ಮಾಡೊ ಸೌತ್ ಚಿತ್ರರಂಗವೆಂದರೆ ಮಾಲಿವುಡ್(Mallywood) ಮಲ್ಲೂ ಸಿನಿಮಾಗಳೆಂದು ಅವಹೇಳನ ಮಾಡುತ್ತಿದ್ದ ಕಾಲ ಹೋಯ್ತು. ಈಗ ಕಾಲ ಬದಲಾಗಿದೆ. ಸಣ್ಣ ಬಜೆಟ್‌ನ  ಸೈರಾಟ್ ಪುಲಿಮೊರಗನ್ ನಂತಹ ಚಿತ್ರಗಳು 100 ಕೋಟಿಗೂ ಹೆಚ್ಚುಗಳಿಕೆ ಕಂಡು ಇತಿಹಾಸವನ್ನು ತಲೆಕೆಳಗು ಮಾಡಿವೆ.ಪುಟ್ಟ ರಾಜ್ಯ ಕೇರಳ(Kerala) ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡುತ್ತಿದೆ. ತುಂಬಾ ಚಿಕ್ಕ ಬಜೆಟ್‌ನ ಸಿನಿಮಾಗಳನ್ನು ಮಾಡಿಯೇ ಮಾಲಿವುಡ್ 4ತಿಂಗಳಲ್ಲಿ 1000 ಕೋಟಿಯ ಸಿನಿಮಾ ವ್ಯವಹಾರ ಮಾಡಿದೆ. ತುಂಬಾ ಚಿಕ್ಕ ಬಂಡವಾಳ ಹಾಕಿ ದೊಡ್ಡ ಲಾಭ ಬಾಚುವ ಕಲೆಯನ್ನು ಮಲಯಾಳಂ ಸಿನಿಮಾ ಇಂಡಸ್ಟ್ರಿಯಿಂದ(Malayalam film industry) ಕಲಿಯಬಹುದು. ಮಾಲಿವುಡ್‌ನ ಕೆಲವೊಂದು ರೀಸೆಂಟ್ ಸಿನಿಮಾಗಳು ನಿರೀಕ್ಷೆಯನ್ನೂ ಮೀರಿ ಲಾಭ ಮಾಡಿವೆ. ಇತ್ತೀಚೆಗೆ ತೆರೆಕಂಡ ಮಲಯಾಳಂ 'ಸೂಪರ್ ಸ್ಟಾರ್' ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಆಡುಜೀವಿತಂ' ಬಾಕ್ಸ್ ಆಫೀಸ್ನಲ್ಲಿ 175 ಕೋಟಿ ಕಮಾಯಿ ಮಾಡಿದೆ. ಬೆಂಜಮಿನ್ ಅವರ ಆಡು ಜೀವಿದಂ ಕಾದಂಬರಿಯನ್ನು ಆಧರಿಸಿ, ಬ್ಲೆಸ್ಸಿ ಬರೆದು ನಿರ್ದೇಶಿಸಿದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೃಥ್ವಿರಾಜ್ ನಜೀಬ್ ಎಂಬ ಅನಿವಾಸಿ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಇದು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಅವಧಿ ಎಂದು ಪರಿಗಣಿಸಲ್ಪಟ್ಟಿದೆ. ಇತ್ತೀಚೆಗಷ್ಟೇ 100 ಕೋಟಿ ರೂ.ಗಳ ಗಡಿ ದಾಟಿದ ಚಿತ್ರಗಳ ವರಮಾನದ ಉತ್ತಮ ಪಾಲು ಕೇರಳದ ಹೊರಗಿನಿಂದ ಬಂದಿದೆ. 

ಇದನ್ನೂ ವೀಕ್ಷಿಸಿ:  Rachana Rai in Devil: ದರ್ಶನ್‌ರ 'ಡೆವಿಲ್'ಗೆ ಸಿಕ್ಕಳು ಸುಂದರಿ! ಯಾರೀ ಈ ತುಳು ನಾಡ ಕುವರಿ?